ಅಡಿಕೆ ಜತೆ ತೋಟಗಾರಿಕೆ ಬೆಳೆಗಳಿಗೆ ಆದ್ಯತೆ ಕೊಡಿ meeting

ದಾಸಿಕಟ್ಟೆ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳ ನಿರ್ವಹಣೆ ಕುರಿತ  ಒಂದು ದಿನದ ಕಾರ್ಯಾಗಾರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎನ್. ಚಂದ್ರಕುಮಾರ್ ಮಾತನಾಡಿದರು. ವಿರೂಪಾಕ್ಷಪ್ಪ, ಸಿ.ಟಿ. ಸಾಗರ್, ಕೆ.ಎಂ. ಸುನೀಲ್,  ಎಸ್.ಎಂ. ಹರೀಶ್, ಎ.ಕೆ. ಬಸವರಾಜ್ ಇತರರಿದ್ದರು. meeting
ದಾಸಿಕಟ್ಟೆ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎನ್. ಚಂದ್ರಕುಮಾರ್ ಮಾತನಾಡಿದರು. ವಿರೂಪಾಕ್ಷಪ್ಪ, ಸಿ.ಟಿ. ಸಾಗರ್, ಕೆ.ಎಂ. ಸುನೀಲ್, ಎಸ್.ಎಂ. ಹರೀಶ್, ಎ.ಕೆ. ಬಸವರಾಜ್ ಇತರರಿದ್ದರು. meeting
Published on

ಪ್ರಮುಖ ಮುಖ್ಯಾಂಶಗಳು

  • ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಹೇಳಿಕೆ
ಚಿಕ್ಕಜಾಜೂರು: ರಾಜ್ಯದಲ್ಲಿ ಅಡಿಕೆ ಬೆಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಮುಂದೆ ನೀರಿನ ಸಮಸ್ಯೆ ಉಂಟಾದಲ್ಲಿ ರೈತರಿಗೆ ಆರ್ಥಿಕ ಸಮಸ್ಯೆ ಎದುರಾಗಬಹುದು. ಆದ್ದರಿಂದ, ಅಡಿಕೆ ಜತೆ ಗೋಡಂಬಿ, ಹಲಸು, ಕಾಳು ಮೆಣಸು, ಡ್ರ್ಯಾಗನ್ ಫ್ರೂಟ್ ಸೇರಿದಂತೆ ಇನ್ನಿತರೆ ತೋಟಗಾರಿಕೆ ಬೆಳೆಗಳಿಗೆ ರೈತರು ಆದ್ಯತೆ ನೀಡಬೇಕು ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಹೇಳಿದರು. meeting
ಸಮೀಪದ ದಾಸಿಕಟ್ಟೆ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಬಬ್ಬೂರು ಾರ್ಮ್‌ನ ವಿಜ್ಞಾನಿ, ಕೀಟ ತಜ್ಞ ಡಾ.ವಿ.ಎಸ್. ಓಂಕಾರಪ್ಪ ಮಾತನಾಡಿ, ಸಾವಯವ ಗೊಬ್ಬರ ಬಳಸುವ ಜಮೀನುಗಳಿಗೆ ಕೀಟ, ರೋಗ ಬೀಳುವುದು ಕಡಿಮೆ. ಹಿಂದೆಲ್ಲಾ ಪ್ರತಿ ಮನೆಯಲ್ಲಿ ದೇಸಿ ಹಸು, ಎಮ್ಮೆ, ದನಕರುಗಳು ಇರುತ್ತಿದ್ದವು. ಪ್ರತಿಯೊಬ್ಬರು ಕೂಡ ತಮ್ಮ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರ ಬಳಕೆ ಮಾಡುತಿದ್ದರು. ಈ ಕೊಟ್ಟಿಗೆ ಗೊಬ್ಬರವನ್ನು ತಮ್ಮ ಇಡೀ ಜಮೀನಿಗೆ ಚೆಲ್ಲುತ್ತಿದ್ದರು. ಇದರಿಂದ, ಭೂಮಿಯ ಲವತ್ತತೆ ಹೆಚ್ಚಿ ಉತ್ತಮ ಫಸಲು ದೊರೆಯುತ್ತಿತ್ತು. ಜನರ ಆರೋಗ್ಯ ಸಹ ಚೆನ್ನಾಗಿರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅಡಿಕೆ, ತೆಂಗು, ಬಾಳೆ ಇತ್ಯಾದಿ ಬೆಳೆಗಳಿಗೆ ಹಾಕಲು ಕೊಟ್ಟಿಗೆ ಗೊಬ್ಬರ ಸಿಗದಂತಾಗಿದೆ. ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಭೂಮಿ ಮತ್ತು ಜನರ ಆರೋಗ್ಯ ಹಾಳಾಗಲಿದೆ ಎಂದರು.
ಈ ಬಾರಿ ಮಳೆ ಕೊರತೆಯಿದ್ದು ಈ ಸಮಯವನ್ನು ಸಮರ್ಥವಾಗಿ ನಿಭಾಯಿಸಲು ತೆಂಗು, ಅಡಿಕೆ ಮರಗಳ ಬುಡಕ್ಕೆ ಗರಿಗಳನ್ನು, ಅಡಿಕೆ ಸಿಪ್ಪೆಯನ್ನು ಹೊದಿಕೆ ಹಾಕಿ, ನೀರು ಆವಿಯಾಗದಂತೆ ನೋಡಿಕೊಳ್ಳಿ. ಜೀರೋ ಕಲ್ಪಿವೇಷನ್ ಅಳವಡಿಸಿ, ಅಡಿಕೆಗೆ ಜೀವಾಮೃತ ನೀಡಿ ಇದರಿಂದ ಉತ್ತಮ ಫಸಲು ದೊರೆಯುವುದರ ಜೊತೆ ಭೂಮಿಯ ಫಲವತ್ತತೆ ಕಾಪಾಡಬಹುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಎನ್. ಚಂದ್ರಕುಮಾರ್ ಮಾತನಾಡಿದರು. ತೋಟಗಾರಿಕೆ ಅಧಿಕಾರಿ ಸಿ.ಟಿ. ಸಾಗರ್, ಕೆ.ಎಂ. ಸುನೀಲ್, ಎಸ್.ಎಂ. ಹರೀಶ್, ಎ.ಕೆ. ಬಸವರಾಜ್, ರೈತರಾದ ಸಿದ್ದೇಶ್, ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net