ಚಳ್ಳಕೆರೆ ತಾಲೂಕಿನ ಕಾಟಂದೇವರ ಕೋಟೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪಲ್ಸ್ ಪೋಲಿಯೊ ಜಾಗೃತಿ ಜಾಥಾ ನಡೆಯಿತು. ಹನುಮಂತರಾಯ, ಕೆ.ಆರ್. ಹರೀಶ್, ಎಸ್. ಸುಜಾತಾ, ಎಲ್. ಅನುಷಾ, ಎಂ. ಮಂದಾರ ಇತರರು ಇದ್ದರು. Polio
ಚಳ್ಳಕೆರೆ: ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿ ಹನುಮಂತರಾಯ ಹೇಳಿದರು. Polio
ಚಳ್ಳಕೆರೆ ತಾಲೂಕಿನ ಕಾಟಂದೇವರ ಗ್ರಾಮದಲ್ಲಿ ಶನಿವಾರ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಕುರಿತು ಸರ್ವೋದಯ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಲಾಗಿದೆ. ಇತರೆ ದೇಶಗಳಲ್ಲಿ ಪೋಲಿಯೊ ಸಂಬಂಧಿತ ಕಾಯಿಲೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜಾಗೃತಿ ವಹಿಸಲಾಗಿದೆ. ಜೂ.28ರಂದು ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. 4 ದಿನಗಳ ಕಾಲ ಅಭಿಯಾನ ನಡೆಯಲಿದೆ. ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಶಿಕ್ಷಕ ಕೆ.ಆರ್. ಹರೀಶ್ ಮಾತನಾಡಿ, ಪೋಲಿಯೊ ಮತ್ತು ಇತರೆ ಕಾಯಿಲೆಗಳ ರಕ್ಷಣೆಗೆ ಪಲ್ಸ್ ಪೋಲಿಯೊ ಉಪಯುಕ್ತವಾಗಿದೆ. ಪಾಲಕರು ನಿರ್ಲಕ್ಷೃ ಮಾಡದೆ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಬೇಕು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರಾದ ಒ. ಮಂಜುಳಾ, ಎ. ಶಾಂತಲಾ, ಸಹಶಿಕ್ಷಕರಾದ ಆರ್. ಕುರುಕುಂಟಪ್ಪ, ಬಿ.ಎ. ಶಾಂತೇಶ್, ಇ. ಮಲ್ಲೇಶ್, ಜಿ.ಎಸ್. ಬಂಡೇಶ್, ಬಿ.ವಿ. ಅರ್ಚನಾ, ಜಿ.ಎಸ್. ಅನಿತಾಕುಮಾರಿ, ಭಾಗ್ಯಮ್ಮ ಇತರರು ಇದ್ದರು.