

ಪ್ರಮುಖ ಮುಖ್ಯಾಂಶಗಳು
"ಬೈಕ್ ಅಪಘಾತದಲ್ಲಿ ಶೇ.90ರಷ್ಟು ಸಾವುಗಳು ಹೆಲ್ಮೆಟ್ ಇಲ್ಲದ ಕಾರಣಕ್ಕೆ ಸಂಭವಿಸುತ್ತಿವೆ. ನಿಯಮ ಪಾಲನೆಯಿಂದ ಅಮೂಲ್ಯ ಜೀವ ರಕ್ಷಿಸುವ ಜತೆಗೆ ನಮ್ಮನ್ನು ನಂಬಿರುವ ಕುಟುಂಬದ ಸದಸ್ಯರಿಗೆ ರಕ್ಷಣೆ ಒದಗಿಸಬಹುದಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿನೂತನ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ಯೋಚಿಸಲಾಗಿದೆ.
— ರಮೇಶ್ ಗೌಡ, ಪೊಲೀಸ್ ನಿರೀಕ್ಷಕ, ಹೊಸದುರ್ಗ
"ರಸ್ತೆ ನಿಯಮಗಳನ್ನು ಪಾಲಿಸುವುದು ಪ್ರತಿ ವಾಹನ ಸವಾರನ ಕರ್ತವ್ಯವಾಗಿದೆ. ಹೆಲ್ಮೆಟ್ ನೀಡುವ ಮೂಲಕ ಹೆಲ್ಮೆಟ್ ಧರಿಸುವುದರಿಂದ ಜೀವ ರಕ್ಷಿಸಬಹುದು ಎನ್ನುವ ಸಂದೇಶವನ್ನು ತಿಳಿಸಲಾಗಿದೆ. ಪರೀಕ್ಷೆಯ ಪ್ರಶ್ನೆಗಳು ಜನರಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರತಿದೆ.
— ಶ್ರೀಶೈಲ, ಪಿಎಸ್‌ಐ