ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ನೂತನ ಡಿಜಿಪಿ ಅಲೋಕ್‌ಕುಮಾರ್ ಅವರು ಇಲಾಖೆ ಕಾರ್ಯವೈಖರಿ ಲೋ ಪಗಳನ್ನು ಸರಿಪಡಿಸಿ ಸಮಗ್ರ ಸುಧಾರಣೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜೈಲುಗಳಲ್ಲಿ `ಕಾರಾಗೃಹ ಸುಧಾರಣೆ ಸಂಕಲ್ಪ' ಅಭಿಯಾನ ಆರಂಭಿಸಲಾಗಿದೆ.
ಜೈಲುಗಳಲ್ಲಿ ಗಾಂಜಾ ಸಹಿತ ನಶೆ ಪದಾರ್ಥಗಳು, ಅನುಮತಿಸದ ಆಹಾರ, ಮೊಬೈಲ್‌ಪೋನ್, ಎಲೆಕ್ಟಾçನಿಕ್ ಮತ್ತಿತರ ನಿಷೇಽತ ವಸ್ತುಗಳ ಪತ್ತೆ ಸಹಿತ ಸುಧಾರಣಾ ಕ್ರಮಗಳ ಜಾರಿಗೆ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕಾಗಿ ಜೈಲು ಅಽಕಾರಿ, ಸಿಬ್ಬಂದಿ ನಿಷೇಽತ ವಸ್ತುಗಳ ಪತ್ತೆಗೆ ತಂಡ ರಚಿಸಿಕೊಂಡು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.
ನಿಷೇಽತ ವಸ್ತುಗಳನ್ನು ಪತ್ತೆ ಹಚ್ಚಿದ ತಂಡಕ್ಕೆ ನಗದು ಪುರಸ್ಕಾರ ನೀಡಲಾಗುತ್ತದೆ. ಬೆಂಗಳೂರು, ಮೈಸೂರು, ಕಾರವಾರ, ಚಿತ್ರದುರ್ಗ ಸಹಿತ ನಾನಾ ಜೈಲುಗಳಲ್ಲಿ ಈ ತಂಡಗಳು ಶೋಧ ನಡೆಸುವುದರೊಂದಿಗೆ ಸ್ವಚ್ಛತೆಗೆ ಒತ್ತು ಕೊಡಲಾಗುತ್ತಿದೆ. ನಿಷೇಽತ ವಸ್ತು ಪತ್ತೆ ಹಚ್ಚಿದ ೨ ಕಾರಾಗೃಹಗಳ ತಂಡಗಳಿಗೆ ತಲಾ ೩೦ ಸಾವಿರ ರೂ. ನಗದು ಪುರಸ್ಕಾರ ಪ್ರಕಟಿಸಲಾಗಿದೆ ಹಾಗೂ ತಪ್ಪಿತಸ್ಥ ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆಯಂತೆ.
ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಮೇಲೂ ಹೊಣೆ: ನಿಷೇಽತ ವಸ್ತುಗಳು ಜೈಲಿನೊಳಗೆ ಬರಲು ಅಽಕಾರಿ, ಸಿಬ್ಬಂದಿ ಪ್ರಜ್ಞಾ ಪೂರ್ವಕ ವಾಗಿ ಸಹಕರಿಸಿದ್ದಾರೆ ಎಂದು ಗೊತ್ತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಈ ಮೊದಲು ನಿಷೇಽತ ವಸ್ತುಗಳು ಒಳಗಿದ್ದರೆ ಕಾರಾಗೃಹ ಅಽಕಾರಿ, ಸಿಬ್ಬಂದಿಯನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿತ್ತು. ಪರಪ್ಪನ ಅಗ್ರಹಾರ ಸಹಿತ ಪ್ರಮುಖ ಕಾರಾಗೃಹಗಳ ಗೇಟ್ ಮತ್ತು ಗೋಡೆಗಳನ್ನು ಕಾಯುವ ಕೆಎಸ್‌ಐಎಫ್ ಸಿಬ್ಬಂದಿ ಮೇಲೂ ಈ ನಿಟ್ಟಿನಲ್ಲಿ ಹೊಣೆ ಹೊರಿಸಲು ನಿರ್ಧರಿಸಲಾಗಿದೆ.
ರಿಸ್ಕ್ ಅಲೋಯನ್ಸ್ ಹೆಚ್ಚಳ:
ಪೊಲೀಸರಿಗೆ ರಿಸ್ಕ್ ಅಲೋಯನ್ಸ್ ಮಾಸಿಕ ೩ ಸಾವಿರ ರೂ.ಇದ್ದು, ಕಾರಾಗೃಹ ಸಿಬ್ಬಂದಿಯ ಒಂದು ಸಾವಿರ ರೂ.ಭತ್ಯೆ ಹೆಚ್ಚಳಕ್ಕೆ ಹಾಗೂ ಇಲಾಖೆ ೧೫ ವರ್ಷಗಳ ಹಳೆಯ ವಾಹನಗಳಿಗೆ ಮುಕ್ತಿ ಕೊಟ್ಟು ಹೊಸ ವಾಹನಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿಬ್ಬಂದಿ ಭರ್ತಿಗೂ ಕ್ರಮ ವಹಿಸಲಾಗುವುದು, ಪೊಲೀಸರಂತೆ ಕಾರಾಗೃಹ ಇಲಾಖೆಗೂ ಕ್ಯಾಂಟಿನ್ ವ್ಯವಸ್ಥೆ ಕಲ್ಪಿಸಲು ಡಿಜಿಪಿ ಮುಂದಾಗಿದ್ದಾರೆ.
ಕಮಾAಡ್ ಸೆಂಟರ್
ರಾಜ್ಯದ ಎಲ್ಲ ಕಾರಾಗೃಹಗಳ ಸಿಸಿ ಟಿವಿ ದೃಶ್ಯಾವಳಿ ವೀಕ್ಷಿಸಲು ಬೆಂಗಳೂರಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಇತರೆ ಜೈಲುಗಳ ದೃಶ್ಯಾವಳಿ ವೀಕ್ಷಣೆಗೆ ಸಂಬAಽಸಿದAತೆ ಸಾಫ್ಟ್ವೇರ್ ಅಪ್‌ಡೇಟ್ ನಡೆಯುತ್ತಿದೆ ಹಾಗೂ ದೃಶ್ಯಾವಳಿ ವೀಕ್ಷಣೆಗೆ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಯೋಗಾಭ್ಯಾಸ
ಕೈದಿಗಳ, ವಿಚಾರಣಾಽÃನ ಕೈದಿಗಳ ಮನ ಪರಿವರ್ತನೆಗೆ ನಿತ್ಯವೂ ಜೈಲಿನಲ್ಲಿ ಬೆಳಗ್ಗೆ ೭ರಿಂದ ೮ರವರೆಗೆ ಯೋಗ,ಧ್ಯಾನ ಇ ತ್ಯಾದಿ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಇದರ ವರದಿಯನ್ನು ಅದೇ ದಿನ ಮೇಲಽಕಾರಿಗಳಿಗೆ ಕಳಿಸಬೇಕಿದೆ.
ತೀವ್ರ ಅಪರಾಧ ಚಟುವಟಿಕೆಗಳಲ್ಲಿದ್ದವರು, ಎನ್‌ಡಿಪಿಎಸ್, ಸಣ್ಣಪುಟ್ಟ ಕೇಸ್‌ಗಳಲ್ಲಿ ಒಳ ಬಂದವರು ಹೀಗೆ ೪ ವಿಭಾಗಗಳಲ್ಲಿ ಕೈದಿಗಳನ್ನು ವಿಂಗಡಿಸಿ ಅವರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಲಾಗಿದೆ ಹಾಗೂ ಎಲ್ಲ ಜೈಲುಗಳಲ್ಲಿ ಕಾರ್ಯ ವೈಖರಿಗೆ ಸಂಬAಽಸಿದAತೆ ಅಽಕಾರಿಗಳ ವ್ಯಾಟ್ಸ್ಆ್ಯಪ್ ಗ್ರೂಪ್ ಕೂಡ ರಚಿಸಲಾಗಿದೆ ಎನ್ನಲಾಗಿದೆ.
ಹೊಸ ಶಸ್ತಾಸ್ತçಗಳ ಅಗತ್ಯ
ಬಹುತೇಕ ಕಾರಾಗೃಹಗಳಲ್ಲಿ ೪೦ ವರ್ಷಗಳಷ್ಟು ಹಳೆಯ ಶಸ್ತಾçಸ್ತçಗಳಿದ್ದು, ಅವುಗಳ ಬದಲಿಗೆ ಹೊಸದನ್ನು ಖರೀದಿಸಬೇಕಾಗಿದೆ. ಕೇವಲ ಲಾಠಿಯೊಂದಿಗೆ ಆತ್ಮರಕ್ಷಣೆ ಸಾಧ್ಯವೆ ಎಂದು ಕಾರವಾರ ಜೈಲಿನಲ್ಲಿ ಸಿಬ್ಬಂದಿ ಮೇಲೆ ಈಚೆಗೆ ನಡೆದ ಹಲ್ಲೆ ಘಟನೆಯನ್ನು ಉದಾಹರಿಸಲಾಗುತ್ತಿದೆ.
"
ಡಿಜಿಪಿ ಅವರ ನಿರ್ದೇಶನದ ಮೇರೆಗೆ ನಮ್ಮ ಜೈಲಿನಲ್ಲೂ ತಂಡ ರಚಿಸಿಕೊಂಡು ತೀವ್ರ ಶೋಧ ನಡೆಸಲಾಗಿದೆ. ಯಾವುದೇ ನಿಷೇಽತ ವಸ್ತುಗಳು ಪತ್ತೆ ಆಗಿಲ್ಲ. ಜೈಲಿನ ಹೊರ ಭಾಗದಲ್ಲಿ ಹೊಸನಾಮ ಫಲಕ, ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ.