ಚಿತ್ರದುರ್ಗದಲ್ಲಿ ಶುಕ್ರವಾರ ನಡೆದ ರೈಲ್ವೇ ಯೋಜನೆಗಳಿಗೆ ಸಂಬAಽಸಿದ ಭೂಸ್ವಾಽÃನ ಪ್ರಕ್ರಿಯೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಂಪಿ ಗೋವಿಂದ ಎಂ.ಕಾರಜೋಳ,ಡಿಸಿ ಟಿ.ವೆಂಕಟೇಶ್,ಎಡಿಸಿ ಬಿ.ಟಿ.ಕುಮಾರಸ್ವಾಮಿ ಇತರರು ಇದ್ದರು. ---
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಽಕಾರಿಗಳಿಗೆ ಸಂಸದ ಕಾರಜೋಳ ನಿರ್ದೇಶನ
ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
ವಿಶೇಷ ಭೂಸ್ವಾಽÃನಾಽಕಾರಿ
ಚಿತ್ರದುರ್ಗ: ರೈಲ್ವೆ ಯೋಜನೆಗಳಿಗೆ ಭೂಮಿ ನೀಡುವ ಜಿಲ್ಲೆಯ ರೈತರಿಗೆ ನಿಯಮಾನುಸಾರ ಪರಿಹಾರ ಕೊಟ್ಟು ಅವರ ಹಿತ ಕಾಪಾಡುವಂತೆ ಸಂಸದ ಗೋವಿಂದ ಎಂ. ಕಾರಜೋಳ ಅಽಕಾರಿಗಳಿಗೆ ತಾಕೀತು ಮಾಡಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ನೇರ ರೈಲು ಮಾರ್ಗ ಮತ್ತು ಚಿಕ್ಕಜಾಜೂರು-ಬಳ್ಳಾ ರಿ ರೈಲ್ವೆ ಡಬ್ಲಿಂಗ್ ಯೋಜನೆ ಭೂಸ್ವಾಽÃನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ರೈಲ್ವೆ ಅಭಿವೃದ್ಧಿಗೆ ಭೂಮಿ ಕೊಡಲು ಸಿದ್ಧ್ದವಿರುವ ರೈತರು ಸೂಕ್ತ ಪರಿಹಾರ ಅಪೇಕ್ಷಿಸುತ್ತಿದ್ದಾರೆ. ಅರೆ ಮಲೆನಾಡು ಹೊಳಲ್ಕೆರೆ ಭಾಗದಲ್ಲಿ ಅಡಿಕೆ, ಮಾವಿನ ತೋಟ ಗಳಿವೆ. ತೋಟಗಾರಿಕೆ ಇಲಾಖೆ ಅಽಕಾರಿಗಳು ಈ ಬೆಳೆಗಳಿಗೆ ಸೂಕ್ತ ಪರಿಹಾರಕ್ಕಾಗಿ ವರದಿ ನೀಡಬೇಕು ಎಂದರು.
ಜಿಲ್ಲೆಯ ಯಾವುದೇ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು. ಭೂಸ್ವಾಽÃನ ಪ್ರಕ್ರಿಯೆ ಚುರುಕಾಗಬೇಕು. ಇದು ವಿಳಂಬವಾದರೆ ರೈಲ್ವೆ ಯೋಜನೆಗಳ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ಆದ್ದರಿಂದ ಭೂಸ್ವಾಽÃನ ಹಾಗೂ ರೈಲ್ವೇ ಅಽಕಾರಿಗಳ ಸರ್ವೇಗೆ ರೈತರು ಸಹಕರಿಸಬೇಕು ಎಂದರು.
ಭೂಸ್ವಾಽÃನ, ರೈಲ್ವೆ, ಕಂದಾಯ, ತೋಟಗಾರಿಕೆ, ಕೃಷಿ, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಽಕಾರಿಗಳು ಸಮನ್ವಯ ದಿಂದ ಕಾರ್ಯನಿರ್ವಹಿಸಬೇಕು. ಭೂಸ್ವಾಽÃನಕ್ಕೆ ಸಂಬAಽಸಿದ ವ್ಯಾಜ್ಯಗಳನ್ನು ಶೀಘ್ರ ಪರಿಹರಿಸಬೇಕು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದರು.
ಭೂಸ್ವಾಽÃನಕ್ಕೆ ಸಂಬAಽಸಿದAತೆ ಸಬ್‌ರಿಜಿಸ್ಟಾçರ್ ಕಚೇರಿಯ ಮಾರುಕಟ್ಟೆ ಮೌಲ್ಯದ ದರ ಆಧರಿಸಿ ಬೆಲೆ ನಿಗದಿಪಡಿಸಲಾಗು ತ್ತದೆ ಎಂದು ಹೇಳಿದ ಜಿಲ್ಲಾಽಕಾರಿ ಟಿ.ವೆಂಕಟೇಶ್, ಜಮೀನಿನಲ್ಲಿರುವ ಬೆಳೆ, ತೋಟಗಾರಿಕೆ ಬೆಳೆಗಳು, ಪಶು ಸಂಗೋಪನೆ ಹಾ ಗೂ ಕೃಷಿ ಚಟುವಟಿಕೆಗಳ ಇತರೆ ನಿರ್ಮಾಣಗಳಿಗೂ ಗರಿಷ್ಠ ಮಟ್ಟದ ಪರಿಹಾರ ಕೊಡಲಾಗುವುದು ಎಂದು ಡಿಸಿ ಭರವಸೆ ನೀಡಿದರು.
ನೇರ ರೈಲು ಮಾರ್ಗಕ್ಕೆ ಒಟ್ಟು ೧೪೦೫ ಎಕರೆ ಭೂಮಿ ಅಗತ್ಯವಿದೆ. ಈ ಪೈಕಿ ೧೨೧೧ ಎಕರೆ ಭೂಮಿಯನ್ನು ರೈಲ್ವೇ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಮೇಲ್ಸೇತುವೆ, ಕೆಳಸೇತುವೆ, ವಿದ್ಯುತ್ ಉಪ ಕೇಂದ್ರ ಹಾಗೂ ಜಾಲಗಳ ನಿರ್ಮಾಣಕ್ಕೆ ಒಟ್ಟು ೧೯೪ ಎಕರೆ ಭೂಮಿ ಅವಶ್ಯಕವಿದ್ದು, ಸ್ವಾಽÃನ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಈ ಪೈಕಿ ಚಿತ್ರದುರ್ಗ ಹಾಗೂ ಭರಮಸಾಗರದ ನಡುವೆ ೫೬ ಎಕರೆ ಭೂ ಸ್ವಾಽÃನಕ್ಕೆ ಜೆಎಂಸಿ ಪೂರ್ಣವಾಗಿದೆ. ಪಾಲವ್ವನಹಳ್ಳಿ-ಚಿತ್ರದುರ್ಗದ ಮಧ್ಯೆ ೨೮೨೫ ಎಕರೆ ಭೂ ದಾಖಲೆಗಳ ತಯಾರಿಕೆ ೧೫ ದಿನಗಳ ಅಗತ್ಯವಿದೆ. ಹಿರಿಯೂರು ತಾವರಕೆರೆ ಮಧ್ಯೆ ೩೧ ಎಕರೆ ಭೂ ಸ್ವಾಽÃನಕ್ಕೆ ಅಽಸೂಚನೆ ಹೊರಡಿಸಲಾಗಿದೆ. ಇದೇ ಮಾದರಿ ಚಿತ್ರದುರ್ಗ ಹಿರಿಯೂರು ಮಧ್ಯೆ ೭೯ ಎಕೆರೆ ಭೂ ಸ್ವಾಽÃನಕ್ಕೆ ಕ್ರಮ ವಹಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಚಿಕ್ಕಚಾಜೂರು-ಬಳ್ಳಾರಿ ನಡುವಿನ ರೈಲು ಮಾರ್ಗ ಡಬ್ಲಿಂಗ್‌ಗೆ ಹೊಳಲ್ಕೆರೆ ತಾಲೂಕಿನಲ್ಲಿ ೮೬.೦೧ಎಕರೆ, ಚಿತ್ರದುರ್ಗ-೭೨.೧೨ ಎಕರೆ, ಚಳ್ಳಕೆರೆ-೧೨೦.೩೮ ಎಕರೆ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ ೩೪.೧೧ ಎಕರೆ ಭೂಮಿ ಅಗತ್ಯವಿದೆ ಎಂದು ರೈಲ್ವೆ ಇಲಾಖೆ ತಿಳಿಸಿರುವುದಾಗಿ ವಿಶೇಷ ಭೂಸ್ವಾಽÃನಾಽಕಾರಿ ವೆಂಕಟೇಶ್‌ನಾಯ್ಕ್ ಹೇಳಿದರು. ಈಗಾಗಲೇ ಹೊಳಲ್ಕೆರೆ ತಾಲೂಕಿನ ಲ್ಲಿ ೮೬ ಎಕರೆ ಭೂ ಸ್ವಾಽÃನಕ್ಕೆ ಪ್ರಾಥಮಿಕ ಅಽಸೂಚನೆ ಹೊರಡಿಸಲಾಗಿದೆ. ಶೀಘ್ರದಲ್ಲೇ ಉಳಿದ ತಾಲೂಕುಗಳಿಗೂ ಸಂಬAಽ ಸಿದAತೆ ಅಽಸೂಚನೆ ಹೊರಡಿಸುವುದಾಗಿ ತಿಳಿಸಿದರು.
ನಿವೇಶನಕ್ಕೆ ೧೦೮೭ಎಕರೆ ಜಾಗ
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಶ್ರಯ ನಿವೇಶನ ಹಂಚಿಕೆಗೆ ೧೦೮೭ ಎಕರೆ ಜಾಗ ಗುರುತಿಸಲಾಗಿದ್ದು, ಶೀಘ್ರವೇ ಈ ಜಾಗದಲ್ಲಿ ಜಿಪಂನಿAದ ಲೇ ಔಟ್ ನಿರ್ಮಿಸಬೇಕು ಎಂದು ಕಾರಜೋಳ ಹೇಳಿದರು. ನಗರ ಪ್ರದೇಶದಲ್ಲಿ ಸ್ಲಂಬೋರ್ಡ್ನಿAದ ಮನೆಗಳನ್ನು ನಿರ್ಮಿಸಿ -Àಲಾನುಭವಿಗಳಿಗೆ ಹಸ್ತಾಂತರಿಸಬೇಕೆAದು ಸೂಚಿಸಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ,ಎಸಿ ಎಸ್.ಜೆ. ಕಾಂತರಾಜು, ಜಿಪಂ ಸಿಪಿಒ ಗಾಯತ್ರಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ.ಸವಿತಾ,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ರೈಲ್ವೆ ಇಲಾಖೆ ಇಂಜಿನಿ ಯರ್‌ಗಳಾದ ಮುನಿ ಕೃಷ್ಣ, ಹರೀಶ್, ರಜತ್ ಇತರರು ಇದ್ದರು.