ಸಂಕ್ರಾAತಿ ಸಂಭ್ರಮಕ್ಕೆ ಕೋಟೆನಾಡು ಸಜ್ಜು

ಮಾರುಕಟ್ಟೆ ಬಳಿ ಕಬ್ಬು ಖರೀದಿಸುತ್ತಿರುವ ಸಾರ್ವಜನಿಕರು
ಮಾರುಕಟ್ಟೆ ಬಳಿ ಕಬ್ಬು ಖರೀದಿಸುತ್ತಿರುವ ಸಾರ್ವಜನಿಕರು
Published on

ಪ್ರಮುಖ ಮುಖ್ಯಾಂಶಗಳು

  • ಎಳ್ಳು-ಬೆಲ್ಲಕ್ಕೆ ಹೆಚ್ಚಿದ ಬೇಡಿಕೆ
  • ಖರೀದಿಸಲು ಮುಗಿಬಿದ್ದ ಜನ
  • ಮಾರುಕಟ್ಟೆಯಲ್ಲಿ ಮಂಡ್ಯ ಕಬ್ಬಿನ ರಾಶಿ
ಚಿತ್ರದುರ್ಗ: ಎಳ್ಳು-ಬೆಲ್ಲ ಹಂಚಿ ಸಂಭ್ರಮದಿAದ ಆಚರಿಸುವ, ಸ್ನೇಹ-ಬಾಂಧವ್ಯದ ಸಂದೇಶ ಸಾರುವ ಸಂಕ್ರಾAತಿಯನ್ನು ಬರ ಮಾಡಿಕೊಳ್ಳಲು ಕೋಟೆನಾಡಿನ ಜನ ಒಂದು ದಿನ ಮುಂಚಿತವಾಗಿಯೇ ಖರೀದಿ ಭರಾಟೆಯಲ್ಲಿ ನಿರತರಾಗಿz್ದÁರೆ. ಹೀಗಾಗಿ ಬುಧವಾರ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿ ಕಂಡುಬAದಿತು.
ಕ್ಯಾಲೆAಡರ್ ವರ್ಷಾರಂಭದ ಮೊದಲ ಹಬ್ಬ ಇದಾಗಿದ್ದು, ಈಗಾಗಲೇ ನಗರದ ಮಾರುಕಟ್ಟೆಗಳಿಗೆ ರಾಶಿ-ರಾಶಿ ಕಬ್ಬು, ಕುಂಬಳ ಕಾಯಿ, ಗೆಣಸು, ಕಡಲೆಕಾಯಿ, ಅವರೆಕಾಯಿ ಆಮದಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಮಾರಾಟ ಜೋರಾಗಿದೆ. ಬಿ.ಡಿ. ರಸ್ತೆ, ಸಂತೆಹೊAಡ, ಮೆದೇಹಳ್ಳಿ ರಸ್ತೆ, ಆನೆಬಾಗಿಲು, ಎಪಿಎಂಸಿಯ ಹೂವಿನ ಮಾರುಕಟ್ಟೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಗರವಷ್ಟೇ ಅಲ್ಲದೆ, ಗ್ರಾಮೀಣ ಭಾಗದ ಜನರು ಸಾಮಗ್ರಿಗಳನ್ನು ಖರೀದಿಸಲು ಹಲವೆಡೆ ಮುಗಿಬಿದ್ದಿದ್ದರು.
ಮಾರುಕಟ್ಟೆ ದರಗಳ ವಿವರ
ಕಳೆದ ಎರಡು ದಿನಗಳಿಂದ ಸಂತೆಹೊAಡ ಮಾರುಕಟ್ಟೆ ಬಳಿ ಐದಾರು ಲೋಡ್ ಕಬ್ಬು ಮಂಡ್ಯ, ಹಾಸನ, ಕುರುಬರಹಳ್ಳಿ ಸೇರಿ ಇತರ ಕಡೆಗಳಿಂದ ಆಮದಾಗುತ್ತಿದೆ. ವಿವಿಧೆಡೆಯಿಂದ ಕುಂಬಳಕಾಯಿ ಕೂಡ ಬಂದಿದೆ.
ಕಬ್ಬು: ಪ್ರತಿ ಜ¯್ಲೆಗೆ ೫೦ ರಿಂದ ೮೦ ರೂ.
ಕಡಲೆಕಾಯಿ (ಸಿಪ್ಪೆ ಸುಲಿದದ್ದು): ಪ್ರತಿ ಕೆ.ಜಿ.ಗೆ ೧೫೦ ರಿಂದ ೨೦೦ ರೂ.
ಅವರೆಕಾಯಿ: ೧೫೦-೨೦೦ ರೂ.
ಹಣ್ಣುಗಳು: ಸೇಬು (೧೨೦-೧೫೦ ರೂ.), ದ್ರಾಕ್ಷಿ (೧೪೦ ರೂ.), ಕಿತ್ತಳೆ (೧೦೦ ರೂ.), ದಾಳಿಂಬೆ (೧೫೦-೧೮೦ ರೂ.), ಬಾಳೆಹಣ್ಣು (೭೦ ರೂ.).
ಸಿದ್ಧ ಎಳ್ಳು-ಬೆಲ್ಲ: ಪ್ರತಿ ಕೆ.ಜಿ.ಗೆ ೨೪೦-೩೦೦ ರೂ.
ಮಡಕೆಗೆ ಬೇಡಿಕೆ, ಪುಷ್ಪಗಳ ದರ ಏರಿಕೆ
ಗ್ರಾಮೀಣ ಸೊಗಡಿನ ಸಂಕ್ರಾAತಿ ನಗರದಲ್ಲೂ ತನ್ನ ಸಂಪ್ರದಾಯ ಉಳಿಸಿಕೊಂಡು ಬಂದಿದೆ. ಹೊಸ ಮಡಕೆ ಖರೀದಿಸಿ ಒಲೆ ಹಚ್ಚಿ ಪೊಂಗಲï ತಯಾರಿಸುವುದು ವಾಡಿಕೆ. ಇದರಿಂದ ಮಡಕೆಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಬAತು. ಜೊತೆಗೆ ರಾಸುಗಳನ್ನು ಶೃಂಗರಿಸಲು ವಿವಿಧ ವಸ್ತುಗಳನ್ನು ಖರೀದಿಸಲು ರೈತರು ಮುಂದಾಗಿz್ದÁರೆ.
ಹಬ್ಬದ ಪ್ರಯುಕ್ತ ಹೂವಿನ ದರವೂ ಏರಿಕೆಯಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸೇವಂತಿ (೧೨-೧೪ ಮಾರಿಗೆ) ೧ ಸಾವಿರ ರೂ., ಕನಕಾಂಬರ ೧ ಸಾವಿರ ರೂ., ಬಟನ್ಸ್ ಕೆ.ಜಿ.ಗೆ ೨೫೦-೩೫೦ ರೂ. ವರೆಗೆ ಮಾರಾಟವಾಯಿತು. ಖಾಸಗಿ ಬಸ್ ನಿಲ್ದಾಣದ ಬಳಿ ದೊಡ್ಡ ಹಾರಗಳನ್ನು ೧ ಸಾವಿರದಿಂದ ೧೦ ಸಾವಿರ ರೂ. ವರೆಗೆ ಸಿದ್ಧಪಡಿಸಲಾಗಿತ್ತು.
ವಿಶೇಷ ಪೂಜೆ
ಸಂಕ್ರಾAತಿ ಅಂಗವಾಗಿ ಜ. ೧೫ರಂದು ಕೋಟೆನಗರಿಯ ನವದುರ್ಗೆಯರಾದ ಏಕನಾಥೇಶ್ವರಿ, ಬರಗೇರಮ್ಮ, ಉಚ್ಚಂಗಿಯಲ್ಲಮ್ಮ, ಕಣಿವೆ ಮಾರಮ್ಮ, ತ್ರಿಪುರಸುಂದರಿ ತಿಪ್ಪನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಿ,ದುರ್ಗಾಂಬಿಕಾ, ಮಲೆನಾಡು ಚೌಡೇಶ್ವರಿ, ಕೊ¯್ಲÁಪುರದ ಮಹಾಲಕ್ಷ್ಮಿ, ಅಂತರಘಟ್ಟಮ್ಮ, ಮಾಸ್ತಮ್ಮ, ಮೈಲಾರಮ್ಮ, ಬಡಕ್ಕಮ್ಮ, ಕಾಳಿಕಾ ಮಠೇಶ್ವರಿ, ಬೆಟ್ಟದ ಗಣಪತಿ, ಮೇಲುದುರ್ಗದ ಹಿಡಿಂಬೇಶ್ವರಿ, ಸಂಪಿಗೆ ಸಿದ್ಧೇಶ್ವರಿ, ಮದಕರಿ ಮಹಾಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಲಿದೆ. ನಗರದೊಳಗಿನ ದೇವಸ್ಥಾನಗಳಲ್ಲಿ ರಾತ್ರಿ ೯.೩೦ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net