ಸಂಘಟನೆಯಿಂದ ರಾಜಕೀಯ ಪ್ರಾಬಲ್ಯ ಸಾಧ್ಯ

ಹಿರಿಯೂರು ತಾಲೂಕಿನ ಬೀರೆನಹಳ್ಳಿಯಲ್ಲಿ ಭಾನುವಾರ ಡಿ. ಬನುಮಯ್ಯ ಜಯಂತಿ ಆಚರಿಸಲಾಯಿತು. ಮೈಸೂರು ಶಿವಣ್ಣ, ಡಾ.ಜೆ. ರಾಜು, ವಸಂತ್, ನಿರಂಜನ್ ಇದ್ದರು.
ಹಿರಿಯೂರು ತಾಲೂಕಿನ ಬೀರೆನಹಳ್ಳಿಯಲ್ಲಿ ಭಾನುವಾರ ಡಿ. ಬನುಮಯ್ಯ ಜಯಂತಿ ಆಚರಿಸಲಾಯಿತು. ಮೈಸೂರು ಶಿವಣ್ಣ, ಡಾ.ಜೆ. ರಾಜು, ವಸಂತ್, ನಿರಂಜನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೇತೂರುಪಾಳ್ಯ ಡಾ.ಜೆ.ರಾಜು ಹೇಳಿಕೆ
  • ಡಿ. ಬನುಮಯ್ಯ ಜಯಂತಿ
ಹಿರಿಯೂರು: ಶ್ರಮ ಸಂಸ್ಕೃತಿಯ ಪ್ರತೀಕವಾದ ಕುಂಚಿಟಿಗ ಸಮುದಾಯ ಎಲ್ಲ ಸಮುದಾಯಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿದೆ ಎಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಬೇತೂರುಪಾಳ್ಯ ಡಾ.ಜೆ. ರಾಜು ಹೇಳಿದರು.
ತಾಲೂಕಿನ ಬೀರೆನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಕುಂಚಿಟಿಗರ ಕುಲತಿಲಕ ಡಿ. ಬನುಮಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಕುಂಚಿಟಿಗರು ಕೃಷಿ-ಶ್ರಮದಿಂದ ದುಡಿದು ತಿನ್ನುವ ಸಮುದಾಯವಾಗಿದೆ. ಇಂದಿಗೂ ಸಾಮಾಜಿಕ, ರಾಜಕೀಯವಾಗಿ ಹಿಂದೆ ಉಳಿದಿದೆ. ಆಳಬೇಕಾದ ಸಮುದಾಯ ಇಂದು ಆಳ್ವಿಕೆಗೆ ಒಳಪಟ್ಟಿದೆ. ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಕುಂಚಿಟಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದು ಸ್ಮರಣೀಯ ಎಂದರು.
ಕೇಂದ್ರದ ಒಬಿಸಿ ಮೀಸಲಾತಿ ಸೌಲಭ್ಯ ಸಿಕ್ಕರೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗಲಿದೆ. ಡಿ.ಬನುಮಯ್ಯ ಶೈಕ್ಷಣಿಕ ಸಂಸ್ಥೆ ತೆರೆದು ಮಕ್ಕಳಿಗೆ ಉಚಿತ ಶಿಕ್ಷಣ, ಊಟದ ವ್ಯವಸ್ಥೆ ಮಾಡಿದರು. ತಾಲೂಕಿನಲ್ಲಿ ಸಮುದಾಯ ಪಕ್ಷಾತೀತವಾಗಿ ಒಗ್ಗೂಡಿ ಸಂಘಟಿತವಾದರೆ ಮಾತ್ರ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಕುಂಚಿಟಿಗ ಸಂಘದ ಅಧ್ಯಕ್ಷ ಮೈಸೂರು ಶಿವಣ್ಣ ಮಾತನಾಡಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ ಕುಂಚಿಟಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೇಂದ್ರದ ಒಬಿಸಿ ಮೀಸಲಾತಿ ಸೌಲಭ್ಯದಿಂದ ಸಮುದಾಯ ವಂಚಿತವಾಗಿದೆ. ಸಂಘಟಿತ ಹೋರಾಟ ಮಾಡಿದರೆ ಮಾತ್ರ ಮೀಸಲಾತಿ ಪಡೆಯಲು ಸಾಧ್ಯ ಎಂದರು.
ಮುಖಂಡರಾದ ನಿರಂಜನ್ ಗೌಡ, ಪುಟ್ಟಸ್ವಾಮಿ, ಪ್ರಾಚಾರ್ಯ ವಸಂತ್, ಕುಬೇರಪ್ಪ, ಕೆ.ಜಿ. ಹನುಮಂತರಾಯ, ಶೋಭಿತಾ, ವಿಜಯಕುಮಾರ್, ರಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net