ಹಿರಿಯೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾದುರಿ ಗಿರೀಶ್ ಮಾತನಾಡಿದರು. ಕೆ. ಅಭಿನಂದನ್, ಹರ್ಷ, ಯೋಗೇಶ್, ವಿಶ್ವನಾಥ್ ಇದ್ದರು. awareness
ಹಿರಿಯೂರು: ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಿ, ಬೂತ್ ಮಟ್ಟದಲ್ಲಿ ಪಕ್ಷ-ಕಾರ್ಯಕರ್ತರನ್ನು ಸಂಘಟಿಸುವ ಹೊಣೆ ಪದಾಧಿಕಾರಿಗಳ ಮೇಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್ ಹೇಳಿದರು. awareness
ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕೇಂದ್ರದ ಚುಕ್ಕಾಣಿ ಹಿಡಿದ ಬಿಜೆಪಿ 12 ವರ್ಷ ಅಭೂತಪೂರ್ವ ಸಾಧನೆ ಮಾಡಿದೆ. ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿಯೊಂದು ಬೂತ್ ಮಟ್ಟದಲ್ಲಿ ಪಸಾರ ಮಾಡಿ ಮಾಹಿತಿ ಸರಳ್ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಹೇಳಿದರು.
ಮತ ಪಟ್ಟಿಯಲ್ಲಿನ ದೋಷ ಸರಿಪಡಿಸಲು ನಿಗಾವಹಿಸಬೇಕು. ಮೃತರು, ವಲಸೆ ಹೋದವರ ಹೆಸರು ತೆಗೆಯುವುದು, ಹೊಸ ಸೇರ್ಪಡೆ, ಅಕ್ರಮ ನೋಂದಣಿ ಬಗ್ಗೆ ಜಾಗೃತಿ ವಹಿಸಬೇಕು ಎಂದರು.
ಮಂಡಲ ಅಧ್ಯಕ್ಷ ಕೆ. ಅಭಿನಂದನ್ ಮಾತನಾಡಿ, ಮೋದಿ ಆಡಳಿತ ಸಾಧನೆ ಕುರಿತು ಜೂ. 5ರಿಂದ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ, ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಜಾಗೃತಿ ಮೂಡಿಸಬೇಕು. ಮುಂಬರುವ ಉಪ ಚುನಾವಣೆ ಪಕ್ಷಕ್ಕೆ ಪರೀಕ್ಷೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್, ಎಂ.ವಿ. ಹರ್ಷ, ಎಂ.ಎಸ್. ರಾಘವೇಂದ್ರ, ಎನ್.ಆರ್. ಲಕ್ಷ್ಮೀಕಾಂತ್, ಎಚ್.ಆರ್. ಯೋಗೇಶ್, ನಿತಿನ್ ಗೌಡ, ಜಿಪಂ ಮಾಜಿ ಸದಸ್ಯೆ ರಾಜೇಶ್ವರಿ ಇತರರು ಇದ್ದರು.