ಹೊಳಲ್ಕೆರೆಯಲ್ಲಿ ಶನಿವಾರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, ಪಂಪ್ ಹಾಗೂ ಮೋಟಾರ್‌ನ್ನು ಶಾಸಕ ಡಾ.ಎಂ. ಚಂದ್ರಪ್ಪ ವಿತರಿಸಿದರು. ಕುಮಾರಣ್ಣ, ಮರುಳಸಿದ್ದಪ್ಪ, ರಾಜಗೋಪಾಲ್, ಸಾತ್ವಿಕ್ ಇತರರು ಇದ್ದರು. Facility
ಹೊಳಲ್ಕೆರೆ: ಸರ್ಕಾರದಿಂದ ದೊರೆಯುವ ಸೌಲಭ್ಯ ಬಳಸಿಕೊಂಡು ಸ್ವಾವಲಂಬಿಗಳಾಗುವಂತೆ ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು. Facility
ನಗರದಲ್ಲಿ ಶನಿವಾರ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, ಗಂಗಾ ಕಲ್ಯಾಣ ಯೋಜನೆಯಡಿ ಪಂಪ್ ಹಾಗೂ ಮೋಟಾರ್ ವಿತರಿಸಿ ಮಾತನಾಡಿದರು.
ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳು ಸೌಲಭ್ಯವನ್ನು ಬಳಸಿಕೊಂಡು ಜಮೀನು ಅಭಿವೃದ್ಧಿ ಮಾಡಿಕೊಂಡು ಆರ್ಥಿಕ ಸಬಲರಾಗಿ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ತಾಲೂಕಿನಲ್ಲಿ ಶಾಲಾ ಕಾಲೇಜು, ಆಸ್ಪತ್ರೆ, ಸಿಸಿ ರಸ್ತೆ ಹಾಗೂ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಮತ ನೀಡಿದ ಜನರ ಸೇವೆಗಾಗಿ ಶ್ರಮಿಸುವುದಾಗಿ ಹೇಳಿದರು.
ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಣ್ಣ, ಮರುಳಸಿದ್ದಪ್ಪ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜಗೋಪಾಲ್, ಸಾತ್ವಿಕ್ ಇತರರು ಇದ್ದರು.