ಚಿತ್ರದುರ್ಗ: ಪಂಡಿತ್ ಜವಾಹರಲಾಲ್ ನೆಹರು ಅವರ ಅಽಕಾರಾವಽಗಿಂತ ಅಂದಾಜು ೪೪೦೦೦ ದಿನಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರಿಗೆ ಪ್ರಪಂಚದ ೩೩ಕ್ಕೂ ಹೆಚ್ಚು ದೇಶಗಳು ನಾಗರಿಕ ಸನ್ಮಾನದೊಂದಿಗೆ ಗೌರವಿಸಿವೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೪ರಿಂದ ಸುದೀರ್ಘ ೧೨ ವರ್ಷ ದೇಶವನ್ನಾಳಿದ ಕೀರ್ತಿ ಗೆ ಭಾಜನರಾಗಿರುವ ಮೋದಿ ಅವರಿಂದಾಗಿ ಭಾರತವಿಂದು ವಿಶ್ವದಲ್ಲೇ ದೊಡ್ಡಣ್ಣನಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ಭಾರತದಲ್ಲಿ ಜನಪರ ಯೋಜನೆಗಳ ಜಾರಿಗಾಗಿ ವಿವಿಧ ದೇಶಗಳು ಅವರನ್ನು ಗೌರವಿಸಿವೆ. ಆ ದೇಶಗಳ ನಾಗರಿಕ ಸನ್ಮಾನ ಎಂ ಬುದು ಯಾವುದೇ ಟೊಳ್ಳು ಪ್ರ ಶಸ್ತಿಗಳಲ್ಲ. ಬದಲಿಗೆ ಆಯಾ ದೇಶಗಳು ಮೋದಿ ಅವರನ್ನು ಕೆಂಪು ಹಾಸಿನೊಂದಿಗೆ ಬರಮಾಡಿ ಕೊಂಡು ಗೌರವಿಸಿವೆ.
ಮೋದಿ ಅಽಕಾರ ವಹಿಸಿಕೊಳ್ಳುವ ಮೊದಲು ದೇಶ ದಿವಾಳಿ ಅಂಚಿನಲ್ಲಿತ್ತು. ಅನ್ಯ ರಾಷ್ಟçಗಳು ಭಾರತವನ್ನು ಹಗರಣಗಳ ರಾಷ್ಟç ವೆಂದು ಕರೆದಿದ್ದವು. ನಾಗರಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಟ್ಟಿರುವ ಮೋದಿ ಅವರ ಇನ್ನೀತರ ಹಲವು ಸುಧಾರಣಾ ಕ್ರಮಗಳಿಂ ದಾಗಿ ಶೇ.೧೨ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ೪ಕ್ಕೆ ತಲುಪಿದ್ದು,ಬಹು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ.
ನೆಹರು ಮೊದಲ ಅವಽಯಲ್ಲಿ ಸೆಲೆಕ್ಟೆಡ್ ಪ್ರಧಾನಿ ಆಗಿದ್ದರೂ,ಅಂದಿನ ಸಂದರ್ಭ ಮತದಾರರಿಗೆ ಕಾಂಗ್ರೆಸ್ ಮೇಲಿದ್ದ ಭಾವನಾ ತ್ಮಕ ಅಲೆಯಿಂದಾಗಿ ಮತ್ತೆ ಅವರು ಪ್ರಧಾನಿ ಆದರು. ಅನೇಕರು ಅರ್ಹರು ಇದ್ದರೂ ನಂತರದಲ್ಲಿ ಇಂದಿರಾಗಾAಽ, ರಾಜೀವ್ ಗಾಂಽ ಪ್ರಧಾನಿ ಆಗಿದ್ದರೆಂದ ಅವರು, ಮೋದಿ ದೀರ್ಘಾವಽ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ೧೫೦ ಕೋಟಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಜಾಗತಿಕ ನಾಯಕರಾಗಿ ಹೊರ ಹೊಮ್ಮಿದ್ದಾರೆ.
ಕೇಂದ್ರದಿAದ ಕರ್ನಾಟಕದಲ್ಲಿ ಜಾರಿಯಾಗಿರುವ ಜನ ಕಲ್ಯಾಣ ಯೋಜನೆಗಳು, ಮೂಲ ಸೌಕರ್ಯಗಳ ಅಭಿವೃದ್ಧಿ ಕುರಿತು ನವೀ ನ್ ವಿವರಿಸಿದರು. ಕೇಂದ್ರದ ನೀತಿ ಆಯೋಗ ಮೊದಲಾದ ಸಭೆಗಳಲ್ಲಿ ಭಾಗವಹಿಸದೇ ಕೇಂದ್ರದಿAದ ಸರಿಯಾಗಿ ಕರ್ನಾಟಕಕ್ಕೆ ತೆರಿಗೆ ಪಾಲು ಸಿಗುತ್ತಿಲ್ಲ ಎಂಬ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಟೀಕೆಯನ್ನು ಅಂಕಿ-ಅAಶಗಳೊAದಿಗೆ ಅಲ್ಲಗಳೆದರು.
ಸ್ವಾಸ್ಥ್ಯ, ಸ್ವಚ್ಛ ಭಾರತ
ನಾವು ಆಮದು ಕಡಿಮೆ ಮಾಡಿ, ರಫ್ತುನ್ನು ಹೆಚ್ಚಿಸಬೇಕೆಂದು ಮೋದಿ ಹೇಳಿದ್ದಾರೆ. ಅವರ ಫಿಟ್ ಇಂಡಿಯಾ ಕರೆಗೆ ಸ್ಪಂದಿಸಬೇಕಿದೆ. ಸ್ವಾಸ್ಥ÷್ಯ, ಸ್ವಚ್ಛ ದೇಶ ನಮ್ಮದಾಗಬೇಕಿದೆ. ಮೋದಿ ಮಾತಿನಿಂದ ಪ್ರೇರಿತನಾಗಿರುವ ನಾನು ಈಗ ನಿತ್ಯ ಚಿತ್ರದುರ್ಗದ ಜೋಗಿ ಮಟ್ಟಿ ವನ್ಯ ಜೀವಿಧಾಮದಲ್ಲಿ ಟ್ರಕಿಂಗ್ ಮಾಡುತ್ತಿದ್ದೇನೆ. ಜೋಗಿಮಟ್ಟಿಯಲ್ಲಿ ೨೦-೨೫ ಟ್ರಕಿಂಗ್ ಸ್ಥಳಗಳಿದ್ದು, ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಅಭಿವೃದ್ಧಿ ಪಡಿಸ ಬೇಕಿದೆ ಎಂದರು.
ಉಸ್ತುವಾರಿ ಸಚಿವರನ್ನು ನೇಮಿಸಿ
ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಜಿಲ್ಲೆಯ ತಮ್ಮ ಶಾಸಕರಲ್ಲಿ ಒಬ್ಬರನ್ನು ತುರ್ತಾಗಿ ಮಂತ್ರಿ ಮಾಡಿ ಅವರಿಗೆ ಜಿಲ್ಲೆ ಉಸ್ತುವಾರಿ ವಹಿಸುವಂತೆ ಕಾಂಗ್ರೆಸ್‌ನ್ನು ಒತ್ತಾಯಿಸಿದರು. ಬರಗಾಲದ ಭೀತಿ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಜಿ ಲ್ಲೆಯನ್ನು ನಾನಾ ಸಮಸ್ಯೆಗಳು ಕಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಡಾ. ಸಿದ್ದಾರ್ಥ್ ಗುಂಡಾರ್ಪಿ, ಮಾಧುರಿ ಗಿರೀಶ್, ವೆಂಕಟೇಶ್‌ಯಾದವ್, ನಾಗರಾಜ್ ಬೇದ್ರೆ, ಲೋಕೇಶ್, ನಾಗರಾಜ್ ಇದ್ದರು.