ಭದ್ರಾದಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಿ

ಬಿ.ಎ.ಲಿಂಗಾರೆಡ್ಡಿ
ಬಿ.ಎ.ಲಿಂಗಾರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ಜಲ ಸಂಪನ್ಮೂಲ ಸಚಿವ, ಜಿಲ್ಲೆ ಶಾಸಕರು ತಕ್ಷಣ ಗಮನ ಹರಿಸಲಿ
  • ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಲಿಂಗಾರೆಡ್ಡಿ ಆಗ್ರಹ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ
ಚಿತ್ರದುರ್ಗ: ಭದ್ರಾ ಜಲಾಶಯದಿಂದ ಲಿ-ï್ಟ ಮಾಡಿ ತುಮಕೂರು ಶಾಖಾ ಕಾಲುವೆ ಮೂಲಕ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸುವಂತೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ರಾಜ್ಯ ಸರ್ಕಾರವನ್ನು ಆಗ್ರಹಿ ಸಿದ್ದಾರೆ.
ಮುಂಗಾರು ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ಕಳೆದ ೨೦ ದಿನಗಳ ಹಿಂದೆ ನೀರಿನ ಮಟ್ಟ ೧೩೪ ಅಡಿಗೆ ಇಳಿದಿತ್ತು. ಆದರೆ, ಕಳೆದ ವಾರದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ.
ಜು.೯ ರಂದು ಜಲಾಶಯದ ನೀರಿನ ಮಟ್ಟ ೧೪೪ ಅಡಿ ದಾಟಿದ್ದು, ಒಳ ಹರಿವು ೧೬ ಸಾವಿರ ಕ್ಯೂಸೆಕ್ಸ್ ಇದೆ. ಇನ್ನೂ ಮಳೆ ಬರುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಭದ್ರಾ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ೧೮೬ ಅಡಿ(೭೧ ಟಿಎಂಸಿ)ಇದೆ. ಭದ್ರಾ ಮೇಲ್ದಂಡೆ ಯೋಜನೆಗೆ ೧೨.೫೦ ಟಿಎಂಸಿ ನೀರನ್ನು ಇಲ್ಲಿಂದ ಹಂಚಿಕೆ ಮಾಡಲಾಗಿದೆ. ಜಲಾಶಯದಲ್ಲಿ ನೀರಿನ ಗರಿಷ್ಠ ಮಟ್ಟ ೧೮೬ ಅಡಿ ಇದ್ದರೂ ಭದ್ರಾ ಮೇಲ್ದಂಡೆಗೆ ನೀರನ್ನು ಪಡೆಯುವ ಪಾಯಿಂಟ್‌ನ್ನು ೧೪೪ ಅಡಿಗೆ ಸೀಮಿತಗೊಳಿಸಲಾಗಿದೆ.
ಅಂದರೆ, ಇಲ್ಲಿ ೧೪೪ ಅಡಿಗಳಿಗೂ ಅಽಕ ನೀರಿದ್ದರೆ ಭದ್ರಾ ಮೇಲ್ಡಂಡೆಗೆ ನೀರು ಪಡೆಯಬಹುದಾಗಿದೆ. ಈಗ ನಿರ್ದಿಷ್ಟ ಮಟ್ಟ ತಲು ಪಿರುವುದರಿಂದ ನೀರನ್ನು ಲಿಫ್ಟ್ ಮಾಡಲು ತೊಂದರೆಗಳಿಲ್ಲ.
ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳ್ಳದೇ ಇರು ವುದರಿಂದ ತುಮಕೂರು ಶಾಖಾ ಕಾಲುವೆ ಮೂಲಕ ನೀರು ಹ ರಿಸಬೇಕು ಎಂದು ಲಿಂಗಾರೆಡ್ಡಿ ಅವರು ಜನಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲ ಶಾಸಕರೂ ಸರ್ಕಾರದ ಮೇಲೆ ಒತ್ತಡ ತರುವಂತೆಯೂ ಆಗ್ರಹಿಸಿದ್ದಾರೆ.
ವಿವಿ ಸಾಗರ ಜಲಾಶಯದ ಗುರುವಾರದ ನೀರಿನ ಸಂಗ್ರಹ ೧೨೨ ಅಡಿ ಇದೆ. ಭರ್ತಿಗೆ ೧೩ ಅಡಿ ಬಾಕಿ ಇದೆ. ಮಳೆಗಾಲದಲ್ಲಿ ಈ ಜಲಾಶಯಕ್ಕೆ ಇದುವರೆಗೂ ಒಂದು ಬೊಗಸೆ ಒಳಹರಿವು ಬಂದಿಲ್ಲ. ಹಾಗಾಗಿ ಭದ್ರಾ ಮೇಲ್ದಂಡೆಯಡಿ ಕನಿಷ್ಠ ೨ ತಿಂಗಳು ನೀರು ಲಿ-ï್ಟ ಮಾಡಿದರೆ ೪ ಟಿಎಂಸಿ ಸಂಗ್ರಹವಾಗಲಿದ್ದು, ಭವಿಷ್ಯದ ಆತಂಕ ನಿವಾರಣೆಯಾಗಲಿದೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ನೀರು ಪಡೆಯಲು ಯಾವುದೇ ಅಡ್ಡಿಇಲ್ಲ. ಯಾವ ರೈತರ ವಿರೋಧವೂ ಇಲ್ಲ. ತಕ್ಷಣ ಭದ್ರಾ ಜಲಾಶಯದಿಂದ ನೀರು ಲಿಫ್ಟ್ ಮಾಡಿ ತುಮಕೂರು ಶಾಖಾ ಕಾಲುವೆ ಮೂಲಕ ವಿವಿ ಸಾಗರಕ್ಕೆ ಹಾಯಿಸುವಂತೆ ಲಿಂಗಾರೆಡ್ಡಿ, ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್‌ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹುಣಿಸೆಕಟ್ಟೆ ಕಾಂತರಾಜ್, ಮಲ್ಲಾಪುರ ತಿಪ್ಪೇಸ್ವಾಮಿ ಇತರರು ಜಲಸಂಪನ್ಮೂಲ ಇಲಾಖೆ ಸಚಿವರು, ಉನ್ನತ ಅಽಕಾರಿಗಳನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net