ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ

 ಚಿತ್ರದುರ್ಗದ ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಮಂಗಳವಾರ ಡಾ. ಬಸವಕುಮಾರ ಸ್ವಾಮೀಜಿ ಉದ್ಘಾಟಿಸಿದರು. ಎಸ್.ವಿ. ರವಿಶಂಕರ್, ವಿ.ಟಿ.ರವಿ, ಪಿ.ಬಿ. ರಾಜೇಶ್, ಎಸ್. ಮೋಹನ್‌ಕುಮಾರ್, ನಳಿನಾಕ್ಷಿ, ಪಿ.ಎ. ರಘು ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಾ. ಬಸವಕುಮಾರ ಸ್ವಾಮೀಜಿ
  • ಕೌಶಲ ವೃದ್ಧಿ
  • ವ್ಯಕ್ತಿತ್ವ ವಿಕಸನ
ಚಿತ್ರದುರ್ಗ: ಕ್ರೀಡೆ ಯಾವುದೇ ಆಗಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತಿಮುಖ್ಯ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಸಲಹೆ ನೀಡಿದರು.
ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಿಂದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ೨೦೨೫-೨೬ನೇ ಸಾಲಿನ ಪಾಲಿ-ೆ¸್ಟï ಉತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಬದ್ಧತೆ, ಶಿಸ್ತು, ಸಂಯಮ, ತಾಳ್ಮೆ, ಒತ್ತಡ ನಿವಾರಣೆ, ಜೀವನದಲ್ಲಿ ಕೌಶಲ ವೃದ್ಧಿಯಾಗಲು, ವ್ಯಕ್ತಿತ್ವ ವಿಕಸನ, ಬಲವರ್ಧನೆ, ಆರೋಗ್ಯ, ಆತ್ಮವಿಶ್ವಾಸ ಹೆಚ್ಚಳಕ್ಕೆ ಕೀಡೆ ಪ್ರೇರಣೆಯಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಎಸ್.ವಿ. ರವಿಶಂಕರ್, ವಿಭಾಗದ ಮುಖ್ಯಸ್ಥರಾದ ವಿ.ಟಿ. ರವಿ, ಪಿ.ಬಿ. ರಾಜೇಶ್, ಎಸ್. ಮೋಹನ್ ಕುಮಾರ್, ನಳಿನಾಕ್ಷಿ, ಪಿ.ಎ. ರಘು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net