ಪಿಎಂಎಫ್‌ಬಿವೈಯಡಿ ಜಿಲ್ಲೆಗೆ ೧೨.೪೦ ಕೋಟಿ ರೂ. ಪರಿಹಾರ

ಗೋವಿಂದ ಎಂ.ಕಾರಜೋಳ
ಗೋವಿಂದ ಎಂ.ಕಾರಜೋಳ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ ಠಾಕೂರ್
  • ಸಂಸದ ಗೋವಿಂದ ಎಂ. ಕಾರಜೋಳ
  • ರಾಷ್ಟಿçÃಯ ಬೆಳೆ ವಿಮಾ ಪೋರ್ಟಲ್
ಚಿತ್ರದುರ್ಗ: ಪ್ರಧಾನಮಂತ್ರಿ -Àಸಲ್ ಬಿಮಾ ಯೋಜನೆ ಜಾರಿಯಾದ ೨೦೧೬ ರಿಂದ ಈವರೆಗೆ ಕರ್ನಾಟಕದ ೧.೩೪ ಕೋಟಿ ರೈತರಿಗೆ ೧೮.೭೮ ಕೋಟಿ ರೂ. ಬೆಳೆ ವಿಮಾ ಪರಿಹಾರ ಪಾವತಿಸಲಾಗಿದೆ ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ ಠಾಕೂರ್ ಅವರು ಸಂಸತ್ ಅಽವೇಶನದಲ್ಲಿ ಮಂಗಳವಾರ ತಿಳಿಸಿದ್ದಾರೆ.
ಸಂಸದ ಗೋವಿಂದ ಎಂ. ಕಾರಜೋಳ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ವಿಶೇಷವಾಗಿ ೨೦೨೫ರ ಖಾರೀ-ï ಹಂಗಾಮಿನಲ್ಲಿ, ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆ ಹಾನಿಗೆ ಒಳಗಾದ ೭೮೮೦ ರೈತರಿಗೆ ೧೨.೪೦ ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದೆ. ಇದು ಸಂಕಷ್ಟದಲ್ಲಿದ್ದ ರೈತ ಕುಟುಂಬಗಳಿಗೆ ಮಹತ್ವದ ಆರ್ಥಿಕ ನೆರವಾಗಿದೆ.
ಅವರ ಜೀವನೋಪಾಯದ ಭರವಸೆ ನೀಡಿದೆ. ರೈತರಿಗೆ ಬೆಳೆ ವಿಮಾ ಯೋಜನೆಗಳ ಬಗ್ಗೆ ಸಮಗ್ರ ಅರಿವು, ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ತ್ವರಿತ ವಿತರಣೆಗಾಗಿ ಕೇಂದ್ರ, ರಾಷ್ಟಿçÃಯ ಬೆಳೆ ವಿಮಾ ಪೋರ್ಟಲ್, ಡಿಜಿಕ್ಲೇಮ್ ವ್ಯವಸ್ಥೆ, -Àಸಲ್ ಬಿಮಾ ಸಪ್ತಾಹ, ಕೃಷಿ ರಕ್ಷಕ್ ಪೋರ್ಟಲ್, ಉಚಿತ ಸಹಾಯವಾಣಿ ಮೊದಲಾದ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿರುವುದಾಗಿ ಸಂಸದರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net