ಪಕ್ಷ ನಿಷ್ಠೆಗೆ ಕಾಂಗ್ರೆಸ್ಸಿನಲ್ಲಿ ಸ್ಥಾನಮಾನ ಖಚಿತ

ಎಚ್.ಆಂಜನೇಯ
ಎಚ್.ಆಂಜನೇಯ
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳೀಯ ಸಂಸ್ಥೆ ಚುನಾವಣೆಗಳು
  • ವಿಧಾನಸಭಾ ಚುನಾವಣೆ
  • ಸಿದ್ದರಾಮಯ್ಯ
ಚಿತ್ರದುರ್ಗ: ಪಕ್ಷದ ನಿಷ್ಠಾವಂತ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ರಾಜ್ಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.
ಹರಿಪ್ರಸಾದ್ ಅವರು ವಿದ್ಯಾರ್ಥಿ, ಯುವ, ಸೇವಾದಳ, ರಾಷ್ಟಿçÃಯ ಯುವ ಕಾಂಗ್ರೆಸ್ ಸಂಘಟನೆ, ಎಐಸಿಸಿ ಕಾರ್ಯದರ್ಶಿ, ಪ್ರ ಧಾನ ಕಾರ್ಯದರ್ಶಿ, ನಾಲ್ಕೆÊದು ರಾಜ್ಯಗಳ ಉಸ್ತುವಾರಿ, ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಎಂಥದ್ದೇ ಕಷ್ಟ ಕಾಲದಲ್ಲೂ ಪಕ್ಷದ ಸಿದ್ಧಾಂತ, ದೇಶದ ಹಿತಕ್ಕೆ ಧಕ್ಕೆ ಬಾರದಂತೆ ಬದ್ಧತೆಯಿಂದ ರಾಜಕಾರಣ ಮಾಡಿಕೊಂಡು ಬಂ ದಿದ್ದಾರೆ. ಸಂಘಟನೆ ಅನುಭವವಿರುವ ಅವರಿಗೆ ಕೆಪಿಸಿಸಿ ಸಾರಥ್ಯ ನೀಡಿರುವುದು ಅತ್ಯಂತ ಸೂಕ್ತ ನಿರ್ಧಾರವಾಗಿದೆ ಎಂದು ತಿಳಿ ಸಿದ್ದಾರೆ.
ಹರಿಪ್ರಸಾದ್ ನೇತೃತ್ವದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು, ೨೦೨೮ರ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ. ನಿಗಮ, ಮಂಡಳಿಗಳ ಅಧ್ಯಕ್ಷ, ನಿರ್ದೇಶಕ, ಸದಸ್ಯ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಸರ್ಕಾರಿ ಸಂಸ್ಥೆ ಗಳಿಗೆ ನಾಮ ನಿರ್ದೇಶನ ಸೇರಿ ವಿವಿಧ ಸ್ಥಾನಗಳಿಗೆ ಪಕ್ಷಕ್ಕಾಗಿ ದುಡಿದವರನ್ನು ನೇಮಿಸಲು ಹರಿಪ್ರಸಾದ್ ಶ್ರಮ ವಹಿಸಲಿದ್ದಾರೆ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ರಾಜಕೀಯ ಬೆಳವಣಿಗೆಗಳು ದೇಶದ ಗಮನ ಸೆಳೆದಿವೆ. ಸಿಎಂ ಹುದ್ದೆ ತ್ಯಾಗ ಮಾಡಿದ ಸಿದ್ದರಾಮಯ್ಯ, ಸಿಎಂ ಆಗಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದಲ್ಲಿ ಹಿರಿಯರು, ಅಹಿಂದ ವರ್ಗಕ್ಕೆ ಮನ್ನಣೆ, ಹರಿಪ್ರಸಾದ್‌ಗೆ ಕೆಪಿಸಿಸಿ ಸಾರಥ್ಯ ವಹಿಸಿರು ವುದು ಮುಂಬರುವ ಚುನಾವಣೆಗಳಿಗೆ ಪಕ್ಷ ಈಗಿನಿಂದಲೇ ಸಜ್ಜಾಗುವ ಸೂಚನೆ ನೀಡಿದೆ ಎಂದು ಆಂಜನೇಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net