ನೀಟ್ ಪರೀಕ್ಷೆ ಸಿದ್ಧತೆ ಕುರಿತು ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು. ನಾಗಭೂಷಣ್, ಮಂಜುನಾಥ್, ವೆಂಕಟೇಶ್ ನಾಯ್ಕï, ರೇಷ್ಮಾ ಹಾನಗಲï, ಸಿದ್ರಾಮ ಮಾರಿಹಾಳ, ಮಲ್ಲಿಕಾರ್ಜುನ, ಎಚ್. ದಿವಾಕರ್, ಇತರರು ಇದ್ದರು.
ಚಿತ್ರದುರ್ಗ: ರಾಷ್ಟಿçÃಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-೨೦೨೬) ಮೇ ೩ರಂದು ನಡೆಯಲಿದ್ದು, ಸುಸೂತ್ರವಾಗಿ ನಡೆಸಲು ಜಿ¯್ಲೆಯ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಎಡಿಸಿ ಬಿ.ಟಿ. ಕುಮಾರಸ್ವಾಮಿ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವ ತೊಂದರೆ ಆಗದಂತೆ ಡೆ¸್ಕï, ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು. ಬೇಸಿಗೆಯ ತಾಪ ಹೆಚ್ಚಿರುವುದರಿಂದ ಪರೀಕ್ಷಾ ಅವಽಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಕರ್ತವ್ಯಕ್ಕೆ ನಿಯೋಜಿಸಲಾದ ಯಾವುದೇ ಅಽಕಾರಿ, ಸಿಬ್ಬಂದಿ ಗೈರಾದಲ್ಲಿ ಅಥವಾ ಕರ್ತವ್ಯ ಲೋಪವೆಸಗಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪರೀಕ್ಷಾ ನಿಯಮಾನುಸಾರ ವಿದ್ಯಾರ್ಥಿಗಳು ಕೇಂದ್ರದೊಳಗೆ ಪಠ್ಯ ವಿಷಯಗಳು, ಕಾಗದದ ಚೂರುಗಳು, ಎಲೆಕ್ಟಾçನಿಕ್ ಒಳಗೊಂಡು ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದರು.
ಪರೀಕ್ಷಾ ದಿನದಂದು ಓಎಂಆರ್ ಭರ್ತಿ, ಉತ್ತರ ಬರೆಯಲು ವಿದ್ಯಾಥಿಗಳಿಗೆ ರಾಷ್ಟಿçÃಯ ಪರೀಕ್ಷಾ ಸಂಸ್ಥೆ ಕಪ್ಪು ಬಾಲï ಪೆನ್ ನೀಡಲಿದೆ. ಹೀಗಾಗಿ ಬೇರಾವುದೇ ರೀತಿಯ ಜೆಲ್‌ಪೆನ್ ಬಳಕೆಗೆ ಅವಕಾಶವಿಲ್ಲ. ಒಂದು ವೇಳೆ ಯಾವುದೇ ವಸ್ತು ಅಭ್ಯರ್ಥಿ ಬಳಿ ಕಂಡುಬAದಲ್ಲಿ, ಅದನ್ನು ಅಕ್ರಮವೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವೀಕ್ಷಕರ ನೇಮಕ: ೫ ಕೇಂದ್ರಗಳಿಗೂ ಜಿ¯್ಲÁಮಟ್ಟದ ಅಽಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪಾರದರ್ಶಕ, ಸುವ್ಯವಸ್ಥಿತವಾಗಿ ನಡೆಸಲು, ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆ ತಡೆಯಲು ಕೇಂದ್ರದ ಸುತ್ತಮುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ನಿಷೇಧಾe್ಞÉ ಜಾರಿ ಮಾಡಲಾಗುವುದೆಂದು ತಿಳಿಸಿದರು.
ಬಿಎಸ್‌ಎನ್‌ಎಲ್ ಇಂಟರ್ ನೆಟ್ ಸೇವೆಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಂಚೆ ಇಲಾಖೆ ಉತ್ತರ ಪತ್ರಿಕೆಯ ಬಂಡಲ್‌ಗಳನ್ನು ದೆಹಲಿಯ ರಾಷ್ಟಿçÃಯ ಪರೀಕ್ಷಾ ಸಂಸ್ಥೆಗೆ ಕಳುಹಿಸಬೇಕೆಂದು ಸೂಚಿಸಿದರು.
ನೀಟ್ ಪರೀಕ್ಷೆ ನೋಡಲï ಅಽಕಾರಿ ನಾಗಭೂಷಣ್ ಮಾತನಾಡಿ, ಜಿ¯್ಲÉಯಲ್ಲಿ ಚಿತ್ರದುರ್ಗ ೩, ಚಳ್ಳಕೆರೆ ೨ ಸೇರಿ ಒಟ್ಟು ೫ ಪರೀಕ್ಷಾ ಕೇಂದ್ರಗಳಿವೆ. ಒಟ್ಟು ೨,೮೩೫ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿz್ದÁರೆ. ಮಧ್ಯಾಹ್ನ ೨ ರಿಂದ ಸಂಜೆ ೫ರವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಬೆಳಗ್ಗೆ ೧೧ಕ್ಕೆ ಕೇಂದ್ರದೊಳಗೆ ಹಾಜರಾಗಬಹುದು. ಆದರೆ, ೧.೩೦ರ ನಂತರ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಿಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಮೆಟಲï ಡಿಟೆಕ್ಟರ್ ಅಳವಡಿಸಲಿದ್ದು, ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ತಪಾಸಣೆ ನಡೆಸಲಾಗುವುದು. ಬಯೋಮೆಟ್ರಿಕ್ ದೃಢೀಕರಣದ ನಂತರವೇ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುವುದು. ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಜೊತೆಗೆ ಪರೀಕ್ಷಾ ಪ್ರಕ್ರಿಯೆ ಸಂಪೂರ್ಣ ವಿಡಿಯೋಗ್ರಫಿ ಮಾಡಲಾಗುವುದು ಎಂದಬು ತಿಳಿಸಿದರು.
ಡಿಡಿಪಿಐ ಮಂಜುನಾಥ್, ವಿಶೇಷ ಭೂಸ್ವಾಽÃನಾಽಕಾರಿ ವೆಂಕಟೇಶ್ ನಾಯ್ಕï, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲï, ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಽಕಾರಿ ಎಚ್. ದಿವಾಕರ್, ಇತರರು ಇದ್ದರು.
ತಾಳಿ, ಕಾಲುಂಗುರ, ಜನಿವಾರಕ್ಕೆ ವಿನಾಯಿತಿ
ಮದುವೆಯಾದ ಹೆಣ್ಣು ಮಕ್ಕಳಿಗೆ ತಾಳಿ, ಕಾಲುಂಗುರ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ. ಇದೇ ರೀತಿ ಜನಿವಾರಕ್ಕೂ ವಿನಾಯಿತಿ ಇದೆ ಎಂದು ನಾಗಭೂಷಣ್ ತಿಳಿಸಿದರು. ಬೇಸಿಗೆ ಕಾಲವಾದ್ದರಿಂದ ವಿದ್ಯುತ್ ಅಭಾವ ಉಂಟಾಗದAತೆ ಪ್ರತಿ ಕೇಂದ್ರಕ್ಕೆ ೧೦ ಸಾವಿರ ರೂ. ಅನುದಾನದಲ್ಲಿ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದರು.