ಕುರ್ಚಿ ಉಳಿಸಿಕೊಳ್ಳಲು ಸಾಧನಾ ಸಮಾವೇಶ

ಸಂಸದ ಗೋವಿಂದ ಎಂ. ಕಾರಜೋಳ
ಸಂಸದ ಗೋವಿಂದ ಎಂ. ಕಾರಜೋಳ
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್‌ನಲ್ಲೀಗ ಮೂರು ಬಣ
  • ಎಂಪಿ ಗೋವಿಂದ ಕಾರಜೋಳ ವಾಗ್ದಾಳಿ
  • ಸಿದ್ದರಾಮಯ್ಯ
ಚಿತ್ರದುರ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎದುರಾಗಿದೆ. ಹೀಗಾಗಿ ತುಮಕೂರಲ್ಲಿ ಸಾಧನಾ ಸಮಾವೇಶ ಮಾಡುತ್ತಿz್ದÁರೆ ಎಂದು ಸಂಸದ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಎAಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನಲ್ಲೀಗ ಮೂರು ಬಣಗಳಾಗಿವೆ. ದಲಿತ ಸಿಎಂ ಕೂಗು ಕೇಳಿಬರುತ್ತಿದೆ. ಕೇರಳ ಸಿಎಂ ಆಯ್ಕೆ ಬಳಿಕ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದರು.
ಕಳೆದ ಮೂರು ವರ್ಷಗಳಿಂದಲೂ ಸಿಎಂ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಿಲ್ಲ. ರಾಜ್ಯದಲ್ಲಿ ಯಾವ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ೪೮ ಸಾವಿರ ಕೋಟಿ ರೂ. ದುರುಪಯೋಗ ಮಾಡಿ ಮತಬ್ಯಾಂಕ್ ರಾಜಕಾರಣ ಮಾಡಿz್ದÁರೆ ಎಂದು ದೂರಿದರು.
ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ಆದರೆ, ಸರ್ಕಾರ ಏಳು ಸಾವಿರ ಮದ್ಯದ ಅಂಗಡಿ ತೆರೆದಿರುವುದೇ ದೊಡ್ಡ ಸಾಧನೆಯಾಗಿದೆ.
ಎಸ್ಟಿ ಸಮುದಾಯದವರ ಅಭಿವೃದ್ಧಿಗಾಗಿ ೨೪ ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎನ್ನುತ್ತಾರೆ. ಆದರೆ, ಅರ್ಹರಿಗೆ ತಲುಪುತ್ತಿಲ್ಲ. ಜನರಿಗೆ ಜಮೀನು, ಮನೆ, ರಸ್ತೆ ಯಾವ ಸೌಕರ್ಯವೂ ಸಿಕ್ಕಿಲ್ಲ. ಸಿದ್ದರಾಮಯ್ಯ ಹೆಸರಿಗಷ್ಟೇ ಅಹಿಂದ ನಾಯಕ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಆಸೆ ತೋರಿಸಿ ಅಽಕಾರಕ್ಕೆ ಬಂದು, ೭.೬೪ ಲಕ್ಷ ಕೋಟಿ ರೂ. ಸಾಲ ಮಾಡಿರುವುದೇ ಈ ಸರ್ಕಾರದ ಬೃಹತ್ ಸಾಧನೆ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೂ ಒತ್ತು ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದರು.
ಕೇAದ್ರ ಸರ್ಕಾರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಿ¯್ಲೆಯಲ್ಲಿ ೬ ವರ್ಷಗಳಿಂದ ಸ್ಥಗಿತಗೊಂಡಿದೆ. ಅರಣ್ಯ ಇಲಾಖೆ ಯ ಕ್ಲಿಯರೆನ್ಸ್ ಪಡೆದುಕೊಳ್ಳಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ಕೋಟೆನಾಡಿನ ೨೬೫ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.
ರಾಜ್ಯದ ೬೩೦ ಗ್ರಾಮಗಳಲ್ಲಿ ಅಂಗನವಾಡಿಗಳಿಗೆ, ಹಲವು ಶಾಲಾ-ಕಾಲೇಜುಗಳಿಗೆ ಸೂಕ್ತ ಕಟ್ಟಡಗಳಿಲ್ಲ. ಆಸ್ಪತ್ರೆಗಳಿಗೆ ಔಷಽ ಇಲ್ಲ. ಕೇಂದ್ರ ನೀಡಿದ ಮನೆಗಳನ್ನು ಕಟ್ಟಿಲ್ಲ. ಇಷ್ಟೆಲ್ಲ ಸಮಸ್ಯೆ ಮಧ್ಯೆ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಎಂದು ಪ್ರಶ್ನಿ ಸಿದರು.
ಉಳಿತಾಯ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಪೂರ್ವಜರಿಂದ ಬಂದ ಬಳುವಳಿ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿಸಿz್ದÁರೆ. ಈ ವಾಸ್ತವಗಳು ಗೊತ್ತಿಲ್ಲದೆ ಸುಖಾಸುಮ್ಮನೆ ಕಾಂಗ್ರೆಸ್ಸಿಗರು ಟೀಕಿಸುತ್ತಿರುವುದು ಖಂಡನೀಯ ಎಂದರು.
ಎAಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಜೆಪಿ ಜಿ¯್ಲÁಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮುಖಂಡ ರಾದ ಡಾ.ಸಿz್ದÁರ್ಥ್ ಗುಂಡಾರ್ಪಿ, ಎ.ಮುರಳಿ, ಜಿ.ಎಚ್.ಮೋಹನ್, ಪರಶುರಾಮï, ಸಂಪತ್, ವೆಂಕಟೇಶ್ ಯಾದವ್, ಚಾಲುಕ್ಯ ನವೀನ್, ನಾಗರಾಜ್, ರಾಜಣ್ಣ, ಶಶಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net