ಮೊಳಕಾಲ್ಮೂರು ಸಿಲ್ಕ್‌ಸಿಟಿ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ಡಾ. ಪಿ.ಎಂ. ಮಂಜುನಾಥ ಮಾತನಾಡಿ, ನೆರೆಯ ಆಂಧ್ರ ಮತ್ತು ತಮಿಳುನಾಡಿನ ವಿದ್ಯುತ್ ಮಗ್ಗಗಳ ಮೂಲಕ ತಯಾರಾಗುವ ಬನಾರಸ್, ಕಾಂಚೀಪುರಂ, ಧರ್ಮಾವರಂ ಸೀರೆಗಳಿಗೆ ಪ್ರಬಲ ಸ್ಪರ್ಧೆ ನೀಡುತ್ತ ಜನಮನ್ನಣೆ ಪಡೆದುಕೊಂಡಿದೆ. ಪಾರಂಪರಿಕವಾಗಿ ಬಂದಿರುವ ಮೊಳಕಾಲ್ಮೂರು ರೇಷ್ಮೆ ಸೀರೆ ನೈಪುಣ್ಯದಲ್ಲಿ ರಾಷ್ಟ್ರೀಯ ಪ್ರಶಸ್ತಿಗೂ ಭಾಜನವಾಗಿದೆ ಎಂದರು