ರಾಹುಲ್‌ಗೆ ತಮ್ಮ ದ್ವಿಪೌರತ್ವ ಗುಟ್ಟು ರಟ್ಟಾಗುವ ಭೀತಿ

ಸಂಸದ ಗೋವಿಂದ ಎಂ. ಕಾರಜೋಳ
ಸಂಸದ ಗೋವಿಂದ ಎಂ. ಕಾರಜೋಳ
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್ ವಿರೋಽಸುತ್ತಿರುವ ಕಾಂಗ್ರೆಸ್ ನಡೆಗೆ ಕಾರಜೋಳ ಟೀಕೆ
  • ಇಂದು ದುರ್ಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
  • ಸದಸ್ಯತ್ವ ರದ್ದಾಗುವ ಭೀತಿ
ಚಿತ್ರದುರ್ಗ : ಕೇಂದ್ರ ಪ್ರತಿಪಕ್ಷ ನಾಯಕ ರಾಹುಲ್‌ಗಾಂಽ ಅವರು ಎರಡು ರಾಷ್ಟçಗಳ ದ್ವಿಪೌರತ್ವ ಹೊಂದಿರುವ ಗುಟ್ಟು ರಟ್ಟಾಗ ಲಿದೆ ಎಂಬ ಕಾರಣಕ್ಕೆ ಎಸ್‌ಐಆರ್‌ಗೆ ಭಯ ಭೀತರಾಗಿದ್ದಾರೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದ್ವಿಪೌರತ್ವ ಗುಟ್ಟು ರಟ್ಟಾದರೆ ರಾಹುಲ್‌ಗಾಂಽಯವರಿಗೆ ಸಂಸತ್ ಸದಸ್ಯತ್ವ ರದ್ದಾಗುವ ಭೀತಿಯಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಎಸ್‌ಐಆರ್ ವಿರೋಽಸಿ ಗೊಂದಲ ಸÊಷ್ಟಿಸುತ್ತಿದೆ ಎಂದು ಆಪಾದಿಸಿದರು.
೧೯೯೪ರಿಂದಲೂ ರಾಹುಲ್‌ಗಾಂಽ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ. ಎಸ್‌ಐಆರ್‌ನಿಂದ ಬಡವರು, ದಲಿತರು ಯಾರೂ ಕೂಡ ಮತದಾನದ ಹಕ್ಕು ಕಳೆದುಕೊಳ್ಳುವುದಿಲ್ಲ. ಆದರೆ, ನುಸುಳುಕೋರರು ಅಕ್ರಮವಾಗಿ ನಮ್ಮ ದೇಶದಲ್ಲಿ ನೆಲೆಸಿದ್ದು,
ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ.
ಆ ಕಾರಣಕ್ಕೆ ಮನೆ, ಮನೆಗೆ ಹೋಗಿ ಎಸ್‌ಐಆರ್ ಆಗಬೇಕಿದೆ. ಆದರೆ ಕಾಂಗ್ರೆಸ್‌ನವರು ಮಸೀದಿ, ಮದರಸಾ, ಮಂದಿರಗಳಲ್ಲಿ ಎಸ್‌ಐಆರ್ ಮಾಡಿಸುತ್ತಿದ್ದಾರೆ. ಇದು ತಪ್ಪು, ಕಾಂಗ್ರೆಸ್‌ಗೆ ಪಾರದರ್ಶಕತೆ ಬೇಡವಾಗಿದೆ. ಅಕ್ರಮ ಎಸಗಿ ಜನರ ನಂಬಿಕೆ ಕಳೆದು ಕೊಳ್ಳುವಂಥ ವರ್ತನೆ ಕಾಂಗ್ರೆಸ್ಸಿನದ್ದಾಗಿದೆ.
ಬಿಜೆಪಿ ಸೋಮವಾರ ರಾಜ್ಯ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿ ಎಸ್‌ಐಆರ್ ಸರಿಯಾಗಿ ನಡೆಸುವಂತೆ ಮನವಿ ಮಾಡಿದೆ. ಕಾಂಗ್ರೆಸ್‌ಗೆ ಮತ ಹಾಕುತ್ತಾರೆಂಬ ಕಾರಣಕ್ಕೆ ನಮ್ಮ ದೇಶದಲ್ಲಿರುವ ಹಲವು ಬಾಂಗ್ಲಾ, ಪಾಕಿಸ್ತಾನದವರನ್ನು ಭಾರತೀಯರನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಕಾಂಗ್ರೆಸ್ಸಿನ ಈ ಮತಬ್ಯಾಂಕ್ ನೀತಿಯಿಂದ ದೇಶದ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರ ಆವರಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ ವಾಡಿಕೆ ಮಳೆಯಾಗಿಲ್ಲ. ಬಿತ್ತನೆ ಕುಂಟಿತಗೊAಡಿದೆ. ಕುಡಿವ ನೀರು, ಜಾನು ವಾರುಗಳಿಗೆ ಮೇವಿನ ಸಮಸ್ಯೆ ಆಗಿದೆ. ಸರ್ಕಾರ ಗೋಶಾಲೆಗಳನ್ನು ಆರಂಭಿಸಬೇಕು. ಖಾಸಗಿ ಗೋಶಾಲೆಗಳಿಗೆ ಸಮರ್ಪಕ ಮೇವು ಹಾಗೂ ಆರ್ಥಿಕ ಸೌಲಭ್ಯ ಒದಗಿಸಬೇಕು. ರೈತರ ಪರವಾಗಿ ಸರ್ಕಾರವೇ ಬೆಳೆ ವಿಮೆ ಕಂತು ಪಾವತಿಸಬೇಕು. ಎನ್‌ಡಿ ಆರ್‌ಎ-ï ಅನುದಾನಕ್ಕೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿ ಎಂದು ಕಾರಜೋಳ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net