ಎಸ್ಸೆಸ್ಸೆಲ್ಸಿ ಪರೀಕ್ಷೆ-೨ನ್ನು ಸಮರ್ಪಕವಾಗಿ ನಿರ್ವಹಿಸಿ

ಚಿತ್ರದುರ್ಗದಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ -೨ರ ಪೂರ್ವ ಸಿದ್ಧತಾ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಂ.ಆರ್. ಮಂಜುನಾಥ್, ಎಂ. ನಾಸಿರುದ್ದೀನ್, ಮಹಮದ್ ಇನಾಯತ್‌ಉಲ್ಲಾ, ಕೆ.ಎಸ್. ಸುರೇಶ್, ಎಚ್. ಗಿರಿಜಾ, ಶ್ರೀನಿವಾಸ, ಸೈಯದ್ ಮೋಸಿನ್, ನಿರ್ಮಲಾದೇವಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ -೨ರ ಪೂರ್ವ ಸಿದ್ಧತಾ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಂ.ಆರ್. ಮಂಜುನಾಥ್, ಎಂ. ನಾಸಿರುದ್ದೀನ್, ಮಹಮದ್ ಇನಾಯತ್‌ಉಲ್ಲಾ, ಕೆ.ಎಸ್. ಸುರೇಶ್, ಎಚ್. ಗಿರಿಜಾ, ಶ್ರೀನಿವಾಸ, ಸೈಯದ್ ಮೋಸಿನ್, ನಿರ್ಮಲಾದೇವಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಽಕಾರಿಗಳಿಗೆ ಎಡಿಸಿ ತಾಕೀತು
  • ಮೇ ೧೮ರಿಂದ ೨೩ರವರೆಗೆ ಎಕ್ಸಾಂ
  • ೪೪೨೪ ವಿದ್ಯಾರ್ಥಿಗಳಿಂದ ನೋಂದಣಿ
ಚಿತ್ರದುರ್ಗ: ಮೇ ೧೮ ರಿಂದ ೨೩ ರವರೆಗೆ ಜಿಲ್ಲೆಯ ೧೬ ಕೇಂದ್ರಗಳಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ-೨ನ್ನು ಸಮರ್ಪಕವಾಗಿ ನಡೆಸುವಂತೆ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ತಾಕೀತು ಮಾಡಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-೧ನ್ನು ಜಿಲ್ಲೆಯಲ್ಲಿ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನಡೆಸಲಾಗಿದೆ. ಇದರಂತೆ ಈ ಪರೀಕ್ಷೆಯನ್ನೂ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮು ನ್ನೆಚ್ಚರಿಕೆಯೊಂದಿಗೆ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು. ಯಾವು ದೇ ಅಕ್ರಮ ನಡೆಯದಂತೆ ತಡೆಯಲು ಜಿಲ್ಲಾಮಟ್ಟದ ಅಽಕಾರಿಗಳನ್ನು ವಿಚಕ್ಷಣಾ ಜಾಗೃತಿದಳವನ್ನಾಗಿ ನೇಮಕ ಮಾಡ ಲಾಗಿದೆ ಎಂದರು.
ಡಿಡಿಪಿಐ ಎಂ.ಆರ್. ಮಂಜುನಾಥ್ ಮಾತನಾಡಿ,ಎಸ್ಸೆಸ್ಸೆಲ್ಸಿ ಪರೀಕ್ಷೆ-೨ಗೆ ಜಿಲ್ಲೆಯಲ್ಲಿ ೪೪೨೪ ವಿದ್ಯಾರ್ಥಿಗಳು ನೋಂದಾಯಿಸಿ ಕೊAಡಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲಿ ೭೪೮ ವಿದ್ಯಾರ್ಥಿಗಳು, ಚಿತ್ರದುರ್ಗ-೧೪೯೪, ಹಿರಿಯೂರು-೬೮೮, ಹೊಳಲ್ಕೆರೆ-೪೪೫, ಹೊಸದುರ್ಗ-೭೨೬ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ ೩೨೩ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲಾ ಪಂಚಾಯಿತಿಯವಲ್ಲಿ ಕೇಂದ್ರಿಕÊತ ವೀಕ್ಷಣಾ ಘಟಕ ಸ್ಥಾಪಿಸಲಾಗಿದೆ. ಅಽಕಾರಿ, ಸಿಬ್ಬಂದಿ ಒಳಗೊಂಡ ನೋಡಲ್ ಅಽಕಾರಿ ಗಳು ಮತ್ತು ವೀಕ್ಷಕರ ತಂಡ ರಚಿಸಲಾಗುವುದು. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಹಾಗೂ ಪೋಲೀಸ್ ಸಿಬ್ಬಂದಿಯನ್ನು ಪರೀಕ್ಷೆ ನಡೆಯುವ ದಿನಗಳಂದು ನಿಯೋಜಿಸಬೇಕು ಹಾಗೂ ಎಲ್ಲ ಕೇಂದ್ರಗಳ ವ್ಯಾಪ್ತಿಗೊಳಪಟ್ಟಂತೆ ನಿಷೇಧಾಜ್ಞೆ ಜಾರಿ ಮಾಡ ಬೇಕೆಂದು ಮನವಿ ಮಾಡಿದರು.
ವೇಳಾಪಟ್ಟಿ:
ಮೇ ೧೮ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧.೧೫ರವರೆಗೆ ಪ್ರಥಮ ಭಾಷೆ,೧೯ರಂದು ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧.೧೫ ರವರೆಗೆ ವಿಜ್ಞಾನ, ೨೦ ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ರವರೆಗೆ ದ್ವಿತೀಯ ಭಾಷೆ, ೨೧ರಂದು ಬೆಳಗ್ಗೆ ೧೦ರಿಂದ ಮಧ್ಯಾ ಹ್ನ ೧.೧೫ರವರೆಗೆ ಗಣಿತ, ೨೨ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ರವರೆಗೆ ತÊತೀಯ ಭಾಷೆ, ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧೨.೧೫ ರವರೆಗೆ ಎನ್‌ಎಸ್‌ಕ್ಯೂಎ-ï, ೨೩ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧.೧೫ ರವರೆಗೆ ಸಮಾಜ ವಿಜ್ಞಾನ ಪರೀಕ್ಷೆ ನಡೆ ಯಲಿದೆ ಎಂದು ತಿಳಿಸಿದರು.
ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್,ಡಿಡಿಪಿಐ ಕಚೇರಿ ಶಿಕ್ಷಣಾಽಕಾರಿ ಮಹಮದ್ ಇನಾಯತ್‌ಉಲ್ಲಾ, ಬಿಇಒಗಳಾದ ಕೆ.ಎಸ್.ಸುರೇಶ್, ಎಚ್. ಗಿರಿಜಾ, ಶ್ರೀನಿವಾಸ, ಸೈಯದ್ ಮೋಸಿನ್, ನಿರ್ಮಲಾ ದೇವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net