ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ ಕುಂಠಿತ

ಚಿತ್ರದುರ್ಗದಲ್ಲಿ ಶುಕ್ರವಾರ ಲೀಡ್‌ಬ್ಯಾಂಕ್ ನೇತೃತ್ವದ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ವಾರ್ಷಿಕ ಸಾಲ ಯೋಜನೆ ೨೦೨೬-೨೭ ಕೈಪಿಡಿ ಅನಾವರಣಗೊಳಿಸಲಾಯಿತು. ಜಿಪಂ ಸಿಇಒ ಡಾ.ಎಸ್. ಆಕಾಶ್, ಎಂ.ಪಿ.ಪ್ರವೀಣ್, ಅರುಣ್‌ಕುಮಾರ್,ವಿನ್ನತ್, ಎಂ. ರಾಘವೇಂದ್ರ, ಜಯಲಕ್ಷಿ÷್ಮÃ, ಜಗನ್ನಾಥ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಲೀಡ್‌ಬ್ಯಾಂಕ್ ನೇತೃತ್ವದ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ವಾರ್ಷಿಕ ಸಾಲ ಯೋಜನೆ ೨೦೨೬-೨೭ ಕೈಪಿಡಿ ಅನಾವರಣಗೊಳಿಸಲಾಯಿತು. ಜಿಪಂ ಸಿಇಒ ಡಾ.ಎಸ್. ಆಕಾಶ್, ಎಂ.ಪಿ.ಪ್ರವೀಣ್, ಅರುಣ್‌ಕುಮಾರ್,ವಿನ್ನತ್, ಎಂ. ರಾಘವೇಂದ್ರ, ಜಯಲಕ್ಷಿ÷್ಮÃ, ಜಗನ್ನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಠಿಣ ಕ್ರಮಕ್ಕೆ ಆಗ್ರಹಿಸುವುದಾಗಿ ಅಽಕಾರಿಗಳಿಗೆ ಎಚ್ಚರಿಕೆ
  • ಬ್ಯಾAಕ್‌ಗಳ ಕಾರ್ಯವೈಖರಿಗೆ ಸಿಇಒ ಆಕಾಶ್ ಅಸಮಾಧಾನ
  • ಜಿಲ್ಲಾ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆ
ಚಿತ್ರದುರ್ಗ: ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ನೋಂದಣಿ ಜಿಲ್ಲೆಯಲ್ಲಿ ಅತ್ಯಂತ ನಿರಾಶಾದಾಯಕವಾಗಿದೆ ಎಂ ದು ಸಿಇಒ ಡಾ.ಎಸ್. ಆಕಾಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಜಿಲ್ಲಾ ಲೀಡ್ ಬ್ಯಾಂಕ್ ನೇತÊತ್ವದಲ್ಲಿ ಜರುಗಿದ ಜಿಲ್ಲಾ ಸಲಹಾ ಸಮಿತಿ ಹಾಗೂ ಪರಿಶೀಲ ನಾ ಸಮಿತಿ ಸಭೆಯಲ್ಲಿ ಮಾತನಾಡಿ, ಗುರಿ ತಲುಪುವಲ್ಲಿ ಬ್ಯಾಂಕ್‌ಗಳು ಸಂಪೂರ್ಣ ವಿ-Àಲವಾಗಿವೆ. ಈ ಕಳಪೆ ಸಾಧನೆ ಬಗ್ಗೆ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ಟೀಕೆಗಳನ್ನು ಎದುರಿಸಬೇಕಾಗುತ್ತದೆ.
ನಿಗದಿತ ಗುರಿಗಿಂತಲೂ ಬ್ಯಾಂಕ್‌ಗಳ ಸಾಧನೆ ತೀರಾ ಕೆಳಮಟ್ಟದಲ್ಲಿದೆ. ಚಿತ್ರದುರ್ಗ ಜಿಲ್ಲೆ ಪಿಎಂಜೆಜೆಬಿವೈ ಶೇ.೧೮ ಹಾಗೂ ಪಿಎಂಎಸ್‌ಬಿವೈ ಶೇ.೩೦ ಸಾಧನೆ ಮೂಲಕ ರಾಜ್ಯದಲ್ಲೇ ಕೊನೇ ಸ್ಥಾನದಲ್ಲಿದೆ. ಮುಂದಿನ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಬ್ಯಾಂಕ್‌ಗಳ ಕಾರ್ಯವೈಖರಿ ಬಗ್ಗೆ ಕಠಿಣ ಕ್ರಮಕ್ಕೆ ಆಗ್ರಹಿಸುವುದಾಗಿ ಎಚ್ಚರಿಸಿದರು.
ಜಿಲ್ಲೆಯಲ್ಲಿ ಒಟ್ಟು ೧೬,೫೯,೪೫೬ ಜನಸಂಖ್ಯೆಯಿದೆ. ಪಿಎಂಜೆಜೆಬಿವೈ ೨,೩೪,೬೧೩, ಪಿಎಂಎಸ್‌ಬಿವೈ ಅಡಿ ೫,೪೨,೫೨೮ ಹಾಗೂ ಎಪಿವೈ ಅಡಿ ೧,೪೨,೬೫೫ ಜನರ ನೋಂದಣಿಯಾಗಿದೆ ಎಂದು ಲೀಡ್‌ಬ್ಯಾಂಕ್ ಮ್ಯಾನೇಜರ್ ಎಂ.ಪಿ. ಪ್ರವೀಣï ತಿಳಿಸಿ ದರು.
ಪ್ರತಿ ಲಕ್ಷ ಜನರಿಗೆ ಪಿಎಂಜೆಜೆಬಿವೈ ಅಡಿ ೧೪,೨೧೫, ಪಿಎಂಎಸ್‌ಬಿವೈ ಅಡಿ ೩೨,೬೯೩ ಹಾಗೂ ಎಪಿವೈ ಅಡಿ ೮,೫೯೬ ನೋಂದಣಿ ಆಗಿದೆ. ಜಿಲ್ಲೆಯಲ್ಲಿರುವ ೨೫೯ ಬ್ಯಾಂಕ್ ಶಾಖೆಗಳಿಂದ ಠೇವಣಿ, ಸಾಲ ವಿತರಣೆ ಹಾಗೂ ಗುರಿ ಸಾಧನೆ ಕುರಿತಂತೆ ಅವರು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಮಾತನಾಡಿ, ಪ್ರಧಾನ ಮಂತ್ರಿ ಸೂಕ್ಷ÷್ಮ್ಮಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾ ರೀಕರಣ ಅಡಿ ಜಿಲ್ಲೆಯಲ್ಲಿ ೧೦೦ ಘಟಕಗಳಿಗೆ ಸಾಲ ವಿತರಣೆ ಗುರಿ ಇದೆ ಎಂದು ಮಂಜೂರು, ಬಾಕಿ ಹಾಗೂ ತಿರಸ್ಕೃತ ಅರ್ಜಿ ಗಳ ವಿವರ ನೀಡಿದರು.
ಸರ್ಕಾರದ ಉದ್ಯೋಗ, ಉದ್ದಿಮೆ ಸಾಲ ಯೋಜನೆಗಳ ಅರ್ಜಿಗಳನ್ನು ಆದ್ಯತೆ ಮೇರೆಗೆ ಮಂಜೂರು ಮಾಡಬೇಕೆಂದು ಸಿಇಒ ಹೇಳಿದರು. ಸಭೆಯಲ್ಲಿ ಜಿಲ್ಲಾ ವಾರ್ಷಿಕ ಸಾಲ ಯೋಜನೆ ೨೦೨೬-೨೭ ಕೈಪಿಡಿ ಅನಾವರಣಗೊಳಿಸಲಾಯಿತು.
ಆರ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಅರುಣ್‌ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನ್ನತ್, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಂ. ರಾಘವೇಂದ್ರ, ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಗನ್ನಾಥ್ ಇತರರು ಇದ್ದರು.
ಸವಾಲಾಗಿ ಸ್ವೀಕಾರ
ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ತಮ್ಮ ಶಾಖೆಗಳ ವ್ಯಾಪ್ತಿಯ ಸಾಮಾಜಿಕ ಭದ್ರತಾ ಯೋಜನೆಯಡಿ ನೋಂದಣಿಗೆ ಅರ್ಹರರಿರುವವರ ಪಟ್ಟಿ ನೀಡಿದರೆ ಕೆಲವೇ ಗಂಟೆಗಳಲ್ಲಿ ಗ್ರಾಮವಾರು ಪಟ್ಟಿ ಸಿದ್ದಪಡಿಸಲಾಗುವುದು ಎಂದು ಆಕಾಶ್ ಹೇಳಿದರು.
ಸವಾಲಾಗಿ ಸ್ವೀಕರಿಸಿ ಶೀಘ್ರದಲ್ಲೇ ನೋಂದಣಿಯನ್ನೂ ಮಾಡಲಾಗುವುದು. ಬ್ಯಾಂಕ್ ಅಽಕಾರಿಗಳು ಸಾರ್ವಜನಿಕರಿಗೆ ಉತ್ತರದಾ ಯಿತ್ವದಿಂದ ಕೆಲಸ ಮಾಡಬೇಕೆಂಬ ಮನೋಭಾವವಿಲ್ಲ. ರಾಜ್ಯಸರ್ಕಾರಿ ನೌಕರರು ಎಸ್‌ಐಆರ್, ಗಣತಿ ಕಾರ್ಯಗಳ ನಡುವೆಯೇ ಈ ಕೆಲಸವನ್ನೂ ದಕ್ಷತೆಯಿಂದ ಮಾಡಬಲ್ಲರು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net