ರಘುಮೂರ್ತಿಗೆ ಒಲಿದ ಸಚಿವ ಸ್ಥಾನ

ಸಚಿವ ಟಿ. ರಘುಮೂರ್ತಿ
ಸಚಿವ ಟಿ. ರಘುಮೂರ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ಸಂಭ್ರಮ
  • ಚಳ್ಳಕೆರೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು
  • ಮೂರು ದಶಕದ ಬಳಿಕ ಕ್ಷೇತ್ರಕ್ಕೆ ಸಚಿವ ಸ್ಥಾನ
ಕೊರ್ಲಕುಂಟೆ ತಿಪ್ಪೇಸ್ವಾಮಿ, ಚಳ್ಳಕೆರೆ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ.
ಅವರು ಸೋಮವಾರ ಬೆಂಗಳೂರಿನ ಲೋಕ ಭವನದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಚಳ್ಳಕೆರೆ ವಿಧಾ ನಸಭಾ ಕ್ಷೇತ್ರದ ತುರುವನೂರು ಹೋಬಳಿ ವ್ಯಾಪ್ತಿಯ ಕಡಬನಕಟ್ಟೆ ಗ್ರಾಮದ ಟಿ. ತಿಪ್ಪಯ್ಯ, ಬಸಮ್ಮ ದಂಪತಿ ಪುತ್ರನಾಗಿ ೧೯೬೩ರ ಜೂನ್ ೧೦ ರಂದು ಜನಿಸಿದ ಅವರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಜಗಳೂರು ತಾಲೂಕಿನ ಮುಸ್ಟೂರಿನಲ್ಲಿ ಪ್ರೌಢಶಿಕ್ಷಣ, ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ನಂತರ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಸಿವಿಲï ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಮೈಸೂರು ಜಿ¯್ಲೆಯ ಭೂಸೇನಾ ನಿಗಮದಲ್ಲಿ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ಬೆಂಗಳೂರು, ಕಲಬುರ್ಗಿ ಜಿ¯್ಲÉಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಂತದಲ್ಲೇ ರಾಜಕಾರಣದ ಕಡೆಗೆ ಆಸಕ್ತಿ ಬೆಳೆಸಿಕೊಂಡು ೨೦೦೮ರಲ್ಲಿ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದರು.
ಕ್ಷೇತ್ರ ಪ್ರವೇಶ:
೨೦೦೮ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪಽðಸುವ ಪ್ರಯತ್ನ ಮಾಡಿ, ಕೊನೆ ಗಳಿಗೆಯಲ್ಲಿ ಟಿಕೆಟ್ ವಂಚಿತರಾಗಿದ್ದರು. ಇದರಿಂದ ವಿಚಲಿತರಾಗದೆ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ, ಪಕ್ಷದ ಕಾರ್ಯಕರ್ತರು, ಮುಖಂಡರ ಪರಿಚಯ ಮಾಡಿಕೊಳ್ಳುವುದರ ಜತೆಗೆ ಗ್ರಾಮೀಣ ಜನರ ಸಮಸ್ಯೆಗಳನ್ನು ಅರಿತುಕೊಂಡರು.
೨೦೧೩ರಲ್ಲಿ ಟಿಕೆಟ್ ಪಡೆದು ಮೊದಲ ಸಲವೇ ಗೆಲುವು ಕಂಡರು. ೨೦೧೮, ೨೦೨೩ರ ಚುನಾವಣೆಗಳಲ್ಲೂ ಸತತ ಗೆಲುವು ಸಾಽಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಚಳ್ಳಕೆರೆ(ಎಸ್ಟಿ) ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಎರಡನೇ ಬಾರಿ ಗೆಲುವು ಕಂಡಿಲ್ಲ ಎಂಬ ಕಳಂಕ ದೂರ ಮಾಡಿದರು. ಶಾಸಕರಾದ ಮೊದಲ ಅವಽಯಲ್ಲಿ ಸಿದ್ದರಾಮಯ್ಯ ಆಡಳಿತವಿದ್ದಾಗ ಚಳ್ಳಕೆರೆ ಕ್ಷೇತ್ರಕ್ಕೆ ಅತಿಹೆಚ್ಚು ಅನುದಾನ ಪಡೆದ ಶಾಸಕ ಎನ್ನುವ ಕೀರ್ತಿ ಪಡೆದವರು.
೨೦೧೮ರಲ್ಲಿ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿ, ೨೦೨೩ರಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸೇವೆ ಮಾಡಿರುವ ಅನುಭವ ಇದೆ.
ಮೂರು ದಶಕದ ಬಳಿಕ ಕ್ಷೇತ್ರಕ್ಕೆ ಸಚಿವ ಸ್ಥಾನ
ವೀರೇಂದ್ರ ಪಾಟೀಲï ಅವಽಯಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಬಿ.ಎಲï. ಗೌಡ ಮಂತ್ರಿ ಆಗಿದ್ದರು. ೧೯೯೫ ರಲ್ಲಿ ಜೆ.ಎಚ್. ಪಟೇಲï ಆಡಳಿತದಲ್ಲಿ ಕಾಟಪ್ಪನಹಟ್ಟಿ ತಿಪ್ಪೇಸ್ವಾಮಿ ಸಣ್ಣ ನೀರಾವರಿ ಮತ್ತು ಅಬಕಾರಿ ಸಚಿವರಾಗಿದ್ದರು. ಇದಾದ ಮೂವತ್ತು ವರ್ಷಗಳ ಬಳಿಕ ಟಿ.ರಘುಮೂರ್ತಿ ಸಚಿವರಾಗಿ ಕ್ಷೇತ್ರದಲ್ಲಿ ಹೊಸ ರಾಜಕೀಯ ಇತಿಹಾಸ ಬರೆದಿz್ದÁರೆ.
ಅಭಿವೃದ್ಧಿ ಶ್ರೀರಕ್ಷೆ
ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ರಘುಮೂರ್ತಿಗೆ ಶ್ರೀರಕ್ಷೆ ಎನ್ನುವ ಮಾತು ಪ್ರತಿಪಕ್ಷಗಳ ಮುಖಂಡರಿಂದಲೇ ಕೇಳಿ ಬರುತ್ತಿವೆ. ಒಳ್ಳೆಯ ಕೆಲಸಗಾರ. ಇಲ್ಲದಿದ್ರೆ ಮೀಸಲು ಕ್ಷೇತ್ರದಲ್ಲಿ ಮೂರು ಸಲ ಗೆಲ್ಲುವುದು ಸುಲಭದ ಮಾತಲ್ಲ. ಇಂತಹ ವ್ಯಕ್ತಿಗೆ ಅಽಕಾರ ಸಿಗಬೇಕು.
ನಮ್ಮ ಜಿ¯್ಲÉ ಉದ್ಧಾರ ಆಗುತ್ತೆ ಎನ್ನುವ ಮಾತುಗಳು ಪಕ್ಷಾತೀತವಾಗಿ ಕೇಳಿ ಬರುತ್ತಿದ್ದವು. ಚಳ್ಳಕೆರೆ ಇತರೆ ಕ್ಷೇತ್ರಗಳಿಗೆ ಮಾದರಿಯಾಗುವ ರೀತಿಯಲ್ಲಿ ಮಿನಿ ವಿಧಾನಸೌಧ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ವಾಲ್ಮೀಕಿ, ಜಗಜೀವನರಾಂ ಭವನಗಳು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಜಿಟಿಟಿಸಿ ತರಬೇತಿ ಕೇಂದ್ರ, ಯಾತ್ರಿ ನಿವಾಸ, ಚಳ್ಳಕೆರೆ ನಗರ ಸೇರಿ ವಿವಿಧ ರಸ್ತೆಗಳ ವಿಸ್ತರಣೆ, ನಗರದಲ್ಲಿ ೧೯೮ ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಸೇರಿ ಬಯಲು ಸೀಮೆಯ ರೈತರ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿನ ಅನುಕೂಲಕ್ಕೆ ವೇದಾವತಿ ನದಿಗೆ ಐದಾರು ಚೆಕ್ ಡ್ಯಾಂಗಳ ನಿರ್ಮಾಣ ಇವು ಅಭಿವೃದ್ಧಿಯ ಮೈಲುಗಲ್ಲುಗಳಾಗಿವೆ.
ಕ್ಷೇತ್ರದ ೨೦ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ತಾಲೂಕು ಮತ್ತು ಜಿ¯್ಲÁ ಮಟ್ಟದ ಅಽಕಾರಿಗಳ ಸಮ್ಮುಖದಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ಜನರ ಮೂಲ ಸೌಕರ್ಯ ಸಮಸ್ಯೆಗಳನ್ನು ಪರಿಹರಿಸಿದ್ದರು. ಕೋವಿಡ್ ಕಾಲದಲ್ಲಿ ನಿರಂತರ ಸೇವಾ ಕಾರ್ಯಗಳನ್ನು ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದರು. ಒಮ್ಮೆ ಮಳೆ ಪ್ರವಾಹಕ್ಕೆ ಸಿಲುಕಿದ್ದ ಉತ್ತರ ಕರ್ನಾಟಕ ಜನರ ನೆರವಿಗೆ ಧಾವಿಸಿ ಪಕ್ಷದ ಕಾರ್ಯಕರ್ತರ ಜತೆಯಲ್ಲಿ ಆಹಾರ ಸಾಮಗ್ರಿ ಮತ್ತು ಬಟ್ಟೆಗಳನ್ನು ದಾನಿಗಳಿಂದ ಸಂಗ್ರಹಿಸಿ ಖುz್ದÁಗಿ ತಲುಪಿಸಿ ಮಾನವೀಯತೆ ಮೆರೆದಿದ್ದರು.

ಮಗಳ ಮದುವೆ


೨೦೧೬ರಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೃಹತ್ ಪೆಂಡಾಲï ಹಾಕಿಸಿ, ಎರಡು ದಿನಗಳ ಕಾಲ ಪುತ್ರಿ ಡಾ. ಆರ್. ಸುಚಿತ್ರಾ ಅವರ ವಿವಾಹ ಕಾರ್ಯವನ್ನು ಸಮಾಜಕ್ಕೆ ಮಾದರಿ ರೀತಿಯಲ್ಲಿ ನೆರವೇರಿಸಿದ್ದರು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಡೀ ಸಚಿವರ ದಂಡೇ ಮದುವೆ ಕಾರ್ಯದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಎರಡು ಸವಾಲು:
ಸಚಿವರಾಗಿರುವ ರಘುಮೂರ್ತಿ ಅವರಿಗೆ ಎರಡು ಪ್ರಬಲವಾದ ಸವಾಲುಗಳಿವೆ. ಮೊದಲು ಡಿ. ಸುಧಾಕರ್ ನಿಧನದಿಂದ ಎದುರಾಗಿರುವ ಹಿರಿಯೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಡುವುದು, ಇನ್ನು ೨೦೨೩ ರ ಚುನಾವಣೆ ಸಂದರ್ಭದಲ್ಲಿ ಪರಶುರಾಮಪುರ ತಾಲೂಕು ಕೇಂದ್ರ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ವಽðಸುವುದಿಲ್ಲ ಎಂದು ಹೇಳಿಕೊಂಡಿದ್ದರು. ಅದರಂತೆ ಪರಶುರಾಮಪುರವನ್ನು ತಾಲೂಕಾಗಿ ಘೋಷಣೆ ಮಾಡಿಸಬೇಕು. ಜಿ¯್ಲÉಯ ಬಹು ವರ್ಷಗಳ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಪೂರೈಸುವ ಪ್ರಯತ್ನ ಮಾಡಬೇಕಿದೆ.
ಮಾನದಂಡ
ಸಚಿವ ಸಂಪುಟ ವಿಸ್ತರಣೆಗೆ ಸರಿಸುಮಾರು ಎರಡು ತಿಂಗಳಿಂದ ರಾಜಕೀಯ ಕಸರತ್ತು ನಡೆದಿತ್ತು. ಈ ನಡುವೆ ಜಿ¯್ಲÉಯಲ್ಲಿ ಯಾರಿಗೆ ಅದೃಷ್ಟ ಇದೆ ಎನ್ನುವ ಲೆಕ್ಕಾಚಾರಗಳು ಜೋರಾಗಿದ್ದವು. ಕೊನೆಗೂ ಪಕ್ಷ ನಿಷ್ಠೆ, ಅಭಿವೃದ್ಧಿ ಕಾರ್ಯ, ೨೦೧೮ ರಲ್ಲಿ ಜಿ¯್ಲÉಯಲ್ಲಿ ಪಕ್ಷದ ಏಕೈಕ ಶಾಸಕರಾಗಿ ಆಯ್ಕೆ ಆಗಿ ಕಾಂಗ್ರೆಸ್ ಮಾನ ಉಳಿಸಿದ್ದು, ಮುಂದಿನ ಚುನಾವಣೆಗಳಿಗೆ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯ ಗುರುತಿಸಿ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.

ದುರ್ಗದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ


ಸತತ ಮೂರು ಬಾರಿ ಶಾಸಕರಾಗಿ ಅಭಿವೃದ್ಧಿ ಕಾರ್ಯಗಳೊಂದಿಗೆ ಗಮನ ಸೆಳೆದಿರುವ ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ಲಭಿಸಿರುವುದಕ್ಕೆ ರಘುಮೂರ್ತಿ ಯುವಸೇನೆ ಕಾರ್ಯಕರ್ತರು ಸೋಮವಾರ ಸಂಭ್ರಮ ಆಚರಿಸಿದರು.


ಚಿತ್ರದುರ್ಗ

ದ ಒನಕೆ ಓಬವ್ವ ವೃತ್ತದಲ್ಲಿ ಪಟಾಕಿ ಸಿಡಿಸಿದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂದೆ ಸಿಹಿ ಹಂಚಿದರು. ಸಿಎಂ, ಹೈಕಮಾಂಡ್‌ಗೆ ರಕ್ತದಲ್ಲಿ ಬರೆದ ಪತ್ರ ಪ್ರದರ್ಶಿಸಿ ಅಭಿಮಾನ ವ್ಯಕ್ತಪಡಿಸಿದರು.
ಮಂತ್ರಿಗಿರಿ ರಘುಮೂರ್ತಿ ಅವರಿಗಿರುವ ಅಭಿವೃದ್ಧಿಯ ಬದ್ಧತೆ ಹಾಗೂ ಪಕ್ಷ ನಿಷ್ಠೆಗೆ ಒಲಿದಿದೆ. ಹೈಕಮಾಂಡ್ ನಿರ್ಧಾರ ಸ್ವಾಗತಾರ್ಹ ಎಂದು ಯುವಸೇನೆ ರಾಜ್ಯಾಧ್ಯಕ್ಷ ಕೆ.ಟಿ. ಶಿವಕುಮಾರ್ ಹೇಳಿದರು.
ಸಿಎಂ ಡಿ.ಕೆ. ಶಿವಕುಮಾರ್ ಕಳೆದ ವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿz್ದÉವು. ನಮ್ಮ ಬೇಡಿಕೆ ಈಡೇರಿದೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡು ಜಿ¯್ಲÉಗೆ ನೀರು ಹರಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಚಿತ್ರದುರ್ಗದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣವಾಗಬೇಕು.ನಗರದ ರಸ್ತೆ ವಿಸ್ತರಣೆಗೆ ನೂತನ ಸಚಿವರು ಮುಂದಾಗಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್‌ನ ಮಧುಪಾಲೇಗೌಡ, ಸುರೇಶ್ ಈಚಲನಾಗೇನಹಳ್ಳಿ, ಯುವಸೇನೆ ಪದಾಽಕಾರಿಗಳಾದ ಚಳ್ಳಕೆರೆ ಪಾಂಡು, ಎನ್.ಎಸ್. ತಿಪ್ಪೇಸ್ವಾಮಿ, ವಿಠಲ, ಶಿವಕುಮಾರ್, ಕೆಂಚವೀರಪ್ಪ, ರಾಕೇಶ್ ಇತರರಿದ್ದರು.

ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ


ಕ್ಷೇತ್ರದ ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಚಳ್ಳಕೆರೆ ವಾಲ್ಮೀಕಿ ವೃತ್ತದಲ್ಲಿ ಪಕ್ಷದ ಬಾವುಟಗಳನ್ನು ಹಿಡಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಮೀಸಲು ಕ್ಷೇತ್ರದಲ್ಲಿ ಸತತ ೩ ಬಾರಿ ಗೆಲವು ಸಾಽಸಿ, ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ಪರಿಗಣಿಸಿ ಸಚಿವ ಸ್ಥಾನ ನೀಡಲಾಗಿದೆ ಎಂದು ಶ್ಲಾಘಿಸಿ ಘೋಷಣೆಗಳನ್ನು ಕೂಗಿದರು.
ಕೆಪಿಸಿಸಿ ಕುಶಲಕರ್ಮಿ ವಿಭಾಗದ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಪಿ. ತಿಪ್ಪೇಸ್ವಾಮಿ, ಜಿ.ಟಿ. ಗೋವಿಂದ ರಾಜ್, ಗಾಂಽನಗರ ಕೃಷ್ಣ, ಜಿ. ಮಾರಣ್ಣ, ಎಚ್. ತಿಪ್ಪೇರುದ್ರಪ್ಪ, ನನ್ನಿವಾಳ ರಾಜಣ್ಣ, ಪೈಂಟ್ ತಿಪ್ಪೇಸ್ವಾಮಿ, ಲಕ್ಷ್ಮೀದೇವಿ, ಸುಜÁತಾ, ಮೈಲಾರಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net