ಕೇಂದ್ರದ ಟ್ರಾನ್ಸ್ಜೆಂಡರ್ ತಿದ್ದುಪಡಿ ಮಸೂದೆಗೆ ವಿರೋಧ

 ಟ್ರಾನ್ಸ್ಜೆAಡರ್ ತಿದ್ದುಪಡಿ ಮಸೂದೆ ಹಿಂತೆಗೆತಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಚಿತ್ರದುರ್ಗದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಲಿಂಗತ್ವ ಅಲ್ಪಸಂಖ್ಯಾತರು ಪ್ರತಿಭಟಿಸಿದರು. ಸೂರ್ತಿ, ಡಾ. ಅರುಧಂತಿ, ಚಂದ್ರಮ್ಮ, ಆವಂತಿಕ, ಅಲೈಕಾ ಮೊದಲಾದವರು ಇದ್ದರು.
ಟ್ರಾನ್ಸ್ಜೆAಡರ್ ತಿದ್ದುಪಡಿ ಮಸೂದೆ ಹಿಂತೆಗೆತಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಚಿತ್ರದುರ್ಗದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಲಿಂಗತ್ವ ಅಲ್ಪಸಂಖ್ಯಾತರು ಪ್ರತಿಭಟಿಸಿದರು. ಸೂರ್ತಿ, ಡಾ. ಅರುಧಂತಿ, ಚಂದ್ರಮ್ಮ, ಆವಂತಿಕ, ಅಲೈಕಾ ಮೊದಲಾದವರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದುರ್ಗದಲ್ಲಿ ಮೋಂಬತ್ತಿ ಹಿಡಿದು ಪ್ರತಿಭಟನೆ
  • ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ
  • ಪ್ರಜಾಪ್ರಭುತ್ವ
ಚಿತ್ರದುರ್ಗ: ಕೇಂದ್ರದ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆ ವಿರೋಽಸಿ ಲಿಂಗತ್ವ ಅಲ್ಪಸಂಖ್ಯಾತರು ನಗರದಲ್ಲಿ ಶುಕ್ರವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟಿಸಿದರು.
ಮೊಂಬತ್ತಿ ಹಿಡಿದಿದ್ದ ಅವರು, ನನ್ನ ಲಿಂಗತ್ವ ನನ್ನ ಆಯ್ಕೆ, ಸ್ವಯಂ ಗುರುತಿಸುವಿಕೆ ನಮ್ಮ ಹಕ್ಕು ಮೊದಲಾದ ಘೋಷಣೆಗಳನ್ನು ಕೂಗಿ, ಮಸೂದೆ ಪ್ರತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕೂಡಲೇ ಉದ್ದೇಶಿತ ಮಸೂದೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸೂರ್ತಿ ಅವರು ಮಾತನಾಡಿ, ವೈದ್ಯಕೀಯ ತಪಾಸಣೆಯೊಂದಿಗೆ ಕಡ್ಡಾಯವಾಗಿ ಸರ್ಟಿಫಿಕೇಟ್ ಪಡೆಯಬೇಕು. ಬಲವಂತವಾಗಿ ಯಾರನ್ನಾದರೂ ನÀಮ್ಮ ಸಮುದಾಯಕ್ಕೆ ಕರೆದುಕೊಂಡರೆ ೧೦ ವರ್ಷ ಜೈಲು ಶಿಕ್ಷೆ ವಿಽಸುವ ಈ ಮಸೂದೆ ಲಿಂಗತ್ವ ಅಲ್ಪಸಂಖ್ಯಾತರ ವಿರೋಽಯಾಗಿದೆ ಎಂದು ಕಿಡಿಕಾರಿದರು.
ಡಾ. ಅರುಂಧತಿ ಮಾತನಾಡಿ, ೨೦೧೯ರಲ್ಲಿದ್ದ ಮಸೂದೆಯಿಂದ ನಮಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ, ಕೇಂದ್ರದ ಉದ್ದೇಶಿತ ಹೊಸ ಮಸೂದೆ ನಮ್ಮ ಹಕ್ಕುಗಳನ್ನು ಸಂಪೂರ್ಣ ಕಸಿದುಕೊಳ್ಳುತ್ತಿದೆ. ಸ್ವಯಂ ಗುರುತಿಸಿಕೊಳ್ಳುವಿಕೆ ನಮ್ಮ ಜನ್ಮಸಿದ್ದ ಹಕ್ಕು. ಪ್ರಜಾಪ್ರಭುತ್ವದಲ್ಲಿ ಸಮಾನವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ ಎಂದರು.
ಡಾ.ಬಿ.ಆರ್.ಅAಬೇಡ್ಕರ್ ಅವರ ಸಂವಿಧಾನದ ಮೌಲ್ಯಗಳನ್ನು ಪರಿಪಾಲಿಸುವುದಾಗಿ ಹೇಳುವ ಪ್ರಧಾನಿ ನರೇಂದ್ರಮೋದಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಹೊಸ ಮಸೂದೆ ಹಿಂಪಡೆಯಬೇಕು ಎಂದರು.
ಚAದ್ರಮ್ಮ, ಆವಂತಿಕ, ಅಲೈಕಾ, ಸಾನಿಯಾ, ಅಮೂಲ್ಯ, ಹರ್ಷಿಣಿ, ಅನು, ನೂತನ, ರೋಜಿ, ಸುಬ್ಬಲಕ್ಷಿ÷್ಮÃ, ವಿದ್ಯಾ, ಕೃಷ್ಣವೇಣಿ, ಅಂಬಿ, ಗೌಸಿ, ಸುಗುಣ, ಪ್ರಭಾವತಿ, ಹೊಳೆಯಪ್ಪ ಸಾಕ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net