ವಾರ್ಷಿಕ ಪರೀಕ್ಷೆ ಮಾದರಿಯಲ್ಲೇ ಪ್ರೀಪರೇಟರಿ ಎಕ್ಸಾಂ

ಪಿಯು ಶಿಕ್ಷಣ ಇಲಾಖೆ ಚಿತ್ರ.
ಪಿಯು ಶಿಕ್ಷಣ ಇಲಾಖೆ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ಪಿಯು ಫಲಿತಾಂಶ ಸುಧಾರಣೆಗೆ ಪಣ
  • ಕಡಿಮೆ ಫಲಿತಾಂಶದ ೧೦ ಕಾಲೇಜುಗಳ ಮೇಲೆ ನಿಗಾ
  • ಜಿಲ್ಲಾ ಪಂಚಾಯಿತಿ
ಚಿತ್ರದುರ್ಗ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಗಣನೀಯ ಸುಧಾರಣೆ ಹಾಗೂ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸಲು ರಾಜ್ಯದಲ್ಲೇ ಮಾದರಿ ಎಂಬAತೆ, ದ್ವಿತೀಯ ಪಿಯುಸಿ ಮೊದಲ ಪೂರ್ವ ಸಿದ್ಧತಾ ಪರೀಕ್ಷೆಯನ್ನು ವಾರ್ಷಿಕ ಪರೀಕ್ಷೆ ಮಾದರಿಯಲ್ಲೇ ಜಿಲ್ಲೆಯ ೨೬ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ, ಕಲಾ, ವಾಣಿಜ್ಯ ಮತ್ತು ಕಾಮರ್ಸ್ ಕೋರ್ಸ್ಗಳ ೧೩೭ ಕಾಲೇಜುಗಳ ೧೩,೩೪೫ ವಿ ದ್ಯಾರ್ಥಿಗಳೆಲ್ಲರೂ(ಹೊಸಬರು) ಜ.೨ರಿಂದ ಈ ಪರೀಕ್ಷೆಯನ್ನು ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಕೇಂದ್ರಗಳಲ್ಲೇ ಬರೆಯುತ್ತಿದ್ದಾರೆ.
ವಾರ್ಷಿಕ ಪರೀಕ್ಷೆಯಂತೆ ವಿದ್ಯಾರ್ಥಿಗಳಿಗೆ ಕೊಠಡಿಗಳನ್ನು ನಿಗದಿಪಡಿಸಲಾಗಿದೆ. ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೩ರವರೆಗೆ ನಡೆಯುತ್ತಿರುವ ಪರೀಕ್ಷೆ ವೆಬ್‌ಕಾಸ್ಟಿಂಗ್ ಇದ್ದು, ಜಿಲ್ಲಾ ಪಂಚಾಯಿತಿಯಲ್ಲಿ ೧೦ ಸಿಬ್ಬಂದಿ ಪರೀಕ್ಷಾ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಾರೆ.
ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳು ನಿಗದಿಪಡಿಸಲಾಗಿದೆ. ಪ್ರಶ್ನೆ ಪತ್ರಿಕೆಗಳು ಸೋರಿಕೆ ಆದಲ್ಲಿ ಅಽಕಾರಿಗಳು ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ. ಪತ್ರಿಕೆ ಬಹಿರಂಗವಾದರೆ ಯಾವ ಜಿಲ್ಲೆಯಲ್ಲಿ ಆಯಿತು ಎಂಬುದರ ಪತ್ತೆಗೆ ಇಡೀ ರಾಜ್ಯಕ್ಕೆ ಪ್ರಶ್ನೆ ಪತ್ರಿಕೆಗಳು ಒಂದೇ ಆದರೂ, ಜಿಲ್ಲೆಗಳಿಗೆ ಹಂಚಿಕೆಯಾಗುವ ಪ್ರಶ್ನೆ ಪತ್ರಿಕೆಗಳಿಗೆ ಪ್ರತ್ಯೇಕ ಕೋಡ್, ವಾಟರ್‌ಮಾರ್ಕ್ ಹಾಕಲಾಗಿದೆ.
ಯಾವುದೇ ಸೆಂಟರನಲ್ಲೂ ಅಕ್ರಮಗಳಾಗಬಾರದೆಂಬ ಕಾರಣಕ್ಕೆ ಸರ್ಕಾರಿ ಕಾಲೇಜು ಪ್ರಾಚಾರ್ಯರ ನೇತೃತ್ವದ ಜಾಗೃತದಳ ಕಾರ್ಯಾಚರಣೆ ನಡೆಸುತ್ತಿದೆ. ಆಯಾ ತಾಲೂಕಿನ ನೋಡಲ್‌ಸೆಂಟರ್‌ನಲ್ಲಿರುವ ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರಗಳಿಗೆ ಪರೀಕ್ಷೆ ದಿನಗಳಂದು ಹಂಚಿಕೆ ಮಾಡಲಾಗುತ್ತಿದೆ.
ಫಲಿತಾಂಶ ಸುಧಾರಣೆ ಗುರಿ: ಕಳೆದ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆ ಶೇ.೫೦ ಫಲಿತಾಂಶ ಪಡೆದು ರಾಜ್ಯದಲ್ಲೇ ೨೮ನೇ ಸ್ಥಾನದಲ್ಲಿತ್ತು. ಇದನ್ನು ೧೫ ಸ್ಥಾನದೊಳಗೆ ತರಬೇಕೆಂಬ ಗುರಿಯೊಂದಿಗೆ ಪಿಯು ಶಿಕ್ಷಣ ಇಲಾಖೆ, ಕಾಲೇಜುಗಳ ಅಽಕಾರಿಗಳು, ಮುಖ್ಯಸ್ಥರೊಂದಿಗೆ ಜಿಪಂ ಸಿಇಒ ಡಾ. ಎಸ್. ಆಕಾಶ್ ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಪೂರ್ವ ಸಿದ್ಧತಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಸಿಇಒ, ನಿತ್ಯ ಪರೀಕ್ಷೆ ಪ್ರಕ್ರಿಯೆ ವರದಿ ಪರಿಶೀಲಿಸುತ್ತಿದ್ದಾರೆ.
ಕಡಿಮೆ ಫಲಿತಾಂಶ ಕಾಲೇಜುಗಳ ಮೇಲೆ ನಿಗಾ: ೧೦೦ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶವಿದ್ದರೂ ಕಳೆದ ಸಾಲಿನಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತೀರ್ಣರಾದ ಸರ್ಕಾರಿ ೮ ಹಾಗೂ ಅನುದಾನಿತ ೨ ಕಾಲೇಜುಗಳನ್ನು ಗುರುತಿಸಲಾಗಿದೆ.
ಇಲ್ಲಿ ಪ್ರಥಮ ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ ೨ನೇ ಕಿರು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಅಂಕಗಳಿಕೆ ಗಮನಿಸಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ಕಾಲೇಜಿನಲ್ಲಿ ಬೆಳಗ್ಗೆ ೯ ರಿಂದ ೧೦ರವರೆಗೆ ಪರಿಹಾರ ಬೋಧನಾ ತರಗತಿ ಹಾಗೂ ಸಂಜೆ ಗುಂಪು ಅಧ್ಯಯನಕ್ಕೆ ಒತ್ತು ಕೊಡಲಾಗಿದೆ.
"

ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ವಿಶೇಷ ನಿಗಾ ಹಾಗೂ ಒತ್ತು ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಥಮ ಪೂರ್ವ ಸಿದ್ಧತಾ ಪರೀಕ್ಷೆಯನ್ನು ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ನಡೆಸಲಾಗುತ್ತಿದೆ.

"

----ಹೊಸ ವಾತಾವರಣಕ್ಕೆ ವಿದ್ಯಾರ್ಥಿಗಳು ಹೊಂದಿಕೊAಡು, ಭಯ ರಹಿತರಾಗಿ ವಾರ್ಷಿಕ ಪರೀಕ್ಷೆ ಎದುರಿಸಬೇಕೆಂಬುದು ಜಿಪಂ ಸಿಇಒ ಅವರ ಉದ್ದೇಶವಾಗಿದೆ. ೨ನೇ ವಾರ್ಷಿಕ ಸಿದ್ಧತಾ ಪರೀಕ್ಷೆ ಮಾಮೂಲಿಯಂತೆ ಆಯಾ ಕಾಲೇಜುಗಳಲ್ಲೇ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net