ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ, ಪೊರೆ ಶಸö ಚಿಕಿತ್ಸಾ ಶಿಬಿರ
ನೇತ್ರ ತಪಾಸಣೆ ಮತ್ತು ಪೊರೆ ಶಸöಚಿಕಿತ್ಸಾ ಶಿಬಿರ
ಚಿತ್ರದುರ್ಗ: ತಮ್ಮ ವ್ಯಾಪಾರದ ಲಾಭಾಂಶದಲ್ಲಿ ಒಂದಷ್ಟು ಮೊತ್ತವನ್ನು ಪರೋಪಕಾರಕ್ಕೆ ಬಳಸುವುದು ಪುಣ್ಯದ ಕೆಲಸ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಹೇಳಿದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಿ. ಬಬ್ಲಿಬಾಯಿ ಹಂಜಾರಿ ಮಲïಜಿ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸöಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಾಸಕರ ಅನುದಾನದಲ್ಲಿ ಈವರೆಗೂ ಹದಿನಾರು ಸಾವಿರ ಕಣ್ಣಿನ ತಪಾಸಣೆ ಮತ್ತು ಶಸöಚಿಕಿತ್ಸೆ ನಡೆಸಿದ್ದೇನೆ. ತಾಲೂಕಿ ನಾ ದ್ಯಂತ ಏಳು ಸಾವಿರ ಕನ್ನಡಕಗಳನ್ನು ವಿತರಿಸಲಾಗಿದೆ. ಪ್ರತಿಯೊಬ್ಬರಿಗೂ ಕಣ್ಣು ಅತ್ಯಗತ್ಯ. ರಕ್ಷಣೆಗೆ ಗಮನಹರಿಸಬೇಕು ಎಂದು ಹೇಳಿದರು.
ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ಅವಕಾಶ ಸಿಕ್ಕಾಗ ಲಾಭಾಂಶವನ್ನು ಸಮಾಜಕ್ಕೆ ಧಾರೆ ಎರೆಯುವ ಕೆಲಸ ಮಾಡಿದರೆ ಭಗವಂತ ಮೆಚ್ಚುತ್ತಾನೆ. ಜನನ-ಮರಣದ ನಡುವೆ ಸಮಾಜಮುಖಿಯಾಗಿ ಬಾಳುವುದು ಮುಖ್ಯ ಎಂದು ಸಲಹೆ ನೀಡಿ ದರು.
ಸಾನ್ನಿಧ್ಯವಹಿಸಿದ್ದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನAದ ಸ್ವಾಮೀಜಿ ಮಾತನಾಡಿ, ಮಾನವನ ದೇಹದಲ್ಲಿ ಅತ್ಯಂತ ಶ್ರೇ ಷ್ಠವಾದುದು ತಲೆ. ಅದರಲ್ಲಿ ಕಣ್ಣು ಪ್ರಧಾನವಾದುದು. ಕೃತಕ ಕಾಲು, ಅಂಗಾAಗಗಳ ಜೋಡಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತ ಅಸಹಾಯಕರ ನೆರವಿಗೆ ನಿಲ್ಲಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ, ಜೈನ ಸಮುದಾಯದವರು ಒಂದಲ್ಲೊAದು ರೀತಿಯ ಜನಸೇವೆಯಲ್ಲಿ ತೊಡಗಿರುವುದು ಅವರ ದೊಡ್ಡ ಗುಣ ಎಂದರು.
ಡಾ. ಸೋಲಂಕಿ ಮಾತನಾಡಿ, ಚಿತ್ರದುರ್ಗದಲ್ಲಿ ೩ ಸಾವಿರ ಸೇರಿ ಈವರೆಗೂ ೩.೫ ಲಕ್ಷ ಮಂದಿಗೆ ಕಣ್ಣಿನಪೊರೆ ಶಸöಚಿಕಿತ್ಸೆ ಮಾಡಲಾಗಿದೆ. ೨೦೨೧ರಿಂದ ಈ ಸೇವೆ ಆರಂಭವಾಗಿದ್ದು, ರಾಜ್ಯದ ೨೬ ಜಿ¯್ಲೆಗಳಲ್ಲೂ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ, ವೈದ್ಯಕೀಯ ಅಽÃಕ್ಷಕ ಡಾ.ಎಲ್. ಪಾಲಾಕ್ಷಯ್ಯ ಇತರರಿದ್ದರು.