ಆದಿಗುರು ಶಂಕರಾಚಾರ್ಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಚಿತ್ರದು ರ್ಗದಲ್ಲಿ ಮಂಗಳವಾರ ಬ್ರಾಹ್ಮಣ ಸಂಘದ ಪದಾಽಕಾರಿಗಳು ಸದಸ್ಯರು ಪ್ರತಿಭಟನೆ ನಡೆಸಿದರು. ಡಿ.ಜಿ.ಪ್ರಾಣೆÃಶರಾವ್, ಟಿ.ಕೆ.ಚಂದ್ರ ಶೇಖರರಾವ್,ಕೆ.ಎಚ್.ಶಂಕರ್, ದಿವಾಕರ್,ರಾಘವೇಂದ್ರ,ಉಷಾ, ಜ್ಯೋತಿ ಇತರರು ಪ್ರತಿಭಟನೆಯಲ್ಲಿ ಇದ್ದರು.
ಚಿತ್ರದುರ್ಗ: ಶ್ರೀ ಆದಿ ಗುರು ಶಂಕರಾಚಾರ್ಯರ ಬಗ್ಗೆ ಅವಹೇಳನ ಮಾಡಿ ಅನಗತ್ಯ ವಿವಾದ ಉಂಟು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿತ್ರದುರ್ಗ ಬ್ರಾಹ್ಮಣ ಸಂಘ ಹಾಗೂ ಶಾಂಕರ ತತ್ವ ಅಭಿಯಾನದಿಂದ ಜಿಲ್ಲಾಽಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಉಡುಪಿಯ ರಾಜಾಂಗಣದಲ್ಲಿ ನಡೆದ ಹರಿಕಥಾ ಕಾಲಕ್ಷೇಪ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಯಾಗಿ ಮಾತನಾಡಿ ಶಂಕರರು ರಚಿಸಿರುವ ಕೃತಿಗಳು ದುಶಾಸö ಎಂಬುದಾಗಿ ಸಮಾಜಕ್ಕೆ ತಪ್ಪು ಸಂದೇಶ ನೀಡಿರುವುದನ್ನು ಸಹಿಸಲಾಗದು. ಇದು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿ ಹಿಂದೂಗಳ ಶ್ರದ್ಧಾ ಭಕ್ತಿ, ನಂಬಿಕೆಗೆ ಆಘಾತವನ್ನುಂಟು ಮಾಡಿದೆ.
ದೈವಾಂಶ ಸಂಭೂತರಾದ ಆಚಾರ್ಯತ್ರಯರು ಸಮಾಜದಲ್ಲಿ ಪರಸ್ಪರ ಸಾಮರಸ್ಯ ಮೂಡಿಸಿದ್ದಾರೆ. ಅವರು ಪ್ರತಿಪಾದಿಸಿದ ಅದ್ವೈತ ತತ್ವವು ಕಲ್ಪಿತವಾದುದಲ್ಲ. ವೇದ ಶಾಸ್ತ್ರ ಪುರಾಣಗಳಲ್ಲಿ ಪ್ರತಿಪಾದಿತವಾದ ಅದ್ವೆÊತತ್ವವನ್ನು ತಿಳಿಸಿದ್ದಾರೆ.
ಅಂತಹ ಮಹಾತ್ಮರಿಗೆ ಆಗಿರುವ ನಿಂದನೆ ಧರ್ಮಾಭಿಮಾನಿಗಳ ಭಕ್ತಿಗೆ ಧಕ್ಕೆಯುಂಟಾಗಿದೆ. ಇಂತಹ ಘಟನೆಗಳು ಇನ್ನು ಮುಂದೆ ಮರುಕಳಿಸಬಾರದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಂಘದ ಪ್ರಮುಖರು ಆಗ್ರಹಿಸಿ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಡಿ.ಜಿ.ಪ್ರಾಣೇಶರಾವ್, ಮಾಜಿ ಅಧ್ಯಕ್ಷ ಟಿ.ಕೆ. ಚಂದ್ರಶೇಖರರಾವ್,ನಿರ್ದೇಶಕರಾದ ಕೆ.ಎಚ್. ಶಂಕರ್, ದಿವಾಕರ್, ರಾಘವೇಂದ್ರ, ಶಾಂಕರ ತತ್ವ ಪ್ರಸಾರ ಅಭಿಯಾನ ಚಿತ್ರದುರ್ಗ ಜಿಲ್ಲಾ ಸಂಚಾಲಕಿ ಉಷಾ, ತಾ ಲೂಕು ಸಂಚಾಲಕರಾದ ವೆಂಕಟೇಶ್ ದೀಕ್ಷಿತ್, ಜ್ಯೋತಿ.
ವಿವಿಧ ತಾಲೂಕು ಬ್ರಾಹ್ಮಣ ಸಂಘಗಳ ಪದಾಽಕಾರಿಗಳಾದ ಅನಂತ ರಾಮ್ ಗೌತಮ್, ಚಂದ್ರಪ್ರಕಾಶ್, ವೆಂಕಟೇಶ್ ದೀಕ್ಷಿತ್, ಸ್ವಾಮಿನಾಥ್, ಪಿ.ನರಸಿಂಹಮೂರ್ತಿ, ಮಾರುತಿಮೋಹನ್, ಮುರುಳಿ ಕೃಷ್ಣ, ಬ್ರಹ್ಮ ಚೈತನ್ಯ ಮಂಡಳಿಯ ಶಾರದಾ ಸ್ವಾಮಿನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.