ಗ್ರಾಮೀಣ ಮಕ್ಕಳಿಗಾಗಿ ಶಾಲೆಗೆ ಮೂಲ ಸೌಕರ್ಯ ವ್ಯವಸ್ಥೆ school

ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಕೊಠಡಿಗಳಿಗೆ ಕಲಿಕಾ ಪೂರಕ ಚಿತ್ರಗಳನ್ನು ಚಿತ್ರಿಸಿಕೊಟ್ಟ ಅಮೃತ ವಿಜಯ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಎಂ. ಶ್ರುತಿ, ಜಲೀಲ್‌ಸಾಬ್, ಸಿ. ಪ್ರವೀಣ್, ಎ. ಅನಂತರೆಡ್ಡಿ ಇತರರಿದ್ದರು. school
ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಕೊಠಡಿಗಳಿಗೆ ಕಲಿಕಾ ಪೂರಕ ಚಿತ್ರಗಳನ್ನು ಚಿತ್ರಿಸಿಕೊಟ್ಟ ಅಮೃತ ವಿಜಯ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಎಂ. ಶ್ರುತಿ, ಜಲೀಲ್‌ಸಾಬ್, ಸಿ. ಪ್ರವೀಣ್, ಎ. ಅನಂತರೆಡ್ಡಿ ಇತರರಿದ್ದರು. school
Published on

ಪ್ರಮುಖ ಮುಖ್ಯಾಂಶಗಳು

  • ಎಚ್. ಜಲೀಲ್‌ಸಾಬ್ ಹೇಳಿಕೆ
ಐಮಂಗಲ: ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಶಾಲೆಗೆ ಹಳೆ ವಿದ್ಯಾರ್ಥಿ ಟ್ರಸ್ಟ್‌ನಿಂದ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಚ್. ಜಲೀಲ್‌ಸಾಬ್ ಹೇಳಿದರು. school
ಹೋಬಳಿಯ ತಾಳವಟ್ಟಿ ಕೆಪಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳ್ಳಿ ಮಕ್ಕಳು ಶಿಕ್ಷಣಕ್ಕೆ ಬೇರೆಡೆಗೆ ಹೋಗುವುದನ್ನು ತಪ್ಪಿಸಲು ಗ್ರಾಮಸ್ಥರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಒಟ್ಟಾಗಿ ಟ್ರಸ್ಟ್ ರಚಿಸಿ ಶಾಲೆ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಬಿಇಒ ಸಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, ಶಾಲೆ ಮೇಲಿನ ಅಭಿಮಾನದಿಂದ ಎಲ್ಲರೂ ಒಟ್ಟಾಗಿ ಶಾಲೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿರುವುದು ಶ್ಲಾಘನೀಯ. ಶಾಲೆಗೆ ಅತಿಥಿ ಶಿಕ್ಷಕರನ್ನು ಸಹ ಟ್ರಸ್ಟ್‌ನಿಂದ ನೇಮಿಸಿ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆರ್. ನಾಗಭೂಷಣ್ ಪೌರೋಹಿತ್ಯ ವಹಿಸಿದ್ದರು. ಪಾಲಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಸಂತಸಪಟ್ಟರು. ಎಲ್ಕೆಜಿ, ಯುಕೆಜಿ ಮತ್ತು 1ನೇ ತರಗತಿ ಕೊಠಡಿಗಳಿಗೆ ಕಲಿಕಾ ಪೂರಕ ಚಿತ್ರಗಳು, ಅಕ್ಷರಗಳು, ಸಂಖ್ಯೆಗಳನ್ನು ಉಚಿತವಾಗಿ ಚಿತ್ರಿಸಿಕೊಟ್ಟ ಅಮೃತ ವಿಜಯ್ ಅವರನ್ನು ಸನ್ಮಾನಿಸಲಾಯಿತು. ಶಾಲಾ ಬಸ್ ಖರೀದಿಗೆ ಪ್ರೊ.ವಿ. ವೀರಭದ್ರಯ್ಯ, ಎಚ್. ಜಲೀಲ್‌ಸಾಬ್, ಎ. ಅನಂತರೆಡ್ಡಿ ಅವರು ತಲಾ ಒಂದೊಂದು ಲಕ್ಷ ರೂ. ದೇಣಿಗೆ ನೀಡಿದರು.
ಮುಖ್ಯಶಿಕ್ಷಕಿ ಎಂ. ಶ್ರುತಿ, ಹಳೆಯ ವಿದ್ಯಾರ್ಥಿ ಟ್ರಸ್ಟ್‌ನ ಉಪಾಧ್ಯಕ್ಷ ಸಿ. ಪ್ರವೀಣ್, ಕಾರ್ಯದರ್ಶಿ ಪುನೀತ್, ನಿರ್ದೇಶಕ ಮಾರುತಿ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಮೂರ್ಕಣ್ಣಪ್ಪ, ಸಮೂಹ ಸಂಪನ್ಮೂಲ ವ್ಯಕ್ತಿ ಉಷಾಕಿರಣ, ಸಹ ಶಿಕ್ಷಕರಾದ ಟಿ.ವಿ. ಸುನಿತಾ, ಕೆಂಚಪ್ಪ, ಲಾವಣ್ಯ, ಅನುರಾಧಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net