ದುರ್ಗದ ಕೃತಿಗಳು ಹೆಚ್ಚಿನ ಓದುಗರನ್ನು ತಲುಪಲಿ

 ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಽಕಾರದ ಅಧ್ಯಕ್ಷ ಡಾ. ಮಾನಸ, ಡಾ. ನಟರಾಜ್, ಡಾ.ಬಿ. ರಾಜಶೇಖರಪ್ಪ, ನಿರಂಜನ ದೇವರಮನೆ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಽಕಾರದ ಅಧ್ಯಕ್ಷ ಡಾ. ಮಾನಸ, ಡಾ. ನಟರಾಜ್, ಡಾ.ಬಿ. ರಾಜಶೇಖರಪ್ಪ, ನಿರಂಜನ ದೇವರಮನೆ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಪುಸ್ತಕ ಪ್ರಾಽಕಾರ
  • ಮನೆಗೊಂದು ಗ್ರಂಥಾಲಯ
  • ಗ್ರಂಥಾಲಯಗಳ ಪರಂಪರೆ
ಚಿತ್ರದುರ್ಗ: ಭಕ್ತಿ, ಭಾವನೆಗಳಿಗಿಂತ ಜ್ಞಾನದ ಬಲಕ್ಕೆ ಮಹತ್ವ ನೀಡಿದ ವಚನಕಾರರ ಸಂದೇಶ ಅತ್ಯಂತ ಪ್ರಸ್ತುತವಾಗಿವೆ ಎಂದು ಕನ್ನಡ ಪುಸ್ತಕ ಪ್ರಾಽಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಪ್ರಾಽಕಾರದ ಜಿಲ್ಲಾ ಸಮಿತಿಯಿಂದ ನಗರದ ನಿವೃತ್ತ ಪ್ರಾಧ್ಯಾಪಕ ಡಾ. ನಟರಾಜ್ ಅವರ ನಿವಾಸದಲ್ಲಿ ಮಂಗಳವಾರ ಆಯೋಜಿ ಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವರಮನೆ ಪ್ರಾಮುಖ್ಯತೆ ಎಷ್ಟು ಮುಖ್ಯ ವೊ ಅಂಥದ್ದೇ ಮಹತ್ವ ಮನೆಯ ಗ್ರಂಥಾಲಯಕ್ಕೂ ಇದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಕಟಗೊಂಡಿರುವ ಸಾಹಿತ್ಯ, ಸಂಶೋಧನಾ ಕÊತಿಗಳು, ಜಾನಪದ, ನಾಟಕ, ಹಾಗೂ ಕಥೆ, ಕವನ ಸಂಕಲನಗಳು ಹೆಚ್ಚು ಓದುಗರನ್ನು ತಲುಪುವಂತಾಗಲಿ ಎಂದರು.
ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಮಾತನಾಡಿ, ದೇಶದಲ್ಲಿ ಗ್ರಂಥಾಲಯಗಳ ಪರಂಪರೆ ಇದೆ. ದೇಶ ನೋಡು, ಕೋಶ ಓದು ಎನ್ನುವು ನಾಣ್ಣುಡಿಯಂತೆ ಗ್ರಂಥಗಳು ಜ್ಞಾನ ಭಂಡಾರಗಳಾಗಿವೆ ಎಂದರು.
ಡಾ. ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ನಿರಂಜನ ದೇವರಮನೆ, ಡಾ. ಮಂಗಳಗೌರಿ, ಸಿ.ಬಿ. ಶೈಲಾ ಜಯಕುಮಾರ್, ಡಾ. ಯಶೋದಾ, ಡಾ. ಚಾಂದಿನಿ ಖಾಲೀದ್, ಶೋಭಾ ಮಲ್ಲಿಕಾರ್ಜುನ, ಪತ್ರಕರ್ತ ಕರ‍್ಲಕುಂಟೆ ತಿಪ್ಪೇ ಸ್ವಾಮಿ, ಡಾ. ಯಶೋದರ, ಸಿ.ಕೆ. ಗೀತಾ, ನಿರ್ಮಲಾ ಮರಡಿಹಳ್ಳಿ, ಪರಮೇಶ್ವರಪ್ಪ ಕುದುರಿ, ವಕೀಲರಾದ ರವಿನಾರಾಯಣ, ಜೆ.ಸಿ.ದಯಾನಂದ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ, ಪ್ರಾಧ್ಯಾಪಕ ಬಿ.ಟಿ. ಚಂದ್ರಶೇಖರ್, ಶಾಂತಾ ಅಹೋಬಲಪತಿ, ಪ್ರಮಥ ಮಲ್ಲಿಕಾರ್ಜುನ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net