ಅಭಿಮಾನೋತ್ಸವದ ಬಂದೋಬಸ್ತ್ಗೆ ಪೊಲೀಸರು ಸಜ್ಜು

ದಾವಣಗೆರೆ ಐಜಿಪಿ ಡಾ.ರವಿಕಾಂತೇಗೌಡ ಅವರು ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವದ ಸ್ಥಳ ಪರಿಶೀಲಿಸಿದರು. ಎಸ್‌ಪಿರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಡಾ.ಶಿವಕುಮಾರ್ ಇತರ ಪೊಲೀಸ್ ಅಽಕಾರಿಗಳಿದ್ದರು.
ದಾವಣಗೆರೆ ಐಜಿಪಿ ಡಾ.ರವಿಕಾಂತೇಗೌಡ ಅವರು ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವದ ಸ್ಥಳ ಪರಿಶೀಲಿಸಿದರು. ಎಸ್‌ಪಿರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಡಾ.ಶಿವಕುಮಾರ್ ಇತರ ಪೊಲೀಸ್ ಅಽಕಾರಿಗಳಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಫ್ತಿಯಲ್ಲೂ ಕರ್ತವ್ಯ ನಿರ್ವಹಣೆ
  • ೧೨ ಕಡೆ ಪಾರ್ಕಿಂಗ್ ವ್ಯವಸ್ಥೆ
  • ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪ್ರತ್ಯೇಕ ಹೆಲಿಪ್ಯಾಡ್
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಸಮೀಪ ಮೇ ೯ರಂದು ಆಯೋಜಿಸಿರುವ ಬಿಎಸ್‌ವೈ ಅಭಿಮಾನೋತ್ಸ ವಕ್ಕೆ ೨೫೦೦ಕ್ಕೂ ಹೆಚ್ಚು ಪೊಲೀಸ್ ಅಽಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಸಂಬAಽಸಿದAತೆ ಯಾವುದೇ ಲೋಪಗಳಾಗದಂತೆ ಜಿಲ್ಲಾಡಳಿತ ಹಾಗೂ ಇಲಾಖೆ ಅಽಕಾರಿಗಳೊಂದಿಗೆ ಪೊ ಲೀಸ್ ಅಽಕಾರಿಗಳು ಈಗಾಗಲೇ ಸಮನ್ವಯ ಸಭೆ ನಡೆಸಿದ್ದಾರೆ. ದಾವಣಗೆರೆ ಪೂರ್ವ ವಲಯ ಐಜಿಪಿ ಡಾ. ರವಿಕಾಂತೇಗೌಡ ಅವರು ಹಿರಿಯ ಅಽಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರ್ಯಕ್ರಮ ಆಯೋಜಕರೊಂದಿಗೆ ಪೊಲೀಸ್ ಅಽಕಾರಿಗಳು ಸಭೆ ನಡೆಸಿ ಅಗತ್ಯ ಸಲಹೆ, ಸೂಚನೆಗಳನ್ನು ಕೊಟ್ಟಿದ್ದಾರೆ.
ಬೆಸ್ಕಾಂ, ಆರ್‌ಟಿಒ, ಆರೋಗ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಽಕಾರಿಗಳೊಂದಿಗೆ ಎಡಿಸಿ, ಎಸ್‌ಪಿ ಸಭೆ ನಡೆಸಿದ್ದಾರೆ. ಜನದಟ್ಟಣೆಯನ್ನೇ ಲಾಭ ಮಾಡಿಕೊಳ್ಳಲು ಮುಂದಾಗುವ ದುಷ್ಕರ್ಮಿಗಳ ನಿಯಂತ್ರಣಕ್ಕೆ ಜಿಲ್ಲೆಯ ಪೊಲೀಸರೊಂದಿಗೆ ಅಕ್ಕಪಕ್ಕದ ಜಿಲ್ಲೆಯ ಪೊಲೀಸರೂ ಮಫ್ತಿಯಲ್ಲಿ ಕೈಜೋಡಿಸಲಿದ್ದಾರೆ.
ಮುಖ್ಯವೇದಿಕೆ ಬಳಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ಶಾ ಮಧ್ಯಾಹ್ನ ೧೨ ಗಂಟೆಗೆ ಬಂದಿಳಿಯಲಿ ದ್ದಾ ರೆ. ಅವರಿಗೆ ಝೆಡ್‌ಪ್ಲಸ್ ಸೆಕ್ಯೂರಿಟಿ ಇರುವುದಿಂದ ಆ ಸ್ಥಳದಲ್ಲಿ ಬೇರೆ ಯಾವುದೇ ವಿವಿಐಪಿಗಳ ಹೆಲಿಕಾಪ್ಟರ್‌ಗೂ ಲ್ಯಾಂಡ್ ಆಗ ಲು ಅವಕಾಶವಿಲ್ಲ. ಬಂದೋಬಸ್ತ್ಗಾಗಿ ಸಿಆರ್‌ಪಿಎಫ್ ಅಽಕಾರಿಗಳು, ಸಿಬ್ಬಂದಿ ಸದ್ಯದಲ್ಲೇ ನಗರಕ್ಕೆ ಆಗಮಿಸಲಿದ್ದಾರೆ.
ಇನ್ನಿತರ ವಿವಿಐಪಿಗಳಿಗೆ ಎಸ್‌ಜೆಎಂ ಶಾಲಾ ಆವರಣದಲ್ಲಿ ಹೆಲಿಪ್ಯಾಡ್ ಇದೆ. ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಬೆಂಗ ಳೂರು ಮಾರ್ಗಗಳಿಂದ ಆಗಮಿಸುವ ಸಾವಿರಾರು ಸಂಖ್ಯೆ ವಾಹನಗಳ ಪಾರ್ಕಿಂಗ್‌ಗೆ, ಉತ್ಸವದ ಸ್ಥಳದಿಂದ ೧ ಕಿ.ಮೀ. ದೂರದಲ್ಲಿ ೧೨ ಕಡೆ ಸ್ಥಳಗಳನ್ನು ಗುರುತಿಸಲಾಗಿದೆ.
ನಿಯೋಜನೆ
ಒಬ್ಬರು ಎಸ್‌ಪಿ, ಐವರು ಎಎಸ್‌ಪಿ, ೨೦ ಡಿವೈಎಸ್‌ಪಿ, ೨೩ ಇನ್ಸ್ಪೆಕ್ರ‍್ಸ್, ೩೦೦ ಪಿಎಸ್‌ಐ, ೧೨೪೩ ಕಾನ್‌ಸ್ಟೇಬಲ್ಸ್, ೧೮೫ ಮಹಿಳಾ ಪೊಲೀಸರು., ೭೫೦ ಹೋಂಗಾರ್ಡ್ಸ್, ಕೆಎಸ್‌ಆರ್‌ಪಿ ತುಕಡಿ, ಎಂಟು ಡಿಎಆರ್ ಪಾರ್ಟಿ, ಸಮಾವೇಶದ ಪೆಂಡಾಲ್ ಬಳಿ Door Frame Metal Detectorಗಳೊಂದಿಗೆ ೬೫ ಸಿಬ್ಬಂದಿ, ಎರಡು ಬಾಂಬ್ ನಿಷ್ಕಿçಯ ದಳ ಸಹಿತ ಬಂದೋಬಸ್ತ್ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ ೮ರಂದು ಸಂಜೆ ಯಡಿಯೂರಪ್ಪ ಅವರ ಪುರಪ್ರವೇಶ, ಮೆರವಣಿಗೆಗೂ ಬಂದೋಬಸ್ತ್ ಪ್ಲ್ಯಾನ್ ಆಗಿದೆ.
"

ಕೋಟ್ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆಯಾಗಿ ಹಿರಿಯ ಅಽಕಾರಿಗಳ ಮಾರ್ಗದರ್ಶನದೊಂದಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಽಕಾರಿ, ಸಿಬ್ಬಂದಿ ನಿಯೋಜನೆ ಸಿದ್ಧತೆ ಕೂಡ ಪೂರ್ಣಗೊಂಡಿದೆ.

— ರAಜಿತ್‌ಕುಮಾರ್ ಬಂಡಾರು, ಎಸ್‌ಪಿ, ಚಿತ್ರದುರ್ಗ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net