ನಾಗೇಂದ್ರ ರಾಜೀನಾಮೆಗಾಗಿ ಮುಂದುವರಿದ ಪ್ರತಿಭಟನೆ

ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ, ಹೊಳಲ್ಕೆರೆ ಮಂಡಲದ ಕಾರ್ಯಕರ್ತರಿಂದ ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಡಾ. ಸಿದ್ಧಾಥ್ ಗುಂಡಾರ್ಪಿ ಮಾತನಾಡಿದರು. ಕೆ.ಟಿ. ಕುಮಾರಸ್ವಾಮಿ, ವೆಂಕಟೇಶ್‌ಯಾದವ್, ಪ್ರವೀಣ್‌ಕುಮಾರ್, ಚಿತ್ರಲಿಂಗಪ್ಪ, ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್, ಲೀಲಾವತಿ, ಸುಮಾ ಇತರರಿದ್ದರು.
ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ, ಹೊಳಲ್ಕೆರೆ ಮಂಡಲದ ಕಾರ್ಯಕರ್ತರಿಂದ ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಡಾ. ಸಿದ್ಧಾಥ್ ಗುಂಡಾರ್ಪಿ ಮಾತನಾಡಿದರು. ಕೆ.ಟಿ. ಕುಮಾರಸ್ವಾಮಿ, ವೆಂಕಟೇಶ್‌ಯಾದವ್, ಪ್ರವೀಣ್‌ಕುಮಾರ್, ಚಿತ್ರಲಿಂಗಪ್ಪ, ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್, ಲೀಲಾವತಿ, ಸುಮಾ ಇತರರಿದ್ದರು.
Published on

ಚಿತ್ರದುರ್ಗ:

ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ, ಹೊಳಲ್ಕೆರೆ ಮಂಡಲದ ಕಾರ್ಯಕರ್ತರ ಪ್ರತಿಭಟನೆ ೨ನೇ ದಿನ ಮಂಗಳವಾರವೂ ಮುಂದುವರಿಯಿತು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ. ಸಿದ್ಧಾರ್ಥ ಗುಂಡಾರ್ಪಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬ ಳಕೆ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರ ಸಂಪುಟ ಸೇರ್ಪಡೆ ಕಾಂಗ್ರೆಸ್‌ನ ನೈತಿಕತೆಯ ಕೊರತೆಗೆ ಹಿಡಿದ ಕೈಗನ್ನಡಿ ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿರುವ ಅನುದಾನ ದುರ್ಬಳಕೆ ಆಗುತ್ತಿದೆ. ನಾಗೇಂದ್ರ ಜಾಮೀನಿನ ಮೇಲೆ ಹೊರಗಿದ್ದಾರೆ ಹೊರತು ಪ್ರಕರಣ ಮುಕ್ತಾಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬAಧ ಧರ್ಮೇಂದ್ರ ಪ್ರಧಾನ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಆದರೆ, ೧೮೦ ಕೋಟಿ ರೂ.ಗೂ ಹೆಚ್ಚು ಅನುದಾನದಲ್ಲಿ ಅಕ್ರಮವಾಗಿದ್ದರೂ, ಪ್ರಕರಣದ ಆರೋಪ ಎದುರಿಸುತ್ತಿರುವ ಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದರು.
ವಿವಿಧ ಯೋಜನೆಯ ಜಿ¯್ಲÉಯ ಅರ್ಹ ಪಿಂಚಣಿದಾರರರನ್ನು ರದ್ದುಗೊಳಿಸಲಾಗಿದೆ. ಜಮೀನು ಹಕ್ಕಿಗಾಗಿ ಬಡವರು ಸಲ್ಲಿಸಿದ್ದ ಶೇ.೯೫ರಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕುಡಿವ ನೀರಿನ ಅಭಾವವಿದ್ದರೂ ಸರ್ಕಾರ ಕೇವಲ ರಾಜಕೀಯ ಕಿತ್ತಾಟದಲ್ಲಿ ತೊಡಗಿದೆ. ಆಡಳಿತ ವೈ-Àಲ್ಯ ಎದ್ದು ಕಾಣುತ್ತಿದೆ ಎಂದು ದೂರಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಕುರಿತು ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆ ಗೆ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ, ಮುಂದಿನ ಚುನಾವಣೆಗಳಲ್ಲಿ ಜನರೇ ಈ ಭ್ರಷ್ಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿz್ದÁರೆ ಎಂದು ಎಚ್ಚರಿಸಿದರು.
ಹೊಳಲ್ಕೆರೆ ಮಂಡಲ ಅಧ್ಯಕ್ಷ ಡಿ.ಬಿ. ಕುಮಾರ್ ಮಾತನಾಡಿ, ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು ಎಂದರು.
ಜಿಪA ಮಾಜಿ ಸದಸ್ಯ ತಿಪ್ಪೇಸ್ವಾಮಿ, ಬಿಜೆಪಿ ಜಿ¯್ಲÁಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಪದಾಽಕಾರಿಗಳಾದ ವೆಂಕಟೇಶ್‌ಯಾದವ್, ಪ್ರವೀಣ್‌ಕುಮಾರ್, ಚಿತ್ರಲಿಂಗಪ್ಪ, ಯಶವಂತಕುಮಾರ್, ಅರುಣ್, ಬಸವಂತಪ್ಪ, ಪ್ರತಾಪ್, ನಾಗರಾಜ್‌ಬೇದ್ರೆ, ಬಸವೇಶ್, ದಗ್ಗೆ ಶಿವಪ್ರಕಾಶ್, ಲೀಲಾವತಿ, ಸುಮಾ, ಪರಶುರಾಮ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net