ಜಮೀನು ಮಂಜೂರು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾರಂಪರಿಕ ವೈದ್ಯರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು. ಶರಣಪ್ಪ ಬಳ್ಳಾರಿ, ತಿಪ್ಪಣ್ಣಸಾಲಿಖಾನಿ ಹಾವೇರಿ, ಚ್.ಡಿ. ಪೂಜಾರ್, ವಿಜಯ ಕುಮಾರ್, ಕುಮಾರಸ್ವಾಮಿ, ಡಿ.ಟಿ. ರವಿಕುಮಾರ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭೂ ಮಂಜೂರಾತಿಗೆ ಪರಿಷತ್ ಸರ್ಕಾರಕ್ಕೆ ಮನವಿ
ಜಿಲ್ಲಾಽಕಾರಿ ಕಚೇರಿ ಬಳಿ ಪ್ರತಿಭಟನೆ
ಜಿಲ್ಲಾಽಕಾರಿ ಕಚೇರಿ ಬಳಿ ಪ್ರತಿಭಟನೆ
ಚಿತ್ರದುರ್ಗ: ಔಷಽÃಯ ಸಸ್ಯಗಳನ್ನು ಬೆಳೆಸಿ ಪಾರಂಪರಿಕ ವೈದ್ಯ ಪದ್ಧತಿ ಸಂರಕ್ಷಣೆಗೆ ಹಿರಿಯೂರು ತಾಲೂಕಿನಲ್ಲಿ ಜಮೀನು ಮಂಜೂರಾತಿಗೆ ಆಗ್ರಹಿಸಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಸಂಘಗಳ ಒಕ್ಕೂಟದಿಂದ ಜಿಲ್ಲಾಽಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಅನೇಕ ತಲೆಮಾರುಗಳಿಂದ ಪಾರಂಪರಿಕ ವೈದ್ಯರು ಔಷಽÃಯ ಸಸ್ಯಗಳ ಮೂಲಕ ಪ್ರಕೃತಿ ಚಿಕಿತ್ಸಾ ಪದ್ಧತಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಹಿರಿಯೂರು ತಾಲೂಕಿನಲ್ಲಿ ಅಗತ್ಯವಿರುವ ೧೦೮ ಎಕರೆ ಜಮೀನು ಮಂಜೂರು ಮಾಡಿ, ಪಾರಂಪರಿಕ ವೈದ್ಯಕೀಯ ಪದ್ಧತಿ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ನೆರವಾಗುವಂತೆ ಒತ್ತಾಯಿಸಿದರು.
ಅಳಿವಿನಂಚಿನಲ್ಲಿರುವ ಅಪರೂಪದ, ಅಮೂಲ್ಯ ಔಷಽÃಯ ಸಸ್ಯಗಳು, ಗಿಡಮೂಲಿಕೆಗಳು, ನಾರು, ಬೇರುಗಳು ಹಾಗೂ ವನ ಮೂಲಿಕೆಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಜೀವವೈವಿಧ್ಯ ಉದ್ಯಾನ ನಿರ್ಮಾಣ, ನ್ಯಾಚುರೋಪಥಿ ಆಧಾರಿತ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ ಆಗಬೇಕಿದೆ.
ಪಾರಂಪರಿಕ ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗಾಗಿ ತರಬೇತಿ, ಕೌಶಲಾಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ. ಔಷಽÃಯ ಸಸ್ಯಗಳ ಸಂಸ್ಕರಣೆ, ಗುಣಮಟ್ಟದ ಪರೀಕ್ಷೆ, ಔಷಧ ತಯಾರಿಕೆ ಹಾಗೂ ಮೌಲ್ಯವರ್ಧನೆಗೆ ಅಗತ್ಯ ಮೂಲ ಸೌಕರ್ಯ ಸಹಿತ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪರಿಷತ್ ಹಾಗೂ ಸಂಘಗಳ ಒಕ್ಕೂಟದ ಅಧ್ಯಕ್ಷ ಶರಣಪ್ಪ ಬಳ್ಳಾರಿ, ತಿಪ್ಪಣ್ಣಸಾಲಿಖಾನಿ ಹಾವೇರಿ, ಎಚ್.ಡಿ. ಪೂಜಾರ್, ವಿಜಯ ಕುಮಾರ್, ಕುಮಾರಸ್ವಾಮಿ, ಡಿ.ಟಿ. ರವಿಕುಮಾರ್ ಸೇರಿ ರಾಜ್ಯದ ವಿವಿಧೆಡೆಯ ಪಾರಂಪರಿಕ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.