ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಟೈಕ್ವಾಂಡೋ ಪಂದ್ಯಾವಳಿಯನ್ನು ಎಂಎಲ್‌ಸಿ ಕೆ.ಎಸ್. ನವೀನ್ ಶನಿವಾರ ಉದ್ಘಾಟಿಸಿದರು. ಸಿ.ಟಿ. ಕೃಷ್ಣಮೂರ್ತಿ, ಜೆ. ತಿರುಮಾಲ್, ಬಿ.ಎನ್. ವೆಂಕಟೇಶ್, ನಾಗರಾಜ್‌ಬೇದ್ರೆ, ರಾಜಕುಮಾರ್, ಅರುಣ್‌ರಾಥೋಡ್, ಶ್ರೀಕಾಂತ್,ದುಮ್ಮಿ ಚಿನ್ನಮ್ಮ ತಿಪ್ಪೇಸ್ವಾಮಿ, ಟಿ. ಮಂಜಪ್ಪ ಇತರರು ಇದ್ದರು.
ಸಮರ ಕಲೆ, ಟೈಕ್ವಾಂಡೋ ಕ್ರೀಡೆಯ ಕಲಿಕೆ ಮಕ್ಕಳ ಸರ್ವಾಂಗೀಣ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಸೂಕ್ತ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಪ್ರತಿಪಾದಿಸಿದರು.
ಕರ್ನಾಟಕ ಟೈಕ್ವಾಂಡೋ ಅಸೋಸಿಯೇಷನ್ ನಗರದ ಶ್ರೀ ವಿನಾಯಕ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಎರಡು ದಿನ ಗಳ ೪೧ನೇ ರಾಜ್ಯಮಟ್ಟದ ಸಬ್ ಜ್ಯೂನಿಯರ್, ಜ್ಯೂನಿಯರ್, ಸೀನಿಯರ್, ೧೦ನೇ ಕೆಡಿಟ್ ಕೂರ್ಗಿ, ೧೪ನೇ ಪೂಂಸೆ ಮತ್ತು ೩ನೇ ಪಾರಾ ಟೈಕ್ವಾಂಡೋ ಪಂದ್ಯಾವಳಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಆತ್ಮ ರಕ್ಷಣೆಗೆ ಕೊರಿಯಾ ಮೂಲದ ಈ ಕ್ರೀಡೆಯಲ್ಲಿ ಕೈ ಮತ್ತು ಕಾಲುಗಳ ಸೂಕ್ತ ಸಮನ್ವಯದ ಮೂಲಕ ಯಾವುದೇ ಆಯುಧ ವಿ ಲ್ಲದೆ ಎದುರಾಳಿ ಎದುರಿಸುವ ಶಕ್ತಿ ಇದೆ. ಮಕ್ಕಳಲ್ಲಿ ಅಗತ್ಯವಿರುವ ಅಗತ್ಯ ಕೌಶಲಗಳು ಹಾಗೂ ದೈಹಿಕ ಸಮನ್ವಯತೆ ವÊದ್ಧಿ ಸಲು ಈ ಕ್ರೀಡೆ ಅಡಿಪಾಯವಾಗಿದೆ. ನಿತ್ಯ ಕ್ರಿಯಾಶೀಲ, ದೈಹಿಕ, ಮಾನಸಿಕ ಶಿಸ್ತಿಗೆ ಅತ್ಯಂತ ಸಹಕಾರಿಯಾಗಿರುವ ಟೈಕ್ವಾಂ ಡೋ ಇಂದು ದೇಶಾದ್ಯಂತ ಜನಪ್ರಿಯವಾಗುತ್ತಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ ಮಾತನಾಡಿ, ರಾಜರ ಕಾಲದಲ್ಲಿ ಗರಡಿ ಮನೆಗಳಲ್ಲಿ ಪೈಲ್ವಾನರನ್ನು ತಯಾರು ಮಾಡಲಾಗುತ್ತಿತ್ತು. ಆಗ ಕೇವಲ ಗಂಡು ಮಕ್ಕಳಿಗೆ ಮಾತ್ರ ಅವಕಾಶವಿತ್ತು. ಆದರೆ, ಇಂದು ಹೆಣ್ಣು ಮಕ್ಕಳೂ ಕೂಡ ಸಮಾನ ವಾಗಿ ಕರಾಟೆ ಹಾಗೂ ಸಮರಕಲೆಗಳನ್ನು ಆತ್ಮರಕ್ಷಣೆಗೆ ಕಲಿಯುತ್ತಿರುವುದು ಸಂತಸದ ವಿಷಯ ಎಂದರು.
ರಾಜ್ಯದ ೧೩ ಜಿಲ್ಲೆಗಳಿಂದ ೩೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂ ಡಿದ್ದಾರೆ.