ಸಂಗ್ರಹ ಸಾಮಾರ್ಥ್ಯ ವರದಿ ಬಳಿಕ ಖರೀದಿ ಕೇಂದ್ರ

ಚಿತ್ರದುರ್ಗದಲ್ಲಿ ಬುಧವಾರ ಜಿಲ್ಲಾಽಕಾರಿ ಟಿ.ವೆಂಕಟೇಶ್ ನೇತೃತ್ವದಲ್ಲಿ ಎಂಎಸ್‌ಪಿಯಡಿ ಮೆಕ್ಕೆಜೋಳ ಖರೀದಿ ಕುರಿತ ಪೂರ್ವಭಾ ವಿ ಸಭೆ ಜರುಗಿತು. ಎಡಿಸಿ ಬಿ.ಟಿ.ಕುಮಾರಸ್ವಾಮಿ,ಡಾ.ಎನ್.ಕುಮಾರ್,ಬಿ.ಮಂಜುನಾಥ್,ಡಾ.ಸಿ.ತಿಪ್ಪೇಸ್ವಾಮಿ, ದಿಲೀಪ್‌ಕುಮಾರ್, ಬಸವೇಶ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಜಿಲ್ಲಾಽಕಾರಿ ಟಿ.ವೆಂಕಟೇಶ್ ನೇತೃತ್ವದಲ್ಲಿ ಎಂಎಸ್‌ಪಿಯಡಿ ಮೆಕ್ಕೆಜೋಳ ಖರೀದಿ ಕುರಿತ ಪೂರ್ವಭಾ ವಿ ಸಭೆ ಜರುಗಿತು. ಎಡಿಸಿ ಬಿ.ಟಿ.ಕುಮಾರಸ್ವಾಮಿ,ಡಾ.ಎನ್.ಕುಮಾರ್,ಬಿ.ಮಂಜುನಾಥ್,ಡಾ.ಸಿ.ತಿಪ್ಪೇಸ್ವಾಮಿ, ದಿಲೀಪ್‌ಕುಮಾರ್, ಬಸವೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗರಿಷ್ಠ ಪ್ರಮಾಣದ ಮೆಕ್ಕೆಜೋಳ ಖರೀದಿಸಿ
  • ಪಶು,ಕುಕ್ಕುಟ ಆಹಾರ ಉತ್ಪಾದನೆ ಪ್ರತಿನಿಽಗಳಿಗೆ ನಿರ್ದೇಶನ
  • ಜಿಲ್ಲಾಽಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಚಿತ್ರದುರ್ಗ: ರೈತರಿಂದ ಗರಿಷ್ಠ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದ ಕರಿಗೆ ಜಿಲ್ಲಾಽಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಕುಕ್ಕುಟ ಹಾಗೂ ಪಶು ಆಹಾರ ಉತ್ಪಾದನಾ ಘಟಕಗಳಿಗೆ ಅವಶ್ಯವಿರುವ ಪ್ರಮಾಣದ ಮೆಕ್ಕೆಜೋ ಳವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ(ಎಂಎಸ್‌ಪಿ)ರೈತರಿAದ ಖರೀದಿಸುವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವ ರು,ಕುಕ್ಕುಟ ಹಾಗೂ ಪಶು ಆಹಾರ ಉತ್ಪದನಾ ಘಟಕಗಳ ವಾರ್ಷಿಕ ಆಹಾರ ಉತ್ಪಾದನೆ,ಮೆಕ್ಕೆಜೋಳ ಸಂಗ್ರಹ ಸಾಮಾರ್ಥ್ಯ ದ ಮಾಹಿತಿಯನ್ನು ಸಂಗ್ರಹಿಸಿ,ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮೂಲಕ ನೇರವಾಗಿ ರೈತರಿಂದ ಗುಣ ಮಟ್ಟದ ಮೆಕ್ಕೆ ಜೋಳ ಖರೀದಿಸಬೇಕೆಂದು ಅಽಕಾರಿಗಳಿಗೆ ಸೂಚಿಸಿದರು.

ಸಂಗ್ರಹ ಸಾಮಾರ್ಥ್ಯ ವರದಿ
ಅವಶ್ಯವಿರುವ ಪ್ರಮಾಣದ ಮೆಕ್ಕೆಜೋಳ ಖರೀದಿಗಾಗಿ ಜಿಲ್ಲೆಯಲ್ಲಿರುವ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ಘಟಕಗಳಿಗೆ ತ ಹಸೀಲ್ದಾರ್,ಕÊಷಿ ಮತ್ತು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಶೀ ಲಿಸಿ, ಅವುಗಳ ಸಂಗ್ರಹಣಾ ಸಾಮರ್ಥ್ಯದ ಬಗ್ಗೆ ವರದಿ ಸಲ್ಲಿಸಬೇಕು. ವರದಿ ಕೈ ಸೇರಿದ ಬಳಿಕ ಖರೀದಿ ಕೇಂದ್ರಗಳ ಸ್ಥಾಪನೆಗೆ ತೀರ್ಮಾನಿಸಲಾಗುವುದು ಎಂದು ಡಿಸಿ ಹೇಳಿದರು.
ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎನ್.ಕುಮಾರ್ ಮಾತನಾಡಿ, ರಾಜ್ಯಸಹಕಾರ ಮಾರಾಟ ಮಹಾಮಂ ಡಳ ಬಿಡುಗಡೆ ಮಾಡಿರುವ ರೈತರಿಂದ ಮುಂಗಾರು ಹಂಗಾಮಿನ ಮೆಕ್ಕೆಜೋಳ ಖರೀದಿ ಮಾರ್ಗಸೂಚಿಗಳನ್ನು ಅನುಸರಿಸಲಾ ಗುವುದು ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ,ಕÊಷಿ ಇಲಾಖೆ ಜಂಟಿ ಕÊಷಿ ನಿರ್ದೇಶಕ ಬಿ.ಮಂಜುನಾಥ್, ಪಶುವೈದ್ಯಕೀಯ ಇಲಾಖೆ ಪಾಲಿ ಕ್ಲಿ ನಿಕ್ ಉಪ ನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ, ಸಹಕಾರ ಸಂಘಗಳ ಉಪನಿಬಂಧಕ ದಿಲೀಪ್‌ಕುಮಾರ್,ರಾಜ್ಯಸಹಕಾರ ಮಹಾ ಮಂಡಳದ ವ್ಯವಸ್ಥಾಪಕ ಬಸವೇಶ್,ಪಶು ಆಹಾರ ಉತ್ಪಾದನಾ ಘಟಕಗಳು,ಟಿಎಪಿಸಿಎಂಎಸ್,ಪ್ರಾಥಮಿಕ ಕÊಷಿ ಪತ್ತಿನ ಸಹ ಕಾರ ಸಂಘಗಳ ಪ್ರತಿನಿಽಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net