ಚಿತ್ರದುರ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ, ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಹಾಗೂ ಪರಿಹಾರ ಕಾಯ್ದೆ ಕುರಿತ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರದಲ್ಲಿ ೨ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಽÃಶೆ ಉಜ್ವಲಾ ವೀರಣ್ಣ ಸಿದ್ದಣ್ಣನವರ್ ಮಾತನಾಡಿದರು. ಕೆ.ಆರ್.ಉಷಾ, ಎನ್.ಅನಿಲ್‌ಕುಮಾರ್, ಮಂಜುನಾಥ್, ಆರ್.ಕರಿಸಿದ್ದಪ್ಪ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಿರಿಯ ಸಿವಿಲ್ ನ್ಯಾಯಾಽÃಶೆ ಉಜ್ವಲಾ ಹೇಳಿಕೆ
ತರಬೇತಿ ಕಾರ್ಯಾಗಾರ
ಪ್ರಧಾನ ಅಂಚೆ ಕಚೇರಿ
ಚಿತ್ರದುರ್ಗ: ಸಮಾಜದಲ್ಲಿ ಮಹಿಳೆಗೆ ರಕ್ಷಣೆಯ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ೨ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಽÃಶೆ ಉಜ್ವಲಾ ವೀರಣ್ಣ ಸಿದ್ದಣ್ಣವರ್ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಶುಕ್ರವಾರ ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಹಾಗೂ ಪರಿಹಾರ ಕಾಯ್ದೆ ಕುರಿತ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಹಿಳೆ ಮಾನಸಿಕವಾಗಿ ಬಲಶಾಲಿಯಾಗಿದ್ದರೂ ದೈಹಿಕವಾಗಿ ದುರ್ಬಲಳು ಎಂಬ ಕಾರಣಕ್ಕೆ ರಕ್ಷಣೆ ಅಗತ್ಯವಿದೆ ಎಂದರು.
ಸಾಧನೆ ಮೂಲಕ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು, ಪುರುಷರಿಗೆ ಸಮಾನ ಸ್ಪರ್ಧೆ ನೀಡುತ್ತಿದ್ದಾಳೆ. ಸರ್ಕಾರ, ಸಮಾಜವೂ ಸಮಾನ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ದೈಹಿಕವಾಗಿ ದುರ್ಬಲಳು ಎಂಬ ಕಾರಣಕ್ಕೆ ಮಹಿಳೆಯರ ಪರವಾಗಿ ಸಾಕಷ್ಟು ಕಾನೂನು, ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ದುರ್ಬಲರಿಗೆ ರಕ್ಷಣೆ ಕೊಡಬೇಕೆಂದು ನಮ್ಮ ಸಂವಿಧಾನದಲ್ಲೇ ಹೇಳಿದೆ. ಹಾಗಾಗಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಕೊಡ ಬೇಕಾಗಿರುವುದು ಸಮಾಜದ ಕರ್ತವ್ಯ. ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟಲು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವÊದ್ಧಿ ಇಲಾಖೆ ಲಿಂಗ ತಜ್ಞೆ ಗೀತಾ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಹತ್ತಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ ದೂರು ಸಮಿತಿ ರಚಿಸುವುದು ಕಡ್ಡಾಯ ಸೇರಿದಂತೆ ಮತ್ತಿತರ ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್ ಹೊರಡಿಸಿದೆ ಎಂದರು.
ಚಿತ್ರದುರ್ಗ ಅಂಚೆ ವಿಭಾಗದ ಅಂಚೆ ಅಽÃಕ್ಷಕಿ ಕೆ.ಆರ್.ಉಷಾ, ಸಹಾಯಕ ಅಂಚೆ ಅಽÃಕ್ಷಕ ಎನ್.ಅನಿಲ್‌ಕುಮಾರ್, ಅಂಚೆ ಪಾಲಕ ಮಂಜುನಾಥ, ಮಾರುಕಟ್ಟೆ ಅಽಕಾರಿ ಆರ್.ಕರಿಸಿದ್ದಪ್ಪ ಇತರರಿದ್ದರು.