ರೈತರಿಗೆ ಸಂತಸ ತಂದ ಮಳೆ

ಕೊಂಡ್ಲಹಳ್ಳಿ ಹೊರವಲಯದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಕೃಷಿಹೊಂಡದಲ್ಲಿ ನೀರು ತುಂಬಿರುವುದು.
ಕೊಂಡ್ಲಹಳ್ಳಿ ಹೊರವಲಯದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಕೃಷಿಹೊಂಡದಲ್ಲಿ ನೀರು ತುಂಬಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಟ್ಟೆ, ಕುಂಟೆ, ಚೆಕ್‌ಡ್ಯಾಂ, ಕೃಷಿ ಹೊಂಡಗಳಲ್ಲಿ ನೀರು ಶೇಖರಣೆ
  • ನಿಟ್ಟುಸಿರು ಬಿಟ್ಟ ಬಿಸಿಲು ನಾಡಿನ ಜನ
ಕೊಂಡ್ಲಹಳ್ಳಿ: ಕೊಂಡ್ಲಹಳ್ಳಿ ಹಾಗೂ ಸುತ್ತಮುತ್ತಲ ಹನುಮಂತನಹಳ್ಳಿ, ಬಿ.ಜಿ. ಕೆರೆ, ಕೋನಸಾಗರ ಇನ್ನಿತರೆಡೆಗಳಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ರೈತಾಪಿ ವರ್ಗಕ್ಕೆ ಸಂತಸ ತಂದಿದೆ.
ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಮಳೆಯಿಂದ ತುಸು ನೆಮ್ಮದಿ ತರಿಸಿದೆ. ಕಟ್ಟೆ, ಕುಂಟೆ, ಚೆಕ್‌ಡ್ಯಾಂ, ಕೃಷಿ ಹೊಂಡಗಳಲ್ಲಿ ನೀರು ಶೇಖರಣೆಯಾಗಿದೆ. ಜಾನುವಾರುಗಳಿಗೆ ಮೇವು ಚಿಗುರಲು ಅನುಕೂಲವಾಗಿದೆ.
ನೀರು ರಭಸವಾಗಿ ಹರಿದಿದ್ದರಿಂದ ಚರಂಡಿಗಳಲ್ಲಿ ಕಟ್ಟಿಕೊಂಡ ಕಸ, ಇತರೆ ತ್ಯಾಜ್ಯದ ವಿಲೇವಾರಿಗೆ ಗ್ರಾಪಂ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಹನುಮಂತನಹಳ್ಳಿ ಗೊಲ್ಲರಹಟ್ಟಿಯ ಆವಿನಪ್ಪ ಎಂಬುವರಿಗೆ ಸೇರಿದ ಮೂರು ಎಕರೆ ನೀರಾವರಿ ದಾಳಿಂಬೆ ತಾಕಿಗೆ ನೀರು ನುಗ್ಗಿ ಸಸಿಗಳು ನೆಲಕ್ಕುರುಳಿವೆ. 5 ಲಕ್ಷ ರೂ. ವ್ಯಯಿಸಿ 3 ಎಕರೆಯಲ್ಲಿ ದಾಳಿಂಬೆ ಬೆಳೆಯಲಾಗಿತ್ತು. ಇದೇ ಮೊದಲ ಬಾರಿಗೆ ಹೂ ಬಿಟ್ಟಿತ್ತು. ಫಸಲು ನೋಡುವ ಹಂತದಲ್ಲಿ ಒಂದು ಎಕರೆಗೂ ಹೆಚ್ಚು ಗಿಡಗಳು ಮಳೆ ನೀರಿಗೆ ಕೊಚ್ಚಿ ಹೋಗಿದೆ. ಉಳಿದೆಲ್ಲ ದಾಳಿಂಬೆ ಗಿಡಗಳಲ್ಲಿ ಹೂ ಉದುರಿದೆ. ಅಧಿಕಾರಿಗಳು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ರೈತ ಆವಿನಪ್ಪ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net