ತ್ವರಿತಗತಿಯಲ್ಲಿ ರಸ್ತೆ ವಿಸ್ತರಣೆ

ಪರಶುರಾಮಪುರದಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರರೊಂದಿಗೆ ಶಾಸಕ ಟಿ. ರಘುಮೂರ್ತಿ ಪರಿಶೀಲಿಸಿದರು.
ಪರಶುರಾಮಪುರದಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರರೊಂದಿಗೆ ಶಾಸಕ ಟಿ. ರಘುಮೂರ್ತಿ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳು, ಗುತ್ತಿಗೆದಾರರಿಗೆ ಶಾಸಕ ರಘುಮೂರ್ತಿ ಸೂಚನೆ
  • ಪರಶುರಾಂಪುರದಲ್ಲಿ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ
  • ಸಹಕರಿಸಲು ವ್ಯಾಪಾರಸ್ತರಿಗೆ ಮನವಿ
ಪರಶುರಾಮಪುರ: ಪರಶುರಾಮಪುರ ಹೋಬಳಿ ಕೇಂದ್ರದಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಮತ್ತಿತರ ಕಾಮಗಾರಿಗಳನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಗ್ರಾಮದಲ್ಲಿ ರಸ್ತೆ ವಿಸ್ತರಣೆ, ಪಾದಚಾರಿ ಮಾರ್ಗದ ಕಾಮಗಾರಿಯನ್ನು ಶನಿವಾರ ಪರಿಶೀಲನೆ ನಡೆಸಿ ಮಾತನಾಡಿ, ಕಾಮಗಾರಿ ಪೂರ್ಣಗೊಳ್ಳಲು ಸ್ಥಳೀಯರು ಸಹಕರಿಸಬೇಕು. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಬದಿ ವ್ಯಾಪಾರಿಗಳು ಅನ್ಯಥಾ ಭಾವಿಸದೆ ವೈಜ್ಞಾನಿಕವಾಗಿ ಕೈಗೊಂಡಿರುವ ಕಾಮಗಾರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಬೈಪಾಸ್ ರಸ್ತೆಯ ಕಾಲೇಜು ಹಾಸ್ಟೆಲ್, ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಮಕ್ಕಳ ಹಾಜರಾತಿ ಪರಿಶೀಲಿಸಿದರು.
ಎಪಿಎಂಸಿ ಮಾಜಿ ಸದಸ್ಯ ಎಸ್. ಚನ್ನಕೇಶವ, ನಾಗಭೂಷಣ, ರಂಗಸ್ವಾಮಿ, ಜಾಜೂರು ವೆಂಕಟೇಶ, ತಿಪ್ಪೇಸ್ವಾಮಿ, ಕರಿಯಣ್ಣ, ಈರಣ್ಣ, ಪ್ರಸನ್ನಕುಮಾರ, ಲಕ್ಷ್ಮಣಪ್ಪ, ರಂಗಸ್ವಾಮಿ, ರಾಘವೇಂದ್ರ, ಜಯವೀರಾಚಾರಿ, ಪ್ರಸನ್ನಕುಮಾರ, ತಿಮ್ಮಯ್ಯ, ರಾಜು, ನಾಗರಾಜು, ಶಿವಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net