ನುಡಿ ನಮನ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿ Meeting

ಹಿರಿಯೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ಮುಖಂಡರ ಸಭೆಯಲ್ಲಿ ಟಿ.ರಘುಮೂರ್ತಿ ಮಾತನಾಡಿದರು. ಜಿ.ಎಸ್.ಮಂಜುನಾಥ್, ತಾಜ್‌ಪೀರ್, ಅಮೃತೇಶ್ವರಸ್ವಾಮಿ, ಸುರೇಶ್‌ಬಾಬು, ಗರೀಬ್ ಅಲಿ, ಖಾದಿ ರಮೇಶ್ ಇದ್ದರು. Meeting
ಹಿರಿಯೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ಮುಖಂಡರ ಸಭೆಯಲ್ಲಿ ಟಿ.ರಘುಮೂರ್ತಿ ಮಾತನಾಡಿದರು. ಜಿ.ಎಸ್.ಮಂಜುನಾಥ್, ತಾಜ್‌ಪೀರ್, ಅಮೃತೇಶ್ವರಸ್ವಾಮಿ, ಸುರೇಶ್‌ಬಾಬು, ಗರೀಬ್ ಅಲಿ, ಖಾದಿ ರಮೇಶ್ ಇದ್ದರು. Meeting
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ. ರಘುಮೂರ್ತಿ ಮನವಿ
  • ಹಿರಿಯೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಹಿರಿಯೂರು: ಜಿಲ್ಲೆಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ದಿ. ಸುಧಾಕರ್ ಅವರ ನುಡಿ ನಮನ ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕರ್ತರು ಸಹಕರಿಸಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು. Meeting
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನುಡಿನಮನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ತಿಳಿಸಿದರು.
ಸುಧಾಕರ್ ಅವರ ವ್ಯಕ್ತಿತ್ವ, ಜನಪರ ಕಾಳಜಿ, ಸಮಾಜಮುಖಿ ಚಿಂತನೆ, ಅಭಿವೃದ್ಧಿಯ ಹೆಜ್ಜೆ ಗುರುತು, ಜಾತಿ ಬಲ ಇಲ್ಲದಿದ್ದರೂ ಜನ ಬೆಂಬಲದಿಂದ ಪ್ರಬಲ ನಾಯಕನಾಗಿ ಬೆಳೆದು ಬಂದ ವಿಚಾರವನ್ನು ಜನರಿಗೆ ತಿಳಿಸಬೇಕಿದೆ ಎಂದರು.
ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ, ಜಾತ್ಯತೀತ ವ್ಯಕ್ತಿತ್ವದ ಸುಧಾಕರ್ ಅವರು ಕಾಂಗ್ರೆಸ್ ಪಕ್ಷ, ಕಾರ್ಯಕರ್ತರ ಸಂಘಟನೆ ಮೂಲಕ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಿದ್ದರು. ಅವರ ಜನಪರ ಕಾಳಜಿ ಇಂದಿನ ಯುವ ಜನತೆಗೆ ಪ್ರೇರಣೆಯಾಗಿದೆ. ಕಾರ್ಯಕರ್ತರು ವೈಮನಸ್ಸು, ದ್ವೇಷ, ಕೆಸರೆರಚಾಟ ಬಿಟ್ಟು ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಇದು ಸುಧಾಕರ್ ಅವರಿಗೆ ನಾವು ನೀಡುವ ಗೌರವ ಎಂದು ತಿಳಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳಿಗೆ ಪಕ್ಷದ ಮುಖಂಡರನ್ನು ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಸಭೆಯಲ್ಲಿ 33 ಗ್ರಾಪಂ ಬ್ಲಾಕ್ ಅಧ್ಯಕ್ಷರು, 31 ವಾರ್ಡ್ ಅಧ್ಯಕ್ಷರು, ಪಕ್ಷದ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.
ಮಂತ್ರಿಸ್ಥಾನ ನಿಶ್ಚಿತ: ದಿ. ಸುಧಾಕರ್ ನುಡಿ-ನಮನ ಕಾರ್ಯಕ್ರಮದ ನೇತತ್ವ ವಹಿಸಿ ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (ದೆಹಲಿಯಲ್ಲಿ) ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಸೂಚನೆ ನೀಡಿರುವುದು ಮಂತ್ರಿ ಸ್ಥಾನ ಸಿಗುವುದು ನಿಶ್ಚಿತ ಎನ್ನಲಾಗಿದೆ.
ಯುವ ಮುಖಂಡ ಸುಹಾಸ್ ಸುಧಾಕರ್, ಡಿಸಿಸಿ ಅಧ್ಯಕ್ಷ ತಾಜ್‌ಪೀರ್, ಮುಖಂಡರಾದ ಶಕೀಲ್ ನವಾಜ್, ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ಗರೀಬ್ ಅಲಿ, ಈ. ಮಂಜುನಾಥ್, ಕಂದಿಕೆರೆ ಸುರೇಶ್ ಬಾಬು, ಈರಲಿಂಗೇಗೌಡ, ಕೃಷ್ಣಮೂರ್ತಿ, ಟಿ. ಚಂದ್ರಶೇಖರ್, ಜ್ಞಾನೇಶ್, ಕಲ್ಲಹಟ್ಟಿ ಹರೀಶ್, ಗುರುಪ್ರಸಾದ್, ಮಮತಾ, ಮಂಜುಳಾ, ನಾಗೇಂದ್ರನಾಯ್ಕ, ಶಿವಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net