ಚಿತ್ರದುರ್ಗದ ಎಸ್‌ಜೆಎಂಐಟಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ ೨೦೧೩ರ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಪಿ.ಬಿ. ಭರತ್, ಡಿ. ಗೀತಾ, ಡಾ.ಎ.ಎಂ. ರಾಜೇಶ್ ಇತರರು ಇದ್ದರು.
ಚಿತ್ರದುರ್ಗ: ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ-೨೦೧೩ರ (Puಖಏ )ಕುರಿತು ಜನ ಸಾಮಾನ್ಯರು, ವಿಶೇಷವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಂತೆ ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಲೈಂಗಿಕ ಕಿರುಕುಳ ನಿರ್ಮೂಲನೆ ಘಟಕ ಬುಧವಾರ ಆಯೋಜಿಸಿದ್ದ ಜಾ ಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸದಿಲ್ಲಿಯ ಎಐಸಿಟಿಇ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿಯಮಾವಳಿಗಳ ಅನ್ವಯ ನಮ್ಮ ಕಾಲೇಜಿನಲ್ಲಿ ರ‍್ಯಾಂಗಿAಗ್, ಲೈಂಗಿಕ ಕಿರುಕುಳ ನಿರ್ಮೂಲನೆ ಹಾಗೂ ಮಹಿಳಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಘಟಕಗಳಿಂದ ಆಯೋಜಿ ಸುವ ತರಬೇತಿ ಹಾಗೂ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಲಿಂಗ ತಜ್ಞೆ ಡಿ.ಗೀತಾ ಮಾತನಾಡಿ, ಕಾ ಯ್ದೆ ಬಗ್ಗೆ ಅರಿವು ಮೂಡಿಸುವ ಕೆಲಸ ಇನ್ನಷ್ಟು ಆಗಬೇಕಾಗಿದೆ. ಬಾಲ್ಯವಿವಾಹ ನಿಯಂತ್ರಣಕ್ಕೆ ಸಾಕಷ್ಟು ಕಠಿಣ ಕಾನೂನುಗಳು ಜಾರಿಯಾಗಿವೆ. ಬಾಲ್ಯವಿವಾಹಕ್ಕೆ ಸಹಕಾರ, ಬಾಲ್ಯವಿವಾಹಕ್ಕೆ ಹಾಜರಾಗುವುದು ಕೂಡ ಅಪರಾಧವಾಗುತ್ತದೆ ಎಂದರು.
ಐಕ್ಯುಎಸಿ ಸಂಚಾಲಕ ಡಾ.ಎ.ಎಂ. ರಾಜೇಶ್, ಪ್ರೊ. ಬಸಂತಕುಮಾರಿ, ಪ್ರೊ.ಎಂ.ಕೆ. ಶ್ರುತಿ, ಪ್ರೊ. ಬಿ.ಎ. -Àರ್ಜಾನಾ ಪರ್ವಿನ್ ಇತರರು ಇದ್ದರು. ವರ್ಷಾ ಪ್ರಾರ್ಥಿಸಿದರು. ಮುಸ್ಕಾನ್ ಸ್ವಾಗತಿಸಿ, ಎಸ್. ಭಾವನಾ ವಂದಿಸಿದರು. ಚಿನ್ಮಯಿ ನಿರೂಪಿಸಿದರು.