ತಂತ್ರಜ್ಞಾನದಲ್ಲಿ ಮಹಿಳೆ ಸಾಮರ್ಥ್ಯ ಸಾಬೀತು

ಪೊಲೀಸ್ ಇಲಾಖೆಯಿಂದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಖಾಕಿಯೊಳಗೊಬ್ಬ ಸಖಿ ಕಾರ್ಯಕ್ರಮವನ್ನು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಉದ್ಘಾಟಿಸಿದರು. ಡಾ.ಆರ್.ಶಿವಕುಮಾರ್, ಬಿ.ಟಿ.ಕುಮಾರಸ್ವಾಮಿ, ಯುಮುನಾ ಶ್ರೀದೇವಿ, ಸ್ವಾತಿ, ಯಶೋಧಾ, ಎಂ.ಎಚ್.ಅಶ್ವಿನಿ, ಡಾ.ಲತಾ ಇತರರು ಇದ್ದರು.
ಪೊಲೀಸ್ ಇಲಾಖೆಯಿಂದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಖಾಕಿಯೊಳಗೊಬ್ಬ ಸಖಿ ಕಾರ್ಯಕ್ರಮವನ್ನು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಉದ್ಘಾಟಿಸಿದರು. ಡಾ.ಆರ್.ಶಿವಕುಮಾರ್, ಬಿ.ಟಿ.ಕುಮಾರಸ್ವಾಮಿ, ಯುಮುನಾ ಶ್ರೀದೇವಿ, ಸ್ವಾತಿ, ಯಶೋಧಾ, ಎಂ.ಎಚ್.ಅಶ್ವಿನಿ, ಡಾ.ಲತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವೀರೇಶ್ ಅಭಿಮತ
  • ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ
  • ಆತ್ಮಸ್ಥೆರ್ಯ
ಚಿತ್ರದುರ್ಗ : ಮಹಿಳೆಯರು ಇಂದು ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದು ಸೈ ಎನಿಸಿಕೊಂಡಿದ್ದಾರೆ ಎಂದು ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್ ಹೇಳಿದರು.
ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ, ಕಾಲೇಜಿನ ಮಹಿಳಾ ಸಬಲೀಕರಣ ಘಟಕ, ಸಾಂಸ್ಕೃತಿಕ ಚಟುವಟಿಕೆಗಳ ವಿಭಾಗ, ಎನ್‌ಎಸ್‌ಎಸ್ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಶುಕ್ರವಾರ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿ, ಪತ್ನಿ, ಪುತ್ರಿ ಹಾಗೂ ಸ್ನೇಹಿತೆಯೂ ಆಗಿರುವ ಹೆಣ್ಣು, ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯವನ್ನು ಸಾಽಸಿದ್ದಾರೆ. ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ವಿಜ್ಞಾನ-ತಂತ್ರಜ್ಞಾನ, ಬಾಹ್ಯಾಕಾಶದಲ್ಲೂ ತನ್ನ ಸಾಮರ್ಥ್ಯವನ್ನುಸಾಬೀತುಪಡಿಸಿದ್ದಾರೆ ಎಂದರು.
ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಎಂ.ಆರ್.ಜಯಲಕ್ಷಿ÷್ಮÃ, ಉಪ ಪ್ರಾಚಾರ್ಯ ಎಚ್.ಎನ್.ಶಿವಕುಮಾರ್, ಎನ್‌ಎಸ್ ಎಸ್ ಅಽಕಾರಿ ಒ.ಎಂ.ಮAಜುನಾಥ್, ಪ್ರಾಧ್ಯಾಪಕ ಡಾ.ಜಿ.ಹನುಮಂತರೆಡ್ಡಿ, ಉಪನ್ಯಾಸಕರಾದ ಟಿ.ವಿ.ಗೀತಾ, ತಂಜೀಮಾ ಇದ್ದರು.
ಖಾಕಿಯೊಳಗೊಬ್ಬ ಸಖಿ
ಜಿಲ್ಲಾ ಪೊಲೀಸ್ ಇಲಾಖೆ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಅಽಕಾರಿ, ಸಿಬ್ಬಂದಿ ಸಬಲೀಕರಣ ಮತ್ತು ಆರೋಗ್ಯ ಒತ್ತಡ ನಿರ್ವಹಣೆ ಕುರಿತ `ಖಾಕಿಯೊಳಗೊಬ್ಬ ಸಖಿ' ಕರ‍್ಯಕ್ರಮವನ್ನು ಈಚೆಗೆ ಚಿತ್ರದುರ್ಗ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಎಸ್‌ಪಿ ರಂಜಿAತ್‌ಕುಮಾರ್ ಬಂಡಾರು ಮಾತನಾಡಿ, ಇಲಾಖೆಯ ಪುರುಷ ಅಽಕಾರಿ, ಸಿಬ್ಬಂದಿ ಸರಿಸಮನಾಗಿ ಧೈರ್ಯ, ನಿಷ್ಠೆ, ಶಿಸ್ತು, ಆತ್ಮಸ್ಥೆರ್ಯದಿಂದ ಮಹಿಳಾ ಅಽಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ತವ್ಯದಲ್ಲಿರುವ ಸಮಸ್ಯೆಗಳಿದ್ದರೆ ನೇರ ಭೇಟಿ ಮಾಡಿ ಹೇಳಿಕೊಳ್ಳಿ, ಬಗೆಹರಿಸುವುದಾಗಿ ಮಹಿಳಾ ಅಽಕಾರಿ, ಸಿಬ್ಬಂದಿಗೆ ಬಂಡಾರು ಭರವಸೆ ನೀಡಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಕಿರುತೆರೆ ಕಲಾವಿದೆ ಯಮುನಾ ಶ್ರೀನಿಽ, ಬಸವೇಶ್ವರ ಆಸ್ಪತ್ರೆ ಸ್ತಿçÃರೋಗ ತಜ್ಞೆ ಡಾ.ಲತಾ, ಪೃಥ್ವಿ ಧರಿ ಬಂಡಾರು, ಎಎಸ್‌ಪಿ ಡಾ.ಆರ್.ಶಿವಕುಮಾರ್, ಪಿಐಗಳಾದ ನಯೀಂದ ಅಹಮದ್, ಪ್ರಕಾಶ್‌ಪಾಟೀಲ್, ಪಿಎಸ್‌ಐ ಗಳಾದ ಸ್ವಾತಿ, ಯಶೋದಾ, ಎಂ.ಎಚ್.ಅಶ್ವಿನಿ, ದೀಪು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net