ಅತಿ ವೇಗದ ಸಂಚಾರಕ್ಕೆ ಪೊಲೀಸ್ ದಂಡ ಅಸ್ತç

 ಸ್ಪೀಡ್ ರಡಾರ್ ಗನ್
ಸ್ಪೀಡ್ ರಡಾರ್ ಗನ್
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಅವಘಡಗಳ ನಿಯಂತ್ರಣ
  • ಚಿತ್ರದುರ್ಗ ಎಸ್‌ಪಿ ಖಡಕ್ ಆಕ್ಷನ್
  • ಸ್ಪೀಡ್ ರಡಾರ್ ಗನ್
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಮೊಳಕಾಲ್ಮೂರು ತಾಲೂಕಿನ ರಾಷ್ಟಿçÃಯ ಹೆದ್ದಾರಿ ೧೫೦ 'ಎ' ನಲ್ಲಿ ಕಳೆದ ಮೇ ೨೭ ಮತ್ತು ೨೮ ರಂದು ಸಂಭವಿಸಿದ ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ೧೦ ಜನರು ಮÊತಪಟ್ಟ ಬೆನ್ನಲ್ಲೇ, ಜಿಲ್ಲೆಯಲ್ಲಿ ರಸ್ತೆ ಅವಘಡಗಳ ನಿಯಂತ್ರಣಕ್ಕೆ ಪೊಲೀಸ್ ಇಲಾ ಖೆ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ೪ ಪ್ರಮುಖ ರಾಷ್ಟಿçÃಯ ಹೆದ್ದಾರಿಗಳಿವೆ. ರಾ.ಹೆ. ಹಿರಿಯೂರು-ಬಳ್ಳಾರಿ ೧೫೦ಎ, ಚಿತ್ರದುರ್ಗ-ಹೊಸ ಪೇಟೆ ೫೦, ಬೆಂಗಳೂರು-ಪುಣÉ ೪೮ ಹಾಗೂ ಚಿತ್ರದುರ್ಗ-ಶಿವಮೊಗ್ಗ ೧೬೯ ರೊಂದಿಗೆ ಹಲವು ಪ್ರಮುಖ ರಾಜ್ಯ ಹೆದ್ದಾರಿಗಳೂ ಹಾದುಹೋಗಿವೆ.
ರಾಷ್ಟ್ರೀಯ ಹೆದ್ದಾರಿ ೧೫೦ 'ಎ' ಜಿಲ್ಲಾ ವ್ಯಾಪ್ತಿಯಲ್ಲಿ ಅಂದಾಜು ನೂರು ಕಿ.ಮೀ. ಪರಿಽಯಲ್ಲಿ ಅತ್ಯಂತ ನೇರವಾಗಿದ್ದು, ವಾಹನ ಗ ಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತವೆ. ಪೊಲೀಸರು ಈಗ ಸ್ಪೀಡ್ ರಡಾರ್ ಗನ್ ಬಳಸಿ ವಾಹನಗಳ ಅತಿವೇಗಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಈ ಮೊದಲು ಈ ಗನ್‌ಗಳ ಬಳಕೆ ಇದ್ದರೂ ಅದು ನಗಣ್ಯವೆನಿಸುವಷ್ಟಿತ್ತು.
ಈಗ ಈ ಹೆದ್ದಾರಿಯ ಎರಡೂ ಕಡೆ ೪ ಸ್ಪೀಡ್ ರಡಾರ್ ಗನ್ ಬಳಸಲಾಗುತ್ತಿದೆ, ಕಳೆದ ೧೦-೧೨ ದಿನಗಳಲ್ಲಿ ಅಂದಾಜು ೪೦೦ ಸವಾ ರರಿಗೆ ದಂಡ ವಿಽಸಲಾಗಿದೆ.
ಇದರೊಂದಿಗೆ ಮದ್ಯ ಸೇವಿಸಿ ವಾಹನ ಚಲಾಯಿಸುವ ಸವಾರರು, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾ ರರು, ಜನರನ್ನು ಕ ರೆದೊಯ್ಯುವ ಗೂಡ್ಸ್ ವಾಹನಗಳು, ನಿಗದಿಗಿಂತ ಹೆಚ್ಚಿನ ಜನರನ್ನು ಕರೆದೊಯ್ಯುವ ಪ್ರಯಾ ಣಿಕ ವಾಹನಗಳ ಚಾಲಕರಿಂದ ಲೂ ದಂಡ ವಸೂಲಿ ಮಾಡಲಾಗುತ್ತಿದೆ.
ಈ ದಂಡಾಸ್ತçವನ್ನು ಚುರುಕುಗೊಳಿಸಲು ಜಿಲ್ಲೆಗೆ ಕನಿಷ್ಠ ೧೦ ಹೊಸ ಸ್ಪೀಡ್ ರಡಾರ್ ಗನ್ ಹಾಗೂ ಹೊಸ ೪ ಹೆದ್ದಾರಿ ಗಸ್ತು ಪಡೆ ವಾಹನಗಳ ಮಂಜೂರಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ನಿಂತ ವಾಹನಗಳಿಗೆ ಡಿಕ್ಕಿ
ಹೆದ್ದಾರಿಗಳಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಅಥವಾ ಮತ್ತಿತರ ಕಾರಣಗಳಿಗಾಗಿ ರಸ್ತೆ ಬದಿ ನಿಲ್ಲಿಸುವ ವಾಹನಗಳಿಗೆ ಹಿಂದಿನಿAದ ವೇಗವಾಗಿ ಬರುವ ವಾಹನಗಳು ಡಿ ಕ್ಕಿ ಹೊಡೆದು ಸಾರ್ವಜನಿಕರು ಅಸುನೀಗುವ ಮತ್ತು ಗಾಯಗೊಳ್ಳುವ ಘಟನೆಗಳು ನಡೆಯುತ್ತಲೇ ಇವೆ.
ವಾಹನಗಳು ನಿಲ್ಲದಂತೆ ಪೊಲೀಸ್ ಗಸ್ತು ಪಡೆಗಳು ನಿರಂತರ ನಿಗಾ ವಹಿಸಿದರೂ ಅಪಘಾತಗಳ ಸಂಖÉ್ಯ ತಗ್ಗುತ್ತಿಲ್ಲ. ಜಿಲ್ಲೆಯ ಲ್ಲಿ ೨೦೨೪ರಿಂದ ೨೦೨೬ರ ಮೇ ೩೦ರವರೆಗಿನ ಅವಽಯಲ್ಲಿ ಸಂಭವಿಸಿದ ಒಟ್ಟು ೩,೮೭೫ ರಸ್ತೆ ಅಪಘಾತಗಳಲ್ಲಿ ಬರೋಬ್ಬರಿ ೧,೧೦೮ ಜನರು ಅಸುನೀಗಿದ್ದು, ೫,೭೨೧ ಜನರು ಗಾಯಗೊಂಡಿದ್ದಾರೆ.
ಎಎಸ್‌ಐ ಪಡೆಗೆ ಇಲ್ಲ ದಂಡ ವಿಽಸುವ ಅಽಕಾರ
ಪ್ರಸ್ತುತ ಎಎಸ್‌ಐ ನೇತÊತ್ವದ ೪ ಗಸ್ತು ಪಡೆಗಳು ರಸ್ತೆ ಬದಿ ವಾಹನ ನಿಲ್ಲಿಸದಂತೆ ಜಾಗೃತಿ ಮೂಡಿಸುತ್ತಿವೆ. ಎಎಸ್‌ಐ ದರ್ಜೆಯ ಅಽಕಾರಿಗಳಿಗೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಸ್ಥಳದಲ್ಲೇ ದಂಡ ವಿಽಸುವ ಅಽಕಾರ ಇಲ್ಲದ ಕಾರಣ ಈ ಗಸ್ತು ಪಡೆ ಗಳು ಹಲ್ಲಿಲ್ಲದ ಹಾವಿನಂತಾಗಿವೆ.
ಇವರ ಎಚ್ಚರಿಕೆಯನ್ನು ಬಹುತೇಕ ವಾಹನ ಸವಾರರು ಪಾಲಿಸುತ್ತಿಲ್ಲ. ತಮ್ಮ ಠಾಣಾ ವ್ಯಾಪ್ತಿಯ ರಾಷ್ಟಿçÃಯ ಹಾಗೂ ರಾಜ್ಯ ಹೆ ದ್ದಾರಿಗಳಲ್ಲಿ ಸಿಪಿಐ ಮತ್ತು ಪಿಎಸ್‌ಐಗಳ ಗಸ್ತು ಸಂಖÉ್ಯಯನ್ನು ಹೆಚ್ಚಿಸಿದರೆ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ.
ಇದರೊಂದಿಗೆ ಎಎಸ್‌ಐಗಳಿಗೂ ದಂಡ ವಿಽಸುವ ಅಽಕಾರ ನೀಡಿದರೆ ಅನಽಕÊತ ವೆಹಿಕಲ್ ಪಾರ್ಕಿಂಗ್‌ಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆರಂಭವಾಗದ ಸಂಚಾರಿ ಠಾಣÉ
ಹಿರಿಯೂರು ನಗರಕ್ಕೆ ಸಂಚಾರಿ ಪೊಲೀಸ್ ಠಾಣÉ ಮಂಜೂರಾಗಿ ೨ ತಿಂಗಳು ಕಳೆದಿದ್ದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ನಗರದ ಠಾಣÉಗಳಿಂದಲೇ ಸಿಬ್ಬಂದಿ ಹಾಗೂ ಅಽಕಾರಿಗಳನ್ನು ನಿಯೋಜಿಸುವಂತೆ ಸರ್ಕಾರ ಸೂಚಿಸಿದೆ. ಆದರೆ ಪ್ರಸ್ತುತ ಸಿಬ್ಬಂದಿ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ಆದ್ದರಿಂದ ಈ ಸಂಚಾರಿ ಠಾಣÉಗೆ ಪ್ರತ್ಯೇಕ ಅಽಕಾರಿ ಹಾಗೂ ಸಿಬ್ಬಂದಿಯನ್ನು ಮಂಜೂರು ಮಾಡುವಂತೆ ಪೊಲೀಸ್ ಇಲಾಖÉಯು ಸರ್ಕಾರಕ್ಕೆ ವಿಶೇಷ ಕೋರಿಕೆ ಸಲ್ಲಿಸಿದೆ.
೧೦೦ ಹೊಸ ವಾಹನಗಳ ಖರೀದಿ
ರಾಜ್ಯದಲ್ಲಿ ಸದ್ಯ ೨೫೦ಕ್ಕೂ ಹೆಚ್ಚು ಹೆದ್ದಾರಿ ಗಸ್ತು ಪಡೆ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ವಾಹನಗಳ ಮಂಜೂರಾ ತಿಗಾಗಿ ಇಲಾಖÉ ಈಗಾಗಲೇ ಕ್ರಿಯಾ ಯೋಜನೆ ರೂಪಿಸಿದೆ.
ಸರ್ಕಾರ ಅಸ್ತು ಎಂದರೆ ೧೦೦ ಗಸ್ತು ವಾಹನ ಖರೀದಿಸಿ, ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಿದೆ. ಹೆದ್ದಾರಿಗಳ ಬದಿಯಲ್ಲಿ ಅನಽ ಕÊತವಾಗಿ ತಲೆಎತ್ತಿರುವ ಹೋಟೆಲ್‌ಗಳು ಮತ್ತು ಗೂಡಂಗ ಡಿಗಳನ್ನು ರಾಷ್ಟಿçÃಯ ಹೆದ್ದಾರಿ ಪ್ರಾ ಽಕಾರದ ಅಽಕಾರಿಗಳು ತೆರವುಗೊಳಿಸಬೇಕಿದೆ ಎಂದು ಪೊಲೀಸ್ ಅಽಕಾರಿಗಳು ಹೇಳಿದ್ದಾರೆ.
"

ಚಿತ್ರದುರ್ಗ ನಗರದ ಮೂರು ಪ್ರಮುಖ ವÊತ್ತಗಳಲ್ಲಿ ಸಿಗ್ನಲ್ ಲೈಟ್‌ಗಳನ್ನು ಕಾರ್ಯಾಚರಣÉಗೊಳಿಸುವುದಾಗಿ ನಗರಸಭೆ ತಿಳಿಸಿದ್ದು, ಅವು ಇನ್ನೂ ಪೊಲೀಸ್ ಇಲಾಖÉಗೆ ಹಸ್ತಾಂತರವಾಗಿಲ್ಲ. ಮುಂದಿನ ದಿನಗಳಲ್ಲಿ KMERC ಅಡಿ ಪ್ರಮುಖ ಚೆಕ್‌ಪೋಸ್ಟ್ಗಳ ಸ್ಥಾಪನೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.

— ರಂಜಿತ್ ಕುಮಾರ್ ಬಂಡಾರು, ಎಸ್‌ಪಿ, ಚಿತ್ರದುರ್ಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net