ಸವಾಲುಗಳ ನಡುವೆಯೇ `ಭದ್ರಾ' ಕಾಮಗಾರಿಯಲ್ಲಿ ಪ್ರಗತಿ

 ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಭದ್ರಾ ಮೇಲ್ದಂಡೆ ಯೋಜನೆ ಕುರಿತ ಸಂವಾದ ಕಾರ್ಯಕ್ರಮವನ್ನು ಎಡಿಸಿ ಬಿ.ಟಿ. ಕುಮಾರಸ್ವಾಮಿ ಉದ್ಘಾಟಿಸಿದರು. ಎಚ್. ರವಿಶಂಕರ್, ಜಿ.ಸಿ. ಲೋಕೇಶ್, ಬಿ.ಎಸ್. ವಿನಾಯಕ್ ತೊಡರನಾಳ್, ಬೆಲಗೂರು ಸೆಮೀವುಲ್ಲಾ ಇತರ ಗಣ್ಯರು ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಭದ್ರಾ ಮೇಲ್ದಂಡೆ ಯೋಜನೆ ಕುರಿತ ಸಂವಾದ ಕಾರ್ಯಕ್ರಮವನ್ನು ಎಡಿಸಿ ಬಿ.ಟಿ. ಕುಮಾರಸ್ವಾಮಿ ಉದ್ಘಾಟಿಸಿದರು. ಎಚ್. ರವಿಶಂಕರ್, ಜಿ.ಸಿ. ಲೋಕೇಶ್, ಬಿ.ಎಸ್. ವಿನಾಯಕ್ ತೊಡರನಾಳ್, ಬೆಲಗೂರು ಸೆಮೀವುಲ್ಲಾ ಇತರ ಗಣ್ಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್ ಅಂತ್ಯದೊಳಗೆ ಗೋನೂರು ಆಕ್ವಾಡೆಕ್‌ಗೆ ನೀರು
  • ಯೋಜನೆ ಪೂರ್ಣಕ್ಕೆ ಪ್ರಾಮಾಣಿಕ ಪ್ರಯತ್ನ
  • ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯಇಂಜಿನಿಯರ್ ಪ್ರಕಟ
ಚಿತ್ರದುರ್ಗ: ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಲೇ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಶ್ರಮಿಸಲಾ ಗುವುದು ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಎಚ್. ರವಿಶಂಕರ್ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಂಭಾAಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಭದ್ರಾ ಮೇಲ್ದಂಡೆ ಯೋಜನೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೦೮ ರಲ್ಲಿ ಪ್ರಾರಂಭವಾದ ಈ ಯೋಜನೆ ಸವಾಲುಗಳನ್ನು ನಿಬಾಯಿಸುತ್ತಲೇ ನಿಗಮ ಪ್ರಗತಿ ಸಾಽಸುತ್ತಿದೆ. ಭೂಸ್ವಾಽÃನ ಹಂತದಲ್ಲಿದ್ದ ಕೆಲವು ತೊಡಕುಗಳು ಕೂಡ ನಿವಾರಣೆಯಾಗಿವೆ.
೧೧೪ ಕಿ.ಮಿ.ಚಿತ್ರದುರ್ಗ ಶಾಖಾ ಕಾಲುವೆ ಮಾರ್ಗದಲ್ಲಿ ಕಂಟ್ರೋಲ್‌ಬ್ಲಾಸ್ಟಿAಗ್ ಮೂಲಕ ೨೦೦ ಮೀಟರ್ ಕಾಮಗಾರಿಯನ್ನು ಒಂದೂವರೆ ತಿಂಗಳಲ್ಲಿ ಸಂಪೂರ್ಣಗೊಳಿಸಿ ಆಗಸ್ಟ್ ಅಂತ್ಯದೊಳಗೆ ಚಿತ್ರದುರ್ಗ ತಾಲೂಕು ಗೋನೂರು ಆಕ್ವಾಡೆಕ್‌ಗೆ ನೀರು ಹರಿಸಲಾಗುವುದು.
ಪ್ರಾಯೋಗಿಕವಾಗಿ ಈ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಜಗಳೂರಿಗೆ ನೀರು ಹರಿಸಲಾಗುವುದು. ಇದೇ ಅವಽಯಲ್ಲೇ ೯೦೦ ಮೀಟರ್ ಉದ್ದದ ಆಕ್ವಾಡೆಕ್ ಕೆಲಸವೂ ಪೂರ್ಣವಾಗಲಿದೆ ಎಂದರು.
ಯೋಜನೆಯಡಿ ಕೈ ಬಿಟ್ಟು ಹೋದ ಕೆರೆಗಳು ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ ಅವರು, ಕೇಂದ್ರ ಘೋ ಷಿಸಿರುವ ೫೩೦೦ ಕೋಟಿ ರೂ.ಅನುದಾನ ಬಿಡುಗಡೆಗೆ ನಡೆಸಿರುವ ಪ್ರಯತ್ನ, ಈವರೆಗೆ ಆದ ವೆಚ್ಚ, ಇನ್ನು ೨ ಟವರ್‌ಗಳ ನಿರ್ಮಾಣ ಮತ್ತಿತರ ವಿವರಗಳೊಂದಿಗೆ ವಾಟರ್‌ಲಿಫ್ಟ್, ಕೆರೆಗಳಿಗೆ ನೀರು ತುಂಬಿಸುವುದು, ಅಚ್ಚುಕಟ್ಟು ಪ್ರದೇಶಗಳಿಗೆ ಹನಿ ನೀರಾವರಿ ಮೂಲಕ ನೀರೋದಗಿಸುವ, ಈ ಯೋಜನೆಯ ೩ ಭಾಗಗಳಲ್ಲಿ ಆಗತ್ತಿರುವ ಪ್ರಗತಿ ಕುರಿತು ವಿವರಿಸಿದರು.
ಯೋಜನೆಗೆ ೨೯.೯ ಟಿಎಂಸಿ ನೀರು ಹಂಚಿಕೆಯಾಗಿದೆ. ಕಳೆದ ೬ ವರ್ಷಗಳಲ್ಲಿ ಪ್ರತಿ ವರ್ಷ ಇಂತಿಷ್ಟರAತೆ ಒಟ್ಟಾರೆ ವಿವಿ ಸಾಗರಕ್ಕೆ ಭದ್ರಾದಿಂದ ೨೮ ಟಿಎಂಸಿ ನೀರು ಹರಿದಿದೆ. ಪರಿಷ್ಕೃತ ಯೋಜನಾ ವೆಚ್ಚ ೨೧,೧೬೭ ಕೋಟಿ ರೂ. ಪೈಕಿ ಕಳೆದ ಜೂನ್ ಅಂತ್ಯಕ್ಕೆ ೧೨೧೮೧ ಕೋಟಿ ರೂ.ಖರ್ಚಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ತಹಸೀಲ್ದಾರ್‌ಆಗಿದ್ದ ಅಂದಿನಿAದ ಯೋಜನೆ ಪ್ರಗತಿ ಗಮನಿಸಿದ್ದೇನೆ. ಇದರ ಭೂ ಸ್ವಾಽÃನಾಽಕಾರಿಯಾಗಿದ್ದೆ. ಜಿಲ್ಲೆಗೆ ಭದ್ರಾ ನೀರು ಹರಿದರೆ ಜನರ ಹರ್ಷಧಾರೆಗೆ ಕಾರಣವಾಗಲಿದೆ. ಅಂತರ್ಜಲದ ಅತೀ ಬಳಕೆ ತಪ್ಪ ಬೇಕಾದರೆ ಯೋಜನೆ ತ್ವರಿತ ಅನುಷ್ಠಾನದ ಅಗತ್ಯವಿದೆ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಮಾತನಾಡಿ, ಕಳೆದ ವರ್ಷ ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದ ಮಾಧ್ಯಮ ಸಂಜೀವಿನಿ ಕಾರ್ಯಕ್ರಮ ಜಾರಿಯಾಗಿಲ್ಲ. ಮಾನ್ಯತೆ ಪಡೆದವರೊಂದಿಗೆ ರಾಜ್ಯದ ಎಲ್ಲ ಪತ್ರಕರ್ತರಿಗೂ ಇದರ ಪ್ರಯೋಜನ ಸಿಗಬೇಕಿದೆ ಎಂದರು.
ಪತ್ರಕರ್ತ ಬೆಲಗೂರು ಸಮೀವುಲ್ಲಾ ಅವರು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ವಿನಾ ಯಕ್ ತೊಡರನಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಸಿ. ಹೆಂಜಾರಪ್ಪ, ಕನ್ನಡ, ರೈತ ಹಾಗೂ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ರಮೇಶ್, ಮಹಾಂತೇಶ್, ಕೆ.ಟಿ. ಶಿವಕುಮಾರ್, ಈಚಘಟ್ಟದ ಸಿದ್ದವೀರಪ್ಪ, ಲಕ್ಷಿ÷್ಮÃಕಾಂತ್, ಹಂಪಯ್ಯನಮಾಳಿಗೆ ಧನಂಜಯ, ವೈ. ಕುಮಾರ್, ಸುರೇಶಬಾಬು, ಪ್ರೊ.ಜೆ. ಯಾದವರೆಡ್ಡಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಪತ್ರಕರ್ತರಾದ ರವಿಮಲ್ಲಾಪುರ, ಎಂ.ಎನ್. ಅಹೋಬಲಪತಿ ನಿರೂಪಿಸಿದರು. ವಿ. ವೀರೇಶ್ ಸ್ವಾಗತಿಸಿ, ಎಸ್.ಸಿದ್ದರಾಜು ವಂದಿಸಿದರು. ಹನುಮಂತಪ್ಪ ಪ್ರಾರ್ಥಿಸಿದರು.
೨ನೇ ಹಂತದ ಹೋರಾಟ ಆರಂಭವಾಗಲಿ
ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗದ ಜಿಲ್ಲೆಗಳಲ್ಲಿ ರಾಜಕಾರಣದ ಗಟ್ಟಿ ಧ್ವನಿ ಇದೆ. ಸಮಸ್ಯೆಗಳ ಅರಿವು ಅಲ್ಲಿಯ ಜನರಿಗೆ ಇದೆ. ಆದರೆ, ಮಧ್ಯಕರ್ನಾಟಕದ ಚಿತ್ರದುರ್ಗದಲ್ಲಿ ಪ್ರಬಲ ರಾಜಕೀಯ ನಾಯಕ್ವದ ಕೊರತೆ ಕಾಡಿದೆ ಎಂದು ಸೆಮೀವುಲ್ಲಾ ಹೇಳಿದರು.
ನ್ಯಾಯಾಂಗದ ಕ್ರಿಯಾಶೀಲತೆಯಂತೆ, ಈ ಜಿಲ್ಲೆಯ ಜರ್ನಲಿಸಂ ಆಕ್ಟಿವ್ ಆಗಿದೆ. ರೈತರು, ದಲಿತರು, ನೊಂದವರ, ಬಡವರ ಪರವಾಗಿ ಇಲ್ಲಿಯ ಪತ್ರಕರ್ತರ ತೋರಿಸುತ್ತಿರುವ ಕಾಳಜಿ, ಭದ್ರಾ ಮೇಲ್ದಂಡೆಗೆ ನಡೆಸಿದ ಕ್ರಿಯಾಶೀಲ ಹೋರಾಟ ಪರಂಪರೆ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ. ಭದ್ರಾ ಕುರಿತಂತೆ ಪಕ್ಷಾತೀತವಾಗಿ ೨ನೇ ಹಂತದ ಹೋರಾಟಕ್ಕೆ ಇವತ್ತಿನಿಂದಲೇ ಚಾಲನೆ ಸಿಗಬೇಕಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net