ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಪಿಜಿ ಕೋರ್ಸ್ಗಳನ್ನು ಮಂಜೂರು ಮಾಡುವಂತೆ ಕೋರಿ ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಂಸಿಆರ್‌ಐ) ೨೦೨೬-೨೭ನೇ ಸಾಲಿ ನಿಂದ ಪಿಜಿ ಕೋರ್ಸ್ ಆರಂಭಿಸಲು ಅನುಮತಿ ನೀಡಬೇಕು ಎಂದು ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಮಾಡಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ಚಿತ್ರದುರ್ಗ ಜಿಲ್ಲೆ ಜನರಿಗೆ ಗುಣಮಟ್ಟದ ತಜ್ಞ ವೈದ್ಯಕೀಯ ಸೇವೆಗಳನ್ನು ಸ್ಥಳೀಯವಾಗಿ ಒದಗಿಸುವ ಅಗತ್ಯವಿದ್ದು,ಈ ಹಿನ್ನೆಲೆಯಲ್ಲಿ ಸಿಎಂಸಿಆರ್‌ಐನಲ್ಲಿ ಸ್ನಾತಕೋತ್ತರ(ಎಂಡಿ/ಎAಎಸ್)ಕೋರ್ಸ್ಗಳನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಮನವರಿಕೆ ಮಾಡಿದರು.
೪ ಪ್ರಮುಖ ರಾಷ್ಟಿçÃಯ ಹೆದ್ದಾರಿಗಳ ಪ್ರಮುಖ ಸಂಗಮ ಪ್ರದೇಶವಾಗಿರುವ ಚಿತ್ರದುರ್ಗ ಬಳಿ ಅಪಘಾತಗಳ ಸಂಖ್ಯೆ ಅಽಕ ವಾಗಿದೆ. ಸಿಎಂಸಿಆರ್‌ಐನಲ್ಲಿ ಪ್ರತಿ ತಿಂಗಳು ೫೨೫ಕ್ಕೂ ಅಽಕ ಟ್ರಾಮಾ ಪ್ರಕರಣಗಳು ದಾಖಲಾಗುತ್ತಿವೆ. ಹಾವು ಕಡಿತ, ನಾಯಿ ಕಡಿತ, ವಿಷ ಸೇವನೆ ಸೇರಿ ದಂತೆ ಹಲವು ತುರ್ತು ಪ್ರಕರಣಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಿಎಂಸಿಆರ್‌ಐ ಬೋಧನಾ ಆಸ್ಪತ್ರೆಯಲ್ಲಿ ನಿತ್ಯ ೧೨೦೦ಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ೬೯೦ ಹಾಸಿಗೆಗಳ ಈ ಆಸ್ಪತ್ರೆ ಶೇ.೧೦೦ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ೧೬೦೦೦ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಾಗುತ್ತಿವೆ. ಇಲ್ಲಿ ೫೦ ಹಾಸಿಗೆಗಳ ಕ್ರಿಟಿಕಲ್ ಕೇರ್‌ಬ್ಲಾಕ್ ಹಾಗೂ ಟ್ರಾಮಾ ಕೇರ್ ಸೆಂಟರ್ ಇದ್ದು, ಹೆಚ್ಚುವರಿಯಾಗಿ ೧೦೦ ಹಾಸಿಗೆಗಳ ಟ್ರಾಮಾ ಕೇರ್ ಸೆಂಟರ್‌ಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಆರೋಗ್ಯ ಸೇವೆ ಲಭ್ಯ
ಪಿಜಿ ಕೋರ್ಸ್ಗಳು ಆರಂಭವಾದರೆ ಚಿತ್ರದುರ್ಗ ಸೇರಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಹೆಚ್ಚುವುದರ ಜತೆಗೆ ಟ್ರಾಮಾ, ತುರ್ತು ಚಿಕಿತ್ಸೆ ಮತ್ತು ಕ್ರಿಟಿಕಲ್ ಕೇರ್ ಸೇವೆಗಳು ಇನ್ನಷ್ಟು ಬಲಗೊಳ್ಳಲಿವೆ. ವಿಶೇಷ ಚಿಕಿತ್ಸೆಗಳಿಗಾಗಿ ಬೆಂಗಳೂರು ಮತ್ತಿತರ ನಗ ರಗಳಿಗೆ ತೆರಳಬೇಕಾಗಿರುವ ರೋಗಿಗಳ ಸಮಸ್ಯೆ ಹಾಗೂ ಸಂಖ್ಯೆ ಕೂಡ ಕಡಿಮೆಯಾಗಲಿದೆ.
ಈ ಹಿನ್ನೆಲೆಯಲ್ಲಿ ತಾವು ರಾಷ್ಟಿçÃಯ ವೈದ್ಯಕೀಯ ಆಯೋಗ ಸೇರಿದಂತೆ ಸಂಬAಽಸಿದ ಅಽಕಾರಿಗಳಿಗೆ ಈ ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಪಿಜಿ ಕೋರ್ಸ್ಗಳಿಗೆ ಮಂಜೂರಾತಿ ನೀಡಲು ಅಗತ್ಯ ಕ್ರಮಕೈಗೊಳ್ಳಲು ನಿರ್ದೇ ಶಿಸನ ನೀಡಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಪ್ರಸ್ತಾವಿತ ೨೩ ಪಿಜಿ ಸೀಟುಗಳು
ಎಂಡಿ-ಅರಿವಳಿಕೆ ಶಾಸ್ತç-೩.ಎಂಎಸ್-ಸಾಮಾನ್ಯ ಶಸ್ತç ಚಿಕಿತ್ಸೆ-೫. ಎಂಡಿ-ಮಕ್ಕಳ ವೈದ್ಯಕೀಯ ಶಾಸ್ತç ೩.ಎಂಡಿ-ಸಾಮಾನ್ಯ ವೈದ್ಯಕೀಯ ಶಾಸ್ತç-೫. ಎಂಎಸ್-ಮೂಳೆ ಚಿಕಿತ್ಸಾ ಶಾಸ್ತç-೩. ಎಂಡಿ-ನ್ಯಾಯ ವೈದ್ಯಕೀಯ ಶಾಸ್ತç ಮತ್ತು ವಿಷ ಶಾಸ್ತç-೨ ಹಾಗೂ ಎಂಎಸ್-ಪ್ರಸೂತಿ ಮತ್ತು ಸ್ತಿçà ರೋಗ ಶಾಸ್ತç.