ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎನ್. ಮಂಜುನಾಥ ಮಾತನಾಡಿ, ಸೀತಾ ರಾಘವ ಬ್ಯಾಂಕ್ ಉತ್ತಮ ಆರ್ಥಿಕ ಸೌಲಭ್ಯ ಒದಗಿಸುತ್ತಿರುವ ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿದೆ. ಪ್ರಸಕ್ತ ವರ್ಷದಲ್ಲಿ ಬ್ಯಾಂಕ್ 120 ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸಿ 1.48ಕೋಟಿ ಲಾಭಗಳಿಸಿದೆ. ಅದ್ಯತಾ ವಲಯ ಮತ್ತು ಆರ್ಥಿಕ ದುರ್ಬಲರಿಗೆ ಹೆಚ್ಚಿನ ಆದ್ಯತೆ ನೀಡಿ ಸಾಲ ಸೌಲಭ್ಯ ನೀಡಲಾಗಿದೆ. ದುರ್ಬಲ ವರ್ಗಕ್ಕೆ 17 ಕೋಟಿ ರೂ, ಮಹಿಳೆಯರಿಗೆ 20 ಕೋಟಿ ರೂ. ಸಾಲ ನೀಡಲಾಗಿದೆ. ಶೇ.98 ರಷ್ಟು ಸಾಲ ವಸೂಲಾತಿಯಾಗಿದ್ದು, ಬ್ಯಾಂಕಿನ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಆದಿರಾಜಯ್ಯ, ಸದಸ್ಯರಾದ ನಾಗಲಾಂಬಿಕ ಕಲ್ಮಠ , ಟಿ.ಸಿ.ಪಾರ್ವತಮ್ಮ, ಶ್ರೀನಾಥ, ಪ್ರತಾಪ, ಪಾಪಯ್ಯ, ಕೃಷ್ಣಮೂರ್ತಿ, ಲಕ್ಷ್ಮೀ ರಂಗನಾಥ, ವೀಣಾ ಉಮೇಶ, ಕಲ್ಲೇಶ, ಗಿರೀಶ, ತಿಪ್ಪೇಸ್ವಾಮಿ ಇತರರಿದ್ದರು.