ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ೫ ಸಾವಿರ ಕೋಟಿ ರೂ.ಅನುದಾನ ಕಾಯ್ದಿರಿಸಬೇಕು ಹಾಗೂ ತಕ್ಷಣಕ್ಕೆ ೩೦೦ ಕೋಟಿ ರೂ.ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ, ಕೆ.ಸಿ. ವೀರೇಂದ್ರಪಪ್ಪಿ, ಎನ್.ವೈ. ಗೋಪಾಲಕೃಷ್ಣ ಅವರು ಬೆಂಗಳೂರಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಪೂರಕವಾಗಿ ೫ ಸಾವಿರ ಕೋಟಿ ರೂ.ಅನುದಾನವನ್ನು ಪ್ರಸಕ್ತ ಬಜೆಟ್‌ನಲ್ಲಿ ಮೀಸಲಿಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರಲ್ಲಿ ಸೋಮವಾರ ಮನವಿ ಸಲ್ಲಿಸಿದರು.
ಬಜೆಟ್ ಪೂರ್ವಭಾವಿ ಸಭೆ ವೇಳೆ ಸಿಎಂ ಭೇಟಿ ಮಾಡಿದ ಜಿಲ್ಲೆಯ ಜನಪ್ರತಿನಿಽಗಳು ಅನುದಾನ ಮೀಸಲು ಜತೆಗೆ ಫೆಬ್ರವರಿ ಅಂತ್ಯದೊಳಗೆ ಚಿತ್ರದುರ್ಗ ತಾಲೂಕು ಗೋನೂರು ಆಕ್ವಾಡೆಕ್‌ಗೆ ನೀರು ಹರಿಸಲು ತುರ್ತಾಗಿ ೩೦೦ ಕೋಟಿ ರೂ. ಬಿಡುಗಡೆ ಮಾಡುವಂತೆಯೂ ಕೋರಿದರು.
ಭದ್ರಾ ಜಲಾಶಯದಿಂದ ೨೯.೯೦ ಟಿಎಂಸಿ ನೀರು ಬಳಸಿ ಚಿತ್ರ ದುರ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ ೨,೨೫,೫೧೫ ಹೆಕ್ಟೇರ್ ಜಮೀನಿಗೆ ಈ ಯೋಜನೆಯಡಿ ಸೂಕ್ಷ÷್ಮನೀರಾವರಿ ಸೌಲಭ್ಯ ಕಲ್ಪಿಸುವುದರೊಂದಿಗೆ ೩೬೭ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.೫೦ರಷ್ಟು ನೀರು ತುಂಬಿಸಲು ಉದ್ದೇಶಿಸಲಾಗಿದೆ.
ಇದರಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯಿಂದ ಅಂದಾಜು ೧೫೨ ಕೆರೆಗಳನ್ನು ತುಂಬಿಸಲಾಗುತ್ತಿದೆ. ೨೧,೪೭೩ ಕೋಟಿ ರೂ.ವೆಚ್ಚದ ಪರಿಷ್ಕೃತ ಯೋಜನಾ ವರದಿಗೆ ರಾಜ್ಯಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕೇಂದ್ರ ಜಲಶಕ್ತಿ ಮಂತ್ರಾಲಯದ ನಿರ್ದೇಶನದಂತೆ ಇದನ್ನು ೨೧,೧೬೭ ಕೋಟಿ ರೂ.ಗೆ ಅಂತಿಮಗೊಳಿಸಲಾಗಿದೆ ಹಾಗೂ ಈವರೆಗೆ ಅಂದಾಜು ೧೧೪೦೯ ಕೋಟಿ ರೂ.ವೆಚ್ಚ ಮಾಡಲಾಗಿದೆ.
ಕಳೆದ ೫ ದಶಕಗಳಿಗೂ ಅಽಕ ಕಾಲದಿಂದ ಮಧ್ಯ ಕರ್ನಾಟಕದ ಬರ ಪೀಡಿತ ಪ್ರದೇಶದ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸತತ ಐದು ದಶಕಗಳ ಹೋರಾಟದ ಬಳಿಕ ಯೋಜನೆ ೨೦೦೮ರಿಂದ ಪ್ರಾರಂಭವಾಗಿದೆ. ಯೋಜನೆ ಅನುಷ್ಠಾನವಾದರೆ ಕೃಷಿ ಉತ್ಪನ್ನ ಇಳುವರಿ ೩-೪ ಪಟ್ಟು ಹೆಚ್ಚಾಗಲಿದೆ ಹಾಗೂ ಅಂತರ್ಜಲ ಮಟ್ಟವೂ ಅಽಕವಾಗಿ ಜನರಿಗೆ ಶುದ್ಧ ಕುಡಿವ ನೀರು ಲಭ್ಯವಾಗಲಿದೆ.
ಚಿತ್ರದುರ್ಗ ಶಾಖಾ ಕಾಲುವೆ ಸೊನ್ನೆ ಕಿ.ಮೀನಿಂದ ೧೧೪ ಕಿಮೀವರೆಗಿನ(ಗೋನೂರು ಅಕ್ವಾಡೆಕ್ಟ್)ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಫೆ.೨೮ ರೊಳಗೆ ಪ್ರಾಯೋಗಿಕವಾಗಿ ನೀರು ಹರಿಸಲು ವಿಶ್ವೇಶ್ವರಯ್ಯ ಜಲನಿಗಮ ನಿರ್ಧರಿಸಿದೆ. ಇದರಿಂದ ಕಡೂರು, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲೂಕುಗಳ ಅಂದಾಜು ೯೦ ಕೆರೆಗಳಿಗೆ ನೀರು ಒದಗಿಸಲು ಸಾಧ್ಯವಾಗಲಿದೆ.
ಕಳೆದ ೪ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಬ್ಬಿನಹೊಳಲು ಭೂ ಸಮಸ್ಯೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಗೆಹರಿಸಲಾಗಿದ್ದು, ಅನುದಾನ ಬಿಡುಗಡೆ ವಿಳಂಬದಿAದ ಪ್ರಸ್ತುತ ಪ್ರಾರಂಭವಾಗಿರುವ ಕಾಮಗಾರಿ ನಿಧಾನಗತಿಯಲ್ಲಿದೆ. ಜಿಲ್ಲೆಯಲ್ಲಿ ಈಗಾಗಲೇ ಕುಡಿವ ನೀರಿನ ಸಮಸ್ಯೆ ಕಾಣಿಸಲಾರಂಭಿಸಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ.
ಆದ್ದರಿಂದ ಈ ಕಾಮಗಾರಿಗೆ ೩೦೦ ಕೋಟಿ ರೂ. ಕೂಡಲೇ ಬಿಡುಗಡೆ ಮಾಡ ಬೇಕು ಹಾಗೂ ಯೋಜನೆಗೆ ಅಗತ್ಯವಿರುವ ೧೦ ಸಾವಿರ ಕೋಟಿ ರೂ.ಪೈಕಿ ೫ ಸಾವಿರ ಕೋಟಿ ರೂ.ಗಳನ್ನು ಈ ಬಜೆಟ್‌ನಲ್ಲಿ ಕಾಯ್ದಿರಿಸುವಂತೆ ಸಚಿವರು ಹಾಗೂ ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ, ಕೆ.ಸಿ. ವೀರೇಂದ್ರ ಪಪ್ಪಿ ಹಾಗೂ ಎನ್.ವೈ. ಗೋಪಾಲಕೃಷ್ಣ ಅವರು ಒತ್ತಾಯಿಸಿದರು.
ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಕುರಿತು ಸಚಿವರು,ಶಾಸಕರು ಸಿಎಂ ಗಮನ ಸೆಳೆದರು.