ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿ

ಚಿತ್ರದುರ್ಗದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ಶನಿವಾರ ಕೆ.ಸಿ. ವೀರೇಂದ್ರ ಪಪ್ಪಿ ವೀಕ್ಷಿಸಿದರು. ಡಾ.ಯುವರಾಜ್, ಡಾ.ರವೀಂದ್ರ ಇತರರಿದ್ದರು.
ಚಿತ್ರದುರ್ಗದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ಶನಿವಾರ ಕೆ.ಸಿ. ವೀರೇಂದ್ರ ಪಪ್ಪಿ ವೀಕ್ಷಿಸಿದರು. ಡಾ.ಯುವರಾಜ್, ಡಾ.ರವೀಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಾಽಕಾರಿಗಳಿಗೆ ಶಾಸಕ ವೀರೇಂದ್ರಪಪ್ಪಿ ಸೂಚನೆ
  • ವೈದ್ಯಕೀಯ ಕಾಲೇಜು ಕಾಮಗಾರಿ ವೀಕ್ಷಣೆ
  • ಡಯಾಲಿಸಿಸ್ ಕೇಂದ್ರ
ಚಿತ್ರದುರ್ಗ : ಸರ್ಕಾರಿ ಆಸ್ಪತ್ರೆಗೆ ಬರುವ ಬಹುತೇಕರು ಬಡ ವರ್ಗದವರು, ಹೀಗಾಗಿ ಸರ್ಕಾರ ನೀಡುವ ಸೌಲಭ್ಯ ಬಳಸಿಕೊಂಡು ಉಚಿತ ಆರೋಗ್ಯ ಸೇವೆ ಒದಗಿಸುವುದು ವೈದ್ಯರ, ಸಿಬ್ಬಂದಿ ಕರ್ತವ್ಯವಾಗಿದೆ ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹೇಳಿದರು.
ಜಿ¯್ಲÁಸ್ಪತ್ರೆಗೆ ಶನಿವಾರ ಭೇಟಿ ನೀಡಿ ಒಳ ರೋಗಿಗಳ ವಿವಿಧ ವಾರ್ಡ್ಗಳನ್ನು ಪರಿಶೀಲಿಸಿ, ಸೌಲಭ್ಯಗಳ ಕುರಿತು ವೈದ್ಯಾಽಕಾ ರಿಗಳ ಜತೆ ಚರ್ಚಿಸಿದ ನಂತರ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಜಿ¯್ಲÁಸ್ಪತ್ರೆಗೆ ಸಾಕಷ್ಟು ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಿz್ದÁರೆ. ಆ ನಂಬಿಕೆಯನ್ನು ವೈದ್ಯಕೀಯ ಸಿಬ್ಬಂದಿ ಉಳಿಸಿಕೊಳ್ಳಬೇಕು. ಚಿಕಿತ್ಸೆ ನೀಡುವಲ್ಲಿ ಲೋಪದೋಷ ಕಂಡುಬAದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಿ¯್ಲÁಸ್ಪತ್ರೆಯ ಔಷಽ ಕೇಂದ್ರ, ಐಸಿಯು ಹಾಗೂ ಡಯಾಲಿಸಿಸ್ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ರೋಗಿಗಳ ಆರೋಗ್ಯ ವಿಚಾ ರಿಸಿದರು. ಒಳ ರೋಗಿಗಳು ಮಾತ್ರವಲ್ಲ. ಹೊರ ರೋಗಿಗಳಿಗೂ ಉತ್ತಮ ಚಿಕಿತ್ಸೆ ನೀಡುವಂತೆ ತಾಕೀತು ಮಾಡಿದರು.
ಆವರಣ ಹಿಂಭಾಗದ ವೈದ್ಯಕೀಯ ಕಾಲೇಜಿನ ಕಾಮಗಾರಿ ವೀಕ್ಷಣೆ ವೇಳೆ ಗುತ್ತಿಗೆ ಪಡೆದವರು ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಬೇಕು. ವೈದ್ಯಾಽಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು. ಇದು ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದು, ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು.
ನಿಗದಿತ ಅವಽಯಲ್ಲಿ ಪೂರ್ಣಗೊಳಿಸಿ ವೈದ್ಯರಾಗ ಬಯಸುವ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಅನುಕೂಲ ಮಾಡಿಕೊಡುವಂತೆ ಸಲಹೆ ನೀಡಿದರು.
ಹೊರಗಿನಿಂದ ಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗದ ರೀತಿ ವಸತಿ ನಿಲಯಗಳಲ್ಲಿ ಅಗತ್ಯ ಸೌಲ ಭ್ಯಗಳಿರಬೇಕು. ಕಲಿಕೆಯಲ್ಲೂ ಮುಂಚೂಣಿಯಲ್ಲಿರುವAತೆ ಮೆಡಿಕಲï ಕಾಲೇಜಿನ ಅಽಕಾರಿಗಳು ಸಹಕಾರ ನೀಡಬೇಕೆಂದು ತಿಳಿಸಿದರು.
ವೈದ್ಯಕೀಯ ಕಾಲೇಜಿನ ಡೀನ್ ಡಾ.ಯುವರಾಜ್, ವ್ಯವಸ್ಥಾಪಕ ಸುಽÃರ್, ಜಿ¯್ಲÁ ಶಸöಚಿಕಿತ್ಸಕ ಡಾ.ರವೀಂದ್ರ, ಡಾ.ಮೇಘ, ಇಂಜಿನಿಯರ್ ಗಣೇಶ್, ಉಮೇಶ್ ಇತರರಿದ್ದರು.
ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಕೆ.ಸಿ.ವೀರೇಂದ್ರ ಪಪ್ಪಿ, ಡಾ.ರವೀಂದ್ರ ಅವರೊಟ್ಟಿಗೆ ರೋಗಿಗಳ ಚಿಕಿತ್ಸೆ ಕುರಿತು ಚರ್ಚಿಸಿದರು. ಡಾ.ಯುವರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net