ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಆದ್ಯತೆ ನೀಡಿ

 ಚಿತ್ರದುರ್ಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳ ಪರಿಣಾಮ ಜಾರಿ ಕುರಿತ ತಾಲೂಕು ಮಟ್ಟದ ಅಽಕಾರಿಗಳ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ತಾಪಂ ಇಒ ವೈ.ರವಿಕುಮಾರ್ ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳ ಪರಿಣಾಮ ಜಾರಿ ಕುರಿತ ತಾಲೂಕು ಮಟ್ಟದ ಅಽಕಾರಿಗಳ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ತಾಪಂ ಇಒ ವೈ.ರವಿಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಮಟ್ಟದ ಅಽಕಾರಿಗಳ ಸಭೆಯಲ್ಲಿ ಎಡಿಸಿ ತಾಕೀತು
  • ಜೂ. ೧ರಂದು ಡಿಎಸ್‌ಹಳ್ಳಿಯಲ್ಲಿ ಶಾಲಾ ಪ್ರಾರಂಭೋತ್ಸವ
  • ಎಸ್‌ಎಸ್‌ಎಲ್‌ಸಿ -Àಲಿತಾಂಶ ಸುಧಾರಣೆ
ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಬಲಪಡಿಸುವ ಜತೆಗೆ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ವಿಶೇಷ ಆಸಕ್ತಿ ವಹಿಸುವಂತೆ ಚಿತ್ರದುರ್ಗ ತಾಲೂಕು ಉಸ್ತುವಾರಿ ಅಽಕಾರಿ, ಎಡಿಸಿ ಬಿ.ಟಿ.ಕುಮಾರಸ್ವಾಮಿ ಶಿಕ್ಷಕರು, ಅಽಕಾರಿಗಳಿಗೆ ಸೂಚಿ ಸಿದರು.
ತಾಪಂದಲ್ಲಿ ಶುಕ್ರವಾರ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳ ಪರಿಣಾಮ ಜಾರಿ ಕುರಿತ ತಾಲೂಕು ಮ ಟ್ಟದ ಅಽಕಾರಿಗಳ ಸಭೆಯಲ್ಲಿ ಮಾತನಾಡಿ, ಪಾಲಕರ ಖಾಸಗಿ ಶಾಲೆಗಳ ವ್ಯಾಮೋಹದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾ ರ್ಥಿಗಳ ದಾಖಲಾತಿ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಬಡವರು, ರೈತರ ಮಕ್ಕಳಿಗೆ ಆರ್ಥಿಕ ಹೊರೆ ಆಗಬಾರದು ಎಂದಾದರೆ ಅದಕ್ಕೆ ಸರ್ಕಾರಿ ಶಾಲೆಗಳೇ ಅತ್ಯುತ್ತಮ. ನಮ್ಮ ಶಿಕ್ಷಕ ರಿಗೆ ಸೂಕ್ತ ಶಿಕ್ಷಣ, ತರಬೇತಿ ಇರುತ್ತದೆ. ಈ ಕುರಿತು ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು. ದಾಖಲಾತಿ, ಹಾಜರಾತಿ ಯೊಂದಿಗೆ ಕಲಿಕೆ ಗುಣಮಟ್ಟವೂ ಮುಖ್ಯ. ಅಽಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಎಸ್‌ಎಸ್‌ಎಲ್‌ಸಿ -Àಲಿತಾಂಶ ಸುಧಾರಣೆಗೆ ಮೊದಲ ದಿನದಿಂದಲೇ ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಮೇ ೨೮ರಿಂದಲೇ ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ಪೂರ್ವಸಿದ್ಧತೆ ನಡೆಸಿದ್ದಾರೆ. ಜೂ. ೧ರಿಂದ ಶಾಲೆಗಳ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಸಮನ್ವಯಾಽಕಾರಿ ಸಂಪತ್‌ಕುಮಾರ್ ತಿಳಿಸಿದರು.
ತಾಲೂಕು ಮಟ್ಟದ ಕಾರ್ಯಕ್ರಮದ ಉದ್ಘಾಟನೆ ಡಿಎಸ್ ಹಳ್ಳಿಯಲ್ಲಿ ಆಯೋಜಿಸಲಾಗಿದೆ. ಶೇ.೮೪ ಪಠ್ಯ ಪುಸ್ತಕಗಳು ಪೂರೈಕೆ ಯಾಗಿದೆ. ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ೧ರಿಂದ ೫ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಪರಿ ವರ್ತಿಸಲಾಗಿದ್ದು,ದ್ವಿಭಾಷಾ ಕಲಿಕೆ ಇರಲಿದೆ ಎಂದು ತಿಳಿಸಿದರು.
ಇದಕ್ಕಾಗಿ ತಾಲೂಕಿನ ೮೪೫ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಕನಿಷ್ಠ ೧೦೦ಕ್ಕಿಂತ ಹೆಚ್ಚು ಮಕ್ಕಳಿರುವ ತಾಲೂಕಿನ ೨೨ ಶಾ ಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳ ಆರಂಭಕ್ಕೆ ಅನುಮತಿ ಸಿಕ್ಕಿದ್ದು, ಮಕ್ಕಳ ದಾಖಲಾತಿಗೆ ಇದು ಸಹಕಾರಿಯಾಗಲಿದೆ ಎಂದರು.
ಮಳೆಗಾಲ ಹಿನ್ನೆಲೆ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದರೆ ಪರ್ಯಾಯ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಶಾಲಾ ಆವರಣ ಸದಾ ಸ್ವಚ್ಛವಾಗಿರಬೇಕು. ಹಾವುಗಳು ಕಾಣಿಸಿಕೊಳ್ಳುತ್ತಿವೆ ಎಂದು ಕೇಳಿದ್ದೇನೆ. ಶಾಲಾ ಕಟ್ಟಡಗಳ ಸುರಕ್ಷತೆ ಬಗ್ಗೆ ಲೋಕೋಪ ಯೋಗಿ ಇಲಾಖೆಯಿಂದ ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದರು.
ಇದರೊಂದಿಗೆ ಸ್ಥಳೀಯ ಸಂಸ್ಥೆಗಳು, ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯಿಂದ ಸುರಕ್ಷತೆಗೆ ಸಂಬAಽಸಿದAತೆ ದೃಢೀ ಕರಣ ಪತ್ರ ಪಡೆದು ೨ ದಿನಗಳಲ್ಲಿ ವರದಿ ಸಲ್ಲಿಸಬೇಕು. ತಾಲೂಕಿನ ಎಲ್ಲ ೨೦ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಮ ತ್ತು ನಾಯಿ ಕಡಿತಕ್ಕೆ ಸಂಬAಽಸಿದ ಔಷಧ ಲಭ್ಯವಿರಬೇಕು. ಎಚ್‌ಪಿವಿ ಲಸಿಕೆ ಮಹತ್ವದ ಕುರಿತು ಹೆಚ್ಚು ಜಾಗೃತಿ ಮೂಡಿಸ ಬೇಕು ಎಂದರು.
ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ ವಹಿಸುವಂತೆ ತಾಲೂಕು ಆರೋಗ್ಯ ವೈದ್ಯಾಽಕಾರಿ ಡಾ.ಬಿ.ವಿ.ಗಿರೀಶ್ ಅವರಿಗೆ ಸೂಚಿಸಿದರು. ರೇಷ್ಮೆ ಬೆಳೆ ವಿಸ್ತರಣೆಗೆ ಶ್ರಮಿಸುವಂತೆ ಅಽಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಇನ್ನೂ ಹಲವು ಇಲಾಖೆ ಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಗೈರು ಹಾಜರಾದ ಅಽಕಾರಿಗಳಿಗೆ ನೋಟಿಸ್ ಜಾರಿಗೆ ಎಡಿಸಿ ತಿಳಿಸಿದರು. ತಾಪಂ ಇಒ ವೈ.ರವಿಕುಮಾರ್, ಸಹಾಯಕ ನಿರ್ದೇ ಶಕ ರ‍್ರಿಸ್ವಾಮಿ ಇತರರು ಇದ್ದರು.
ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕಿ
ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರನ್ನು ಮಟ್ಟ ಹಾಕಲು ಅಽಕಾರಿಗಳು ಕ್ರಮ ವಹಿಸಬೇಕು ಎಂದು ಎಡಿಸಿ ಹೇಳಿದರು. ಸರ್ವರ್ ಸಹಿತ ಕೆಲವೊಂದು ಸಮಸ್ಯೆಗಳ ಕುರಿತು ಆಹಾರ ಇಲಾಖೆ ಅಽಕಾರಿ ವಿವರಿಸಿದರು. ಕಾಳಸಂತೆಕೋರರು ಬೆದರಿಕೆಯೊಡ್ಡಿದರೆ ಹೆದರದೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net