ಗುಣಮಟ್ಟದ ಗೊಬ್ಬರ, ಬೀಜ ಮಾರಾಟ ಮಾಡಿ

ಚಳ್ಳಕೆರೆಯ ಪಾವಗಡ ರಸ್ತೆ ಮಾರ್ಗದ ಗೊಬ್ಬರ, ಬಿತ್ತನೆ ಬೀಜ ಮತ್ತು ಔಷಧಿ ಮಾರಾಟದ ಅಂಗಡಿಗಳಿಗೆ ಭಾನುವಾರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಟಿ. ರಮೇಶ್ ಭೇಟಿ ನೀಡಿ ಪರವಾನಗಿ ದಾಖಲೆಗಳನ್ನು ಪರಿಶಿಲಿಸಿದರು.
ಚಳ್ಳಕೆರೆಯ ಪಾವಗಡ ರಸ್ತೆ ಮಾರ್ಗದ ಗೊಬ್ಬರ, ಬಿತ್ತನೆ ಬೀಜ ಮತ್ತು ಔಷಧಿ ಮಾರಾಟದ ಅಂಗಡಿಗಳಿಗೆ ಭಾನುವಾರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಟಿ. ರಮೇಶ್ ಭೇಟಿ ನೀಡಿ ಪರವಾನಗಿ ದಾಖಲೆಗಳನ್ನು ಪರಿಶಿಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಎಸ್.ಟಿ. ರಮೇಶ್ ಸೂಚನೆ ಅಂಗಡಿಗಳಿಗೆ ಭೇಟಿ
  • ಪರವಾನಗಿ ದಾಖಲೆಗಳ ಪರಿಶೀಲನೆ
ಚಳ್ಳಕೆರೆ: ರೈತರಿಗೆ ಗುಣಮಟ್ಟದ ಗೊಬ್ಬರ, ಬೀಜ ಮಾರಾಟ ಮಾಡಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಡಾ. ಎಸ್.ಟಿ. ರಮೇಶ್ ಹೇಳಿದರು.
ನಗರದ ಪಾವಗಡ ರಸ್ತೆಯ ಗೊಬ್ಬರ, ಬಿತ್ತನೆ ಬೀಜ ಮತ್ತು ಔಷಧಿ ಮಾರಾಟದ ಅಂಗಡಿಗಳಿಗೆ ಭಾನುವಾರ ಭೇಟಿ ನೀಡಿ ಸಲಹೆ, ಸೂಚನೆಗಳನ್ನು ನೀಡಿದರು.
ಇಲಾಖೆಯಿಂದ ತಾಲೂಕಿನಲ್ಲಿ 115 ಅಂಗಡಿಗಳು ಪರವಾನಗಿ ಪಡೆದಿವೆ. ಪರವಾನಗಿ ಪತ್ರ ಮತ್ತು ಬಿತ್ತನೆ ಬೀಜಗಳ ದರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ರೈತರು ಖರೀದಿಸುವ ಗೊಬ್ಬರ, ಬೀಜ ಮತ್ತು ಔಷಧಿಗಳಿಗೆ ಅಧಿಕೃತ ಜಿಎಸ್‌ಟಿ ಇರುವ ಬಿಲ್ ನೀಡಬೇಕು. ಖರೀದಿ ರಸೀದಿಯಲ್ಲಿ ರೈತರ ಸಹಿ ಪಡೆದುಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ಎಂಆರ್‌ಪಿ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದು ಸೂಚಿಸಿದರು.
ತಾಲೂಕಿಗೆ ಬೇಕಾಗಿರುವಷ್ಡು ಯೂರಿಯಾ ದಾಸ್ತಾನಿದೆ. ರೈತರು ಆತಂಕ ಪಡುವ ಆಗತ್ಯವಿಲ್ಲ. ಬೆಳೆಗಳಿಗೆ ರಸಾಯನಿಕ ಡಿಎಪಿ ಬದಲು, ನ್ಯಾನೋ ಗೊಬ್ಬರ ಬಳಕೆ ಮಾಡಬೇಕು ಎಂದು ರೈತರಿಗೆ ತಿಳಿಸಿದರು.
ಶೇಂಗಾ ಬೆಲೆ ಕಡಿಮೆ: ಮುಂಗಾರು ಶೇಂಗಾ ಬಿತ್ತನೆಗೆ ನಿಗದಿತ ಗುರಿಯಂತೆ ದಾಸ್ತಾನು ಮಾಡಿಕೊಂಡು ರೈತರಿಗೆ ವಿತರಿಸಲಾಗುತ್ತಿದೆ. ಆರಂಭದಲ್ಲಿ ಸರ್ಕಾರ ಒಂದು ಕ್ವಿಂಟಾಲ್ಗೆ 11,300 ರೂ. ದರ ನಿಗದಿಪಡಿಸಿತ್ತು. ಕ್ಷೇತ್ರದ ಶಾಸಕ ರಘುಮೂರ್ತಿ ಅವರು ಬೆಲೆ ಕಡಿಮೆ ಮಾಡಲು ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ಕ್ವಿಂಟಾಲ್ಗೆ 500 ರೂ. ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.
ಈಗ ಎಸ್ಸಿ, ಎಸ್ಟಿ ರೈತರಿಗೆ 2100ರೂ. ಸಬ್ಸಿಡಿ ಕಳೆದು 8700 ರೂ.ಗೆ, ಸಾಮಾನ್ಯ ವರ್ಗದ ರೈತರಿಗೆ 1400 ರೂ. ಸಬ್ಸಿಡಿ ಕಳೆದು 9400 ರೂ.ಗೆ ಒಂದು ಕ್ವಿಂಟಾಲ್ ಬಿತ್ತನೆ ಶೇಂಗಾ ವಿತರಿಸಲಾಗುತ್ತದೆ. ನಗರದ ಎಪಿಎಂಸಿ ಮಳಿಗೆ, ತಳಕು, ನಾಯಕನಹಟ್ಟಿ ಮತ್ತು ಪರಶುರಾಮಪುರ ಹೋಬಳಿ ಕೇಂದ್ರಗಳ ಕೃಷಿ ಇಲಾಖೆ ಕಚೇರಿಗಳಲ್ಲಿ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net