ತಿರಸ್ಕರಿಸುವವರೇ ಸತ್ಕರಿಸುವಷ್ಟು ಎತ್ತರಕ್ಕೆ ಬೆಳೆಯಿರಿ

 ಚಿತ್ರದುರ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ರವಿ ಡಿ. ಚೆನ್ನಣ್ಣನವರ್ , ಸಿ.ಎಸ್. ಷಡಾಕ್ಷರಿ, ವಿನಯಕುಮಾರ್, ಮಾಲತೇಶ್ ಮುದ್ದಜ್ಜಿ, ಬಸವರಾಜು ಇತರರಿದ್ದರು.
ಚಿತ್ರದುರ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ರವಿ ಡಿ. ಚೆನ್ನಣ್ಣನವರ್ , ಸಿ.ಎಸ್. ಷಡಾಕ್ಷರಿ, ವಿನಯಕುಮಾರ್, ಮಾಲತೇಶ್ ಮುದ್ದಜ್ಜಿ, ಬಸವರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ|
  • ರಾಜ್ಯ ಸರ್ಕಾರಿ ನೌಕರರ ಸಂಘದಿAದ ಪ್ರತಿಭಾ ಪುರಸ್ಕಾರ
  • ಪಾಲಕರ ಶ್ರಮ
ಚಿತ್ರದುರ್ಗ: ತಿರಸ್ಕರಿಸುವವರೇ ಮುಂದೊAದು ದಿನ ಸತ್ಕರಿಸುವಷ್ಟು ಎತ್ತರಕ್ಕೆ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ ನೀಡಿದರು.
ಮಹರ್ಷಿ ವಾಲ್ಮೀಕಿ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿAದ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಸರ್ಕಾರಿ ನೌಕರರ ಮಕ್ಕಳಿಗೆ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ಮಕ್ಕಳನ್ನು ವಿದ್ಯಾವಂತರನ್ನಾಗಿಸುವಲ್ಲಿ ಪಾಲಕರ ಶ್ರಮ ಹೆಚ್ಚಿದೆ. ಇದರೊಟ್ಟಿಗೆ ಉತ್ತಮ ಸಂಸ್ಕಾರ ಪಡೆದು ವಿಶ್ವದ ಉನ್ನತ ಕಂ ಪನಿಗಳಲ್ಲಿ ಅತ್ಯುತ್ತಮ ಸ್ಥಾನ ಅಲಂಕರಿಸಲು ಭಾರತೀಯರು ಮುಂದಾಗಬೇಕು. ಇಲ್ಲ, ಸ್ವಂತ ಕಂಪನಿ ತೆರೆದು ಉದ್ಯೋಗ ಸೃಷ್ಟಿ ಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ನೌಕರರೆಂದರೆ ಬರೀ ಕೆಲಸ, ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವುದಕ್ಕೆ ಸೀಮಿತವಲ್ಲ. ಪ್ರತಿಭಾವಂ ತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಸಂಘಟನೆಯೊAದಿಗೆ ಉತ್ತಮ ಚಟುವಟಿಕೆಯೊಂದಿಗೆ ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರವಿ ಡಿ. ಚೆನ್ನಣ್ಣವರ್ ಮಾತನಾಡಿ, ಪ್ರ ಸ್ತುತ ಬೆರಳ ತುದಿಯಲ್ಲೇ ಎಲ್ಲವನ್ನೂ ಪಡೆಯುವ ಕಾಲದಲ್ಲಿ ನಾವಿದ್ದೇವೆ. ಸರ್ಕಾರಿ ನೌಕರರು ತಮ್ಮ ಸೇವಾ ಅವಽಯಲ್ಲಿ ಅಶ ಕ್ತರು,ನೊಂದವರ ಕಷ್ಟಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಶೇ. ೩೫ರಷ್ಟು ಕೆಲಸ ಮಾಡಿದರೂ ಜನರ ದೃಷ್ಟಿಯಲ್ಲಿ ದೇವರಾ ಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಒತ್ತಡ, ಪಕ್ಷಪಾತಕ್ಕೆ ಒಳಗಾಗದೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ನಿಮ್ಮ ಕನಸುಗಳನ್ನು ಮಕ್ಕಳ ಮೇ ಲೆ ಹೇರದೆ ಅವರಿಗೆ ಇಷ್ಟವಾದುದನ್ನು ಕಲಿಯಲು, ಕ್ಷೇತ್ರ ಆಯ್ದುಕೊಳ್ಳಲು ಸಹಕರಿಸಿ. ಆಗ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾ ರೆ ಎಂದು ತಿಳಿಸಿದರು.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ನನಗೆ ಹೋರಾಟದಲ್ಲಿ ಸಿಕ್ಕ ಜಯಕ್ಕಿಂತಲೂ ಮಕ್ಕಳ ಪ್ರತಿಭಾಪುರಸ್ಕಾ ರ ತುಂಬಾ ಸಂತಸ ನೀಡಿದೆ. ಕಳೆದ ೭ ವರ್ಷದಿಂದ ೩ ಕೋಟಿ ರೂ. ವೆಚ್ಚದಲ್ಲಿ ರಾಜ್ಯದಾದ್ಯಂತ ಈ ಕಾರ್ಯಕ್ರಮ ನಡೆಸಿಕೊಂ ಡು ಬರಲಾಗುತ್ತಿದೆ ಎಂದು ತಿಳಿಸಿದರು.
ಬಹುತೇಕ ಸರ್ಕಾರಿ ನೌಕರರು ಮಧ್ಯಮ ವರ್ಗದವರಾಗಿದ್ದು, ಇತಿಮಿತಿಯಲ್ಲೇ ಸಾಗಬೇಕಿದೆ. ಮಕ್ಕಳ ಶಿಕ್ಷಣ ಮತ್ತು ವಿವಾಹ, ಕುಟುಂಬದ ಕನಸುಗಳನ್ನು ನನಸು ಮಾಡುವ, ಮನೆ ನಿರ್ಮಿಸುವುದು ಸೇರಿ ಹಲವು ಹೊಣೆಗಾರಿಕೆಗಳಿವೆ. ಇವೆಲ್ಲವನ್ನೂ ಪೂರೈಸಲು ಸಾಲ ಮಾಡಬೇಕಿದೆ. ಆದ್ದರಿಂದ ಹೆಚ್ಚು ಹೊರೆಯಾಗದಂತೆ ನೆರವಾಗುವ ಕಾರ್ಯ ಮಾಡಬೇಕಾಗಿದೆ ಎಂದರು.
ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇನ್‌ಸೈಟ್ ಐಎಎಸ್ ಸ್ಟಡಿ ಸೆಂಟರ್‌ನ ಸಂಸ್ಥಾಪಕ ನಿರ್ದೇ ಶಕ ಜಿ.ಬಿ. ವಿನಯಕುಮಾರ್, ಸಂಘದ ಜಿ¯್ಲÁಧ್ಯಕ್ಷ ಮಾಲತೇಶ್ ಮುದ್ದಜ್ಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜು, ಪದಾಽಕಾರಿಗಳಾದ ಬಿ. ಮಲ್ಲಿಕಾರ್ಜುನ, ಸಿ. ಸುರೇಶ್, ಸೋಮಶೇಖರಯ್ಯ, ಮೋಹನ್‌ಕುಮಾರ್, ಶ್ರೀನಿವಾಸ್, ಮಲ್ಲಿಕಾರ್ಜು ನ,ರಾಜಪ್ಪ,ಸಿ.ಟಿ. ವೀರೇಶ್, ರಮೇಶ್ ಇತರರಿದ್ದರು.
೫೨೮ ಮಂದಿಗೆ ಪುರಸ್ಕಾರ
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಕ್ರಮವಾಗಿ ಹೆಚ್ಚು ಅಂಕಗಳಿಸಿದ ಚಿತ್ರದುರ್ಗ ಜಿಲ್ಲೆಯ ೧೨೦-೧೪೧, ದಾವಣಗೆರೆ ಜಿಲ್ಲೆಯ ೧೨೫, ೧೪೨ ಮಂದಿ ವಿದ್ಯಾರ್ಥಿಗಳನ್ನು ಪುರಸ್ಕಿಸಲಾಯಿತು. ತಲಾ ೨ ಸಾವಿರ ರೂ. ನಗದು, ಬ್ಯಾಗ್, ಪ್ರಮಾಣ ಪತ್ರ, ಪುಸ್ತಕಗಳನ್ನು ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net