ಮನರೇಗಾ ರೂಪ ಬದಲಾವಣೆಗೆ ಕೈ ವಿರೋಧ

ಮನರೇಗಾ ರೂಪ ಬದಲಿಸಿ ವಿಬಿ ಜಿ ರಾಮ್ ಜಿ ಹೆಸರಿನಡಿ ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಯೋಜನೆ ವಿರೋಽಸಿ ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಸೋಮವಾರ ಪಾದಯಾತ್ರೆ ನಡೆಸಿದರು. ಡಿ. ಸುಧಾಕರ್, ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಜಿ.ಎಸ್. ಮಂಜುನಾಥ್, ಎಂ.ಕೆ. ತಾಜ್‌ಪೀರ್, ಗೀತಾ ನಂದಿನಿಗೌಡ ಇತರರಿದ್ದರು.
ಮನರೇಗಾ ರೂಪ ಬದಲಿಸಿ ವಿಬಿ ಜಿ ರಾಮ್ ಜಿ ಹೆಸರಿನಡಿ ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಯೋಜನೆ ವಿರೋಽಸಿ ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಸೋಮವಾರ ಪಾದಯಾತ್ರೆ ನಡೆಸಿದರು. ಡಿ. ಸುಧಾಕರ್, ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಜಿ.ಎಸ್. ಮಂಜುನಾಥ್, ಎಂ.ಕೆ. ತಾಜ್‌ಪೀರ್, ಗೀತಾ ನಂದಿನಿಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದ ಏಕಪಕ್ಷೀಯ ನಿರ್ಧಾರವೆಂದು ಆರೋಪ
  • ಸಚಿವ ಸುಧಾಕರ್ ಮುಂದಾಳತ್ವದಲ್ಲಿ ಪಾದಯಾತ್ರೆ
  • ವಿಬಿ ಜಿ ರಾಮ್ ಜಿ
ಚಿತ್ರದುರ್ಗ: ಕೇಂದ್ರ ಸರ್ಕಾರ ಮನರೇಗಾ ರೂಪ ಬದಲಿಸಿ ವಿಬಿ ಜಿ ರಾಮ್ ಜಿ ಹೆಸರಿನಡಿ ಜಾರಿಗೆ ಮುಂದಾಗಿರುವ ಯೋಜನೆ ವಿರೋಽಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪಾದಯಾತ್ರೆ ನಡೆಸಿದರು.
ನೇತೃತ್ವ ವಹಿಸಿದ್ದ ಸಚಿವ ಡಿ. ಸುಧಾಕರ್ ಮಾತನಾಡಿ, ಯುಪಿಎ ಅವಽಯ ಮಹತ್ವಕಾಂಕ್ಷೆ ಯೋಜನೆ ಮನರೇಗಾದ ಮೂಲ ಸ್ವರೂಪವನ್ನೇ ಬದಲಿಸಲು ಕೇಂದ್ರ ಹೊರಟಿರುವುದು ಖಂಡನೀಯ. ಇದು ಏಕಪಕ್ಷೀಯ ನಿರ್ಧಾರ. ಹಿಂದಕ್ಕೆ ಪಡೆಯುವವರೆಗೂ ಹೋರಾಟ ನಿಲ್ಲದು ಎಂದರು.
ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ ಮನರೇಗಾ ಅನೇಕ ವರ್ಷಗ ಳಿಂದಲೂ ಗ್ರಾಮೀಣ ಕೂಲಿ ಕಾರ್ಮಿಕರ, ಗ್ರಾಪಂ ವ್ಯಾಪ್ತಿಯ ಕೃಷಿಕರ ಆಸ್ತಿಗಳ ರಕ್ಷಣೆ, ಸಮಸ್ಯೆಗಳ ನಿವಾರಣೆ, ಕನಿಷ್ಠ ಕೂಲಿಯೊಂದಿಗೆ ಉದ್ಯೋಗ ಖಾತ್ರಿ ಒದಗಿಸುವ ಯೋಜನೆಯಾಗಿತ್ತು ಎಂದು ತಿಳಿಸಿದರು.
ಈ ಹಿಂದೆಯೇ ಯೋಜನೆ ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ, ಸಾಕಷ್ಟು ಹೋರಾಟಗಳ -Àಲವಾಗಿ ಯಥಾ ಸ್ಥಿತಿಯಲ್ಲೇ ಮುಂದುವರಿದಿತ್ತು. ಆದರೀಗ ಸಂಪೂರ್ಣ ಯೋಜನೆ ಜತೆಗೆ ಹೆಸರು ಬದಲಿಸುವ ಮೂಲಕ ಮಹಾತ್ಮಗಾಂಽ ಅವರ ವಿರೋಽ ಎಂಬುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಯೋಜನೆ ಬದಲಿಸುವ ಕುರಿತು ಸುದೀರ್ಘ ಚರ್ಚೆಗಳು ನಡೆದಿಲ್ಲ. ಯಾವ ರಾಜ್ಯಕ್ಕೂ ಪತ್ರ ಬರೆದು ಜನಪ್ರತಿನಿಽಗಳ ಅಭಿಪ್ರಾಯ ಕೇಳಿಲ್ಲ. ಲೋಕಸಭೆಯಲ್ಲೂ ಚರ್ಚೆಗೆ ಅವಕಾಶ ನೀಡದೆ ರಾಷ್ಟಿçÃಯ ಮಟ್ಟದ ಯೋಜನೆಯನ್ನು ಬದಲಾವಣೆ ಮಾಡಲು ಹೊರಟಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ, ಮನರೇಗಾ ಬಚಾವ್ ಹೆಸರಿನಲ್ಲಿ ದೊಡ್ಡ ಆಂದೋಲನ ನಡೆಸಲು ತೀರ್ಮಾನಿಸಲಾಗಿ ದೆ. ಯಥಾಸ್ಥಿತಿ ಮುಂದುವರಿಸುವAತೆ ಒತ್ತಾಯಿಸಿ ಹಂತ-ಹAತವಾಗಿ ಹೋರಾಟ ಕೈಗೊಳ್ಳಲಾಗುವುದು ಎಂದರು.
ಯೋಜನೆಯಡಿ ಕೇಂದ್ರ ಅನುಮತಿ ನೀಡಿದಷ್ಟು ಮಾತ್ರ ಕೆಲಸ ಸಿಗಲಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಲಿದೆ. ೧೦೦ರ ಬದಲು ೧೨೫ ದಿನ ಉದ್ಯೋಗ ನೀಡುವುದಾಗಿ ಹೇಳಿದೆ. ಆದರೆ, ಸಮರ್ಪಕ ಅನುದಾನ ನೀಡದ ಕಾರಣ ನೂರು ದಿನವೂ ಕೆಲಸ ದೊರೆಯದ ದುಸ್ಥಿತಿ ನಿರ್ಮಾಣವಾಗಿದೆ. ನೂತನ ಯೋಜನೆ ಮೂಲಕ ಉದ್ಯೋಗದ ಹಕ್ಕನ್ನು ಕಸಿಯಲು ಮುಂದಾಗಿದೆ ಎಂದು ದೂರಿದರು.
ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಪರೋಕ್ಷವಾಗಿ ಮಹಾತ್ಮಗಾಂಽ ಅವರ ಹೆಸರನ್ನು ಯೋಜನೆಯಿಂದ ತೆಗೆಯಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ೨೦೧೯ರಿಂದ ಈವರೆಗೂ ಸಾವಿರಾರು ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ. ರಾಜ್ಯ ಸರ್ಕಾರಗಳ ವಿಶ್ವಾಸ ಪಡೆಯದ ಕೆಲಸ ಮಾಡುತ್ತಿರುವ ಕೇಂದ್ರ ಸರ್ವಾಽಕಾರಿ ಧೋರಣೆ ಅನುಸರಿಸುತ್ತಿದೆ. ರಾಷ್ಟçದ ಜನರ ನಂಬಿಕೆಗೆ ಧಕ್ಕೆ ತಂದಿದ್ದು, ದೇಶಾದ್ಯಂತ ಕಾಂಗ್ರೆಸ್ ವಿರೋಽಸುತ್ತಿದೆ ಎಂದು ಹರಿಹಾಯ್ದರು.
ಇದಕ್ಕೂ ಮುನ್ನ ನಗರದ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿನ ಮಹಾತ್ಮ ಗಾಂಽ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಬಿ.ಡಿ. ರಸ್ತೆ ಮಾರ್ಗವಾಗಿ ಪಾದಯಾತ್ರೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಪಕ್ಷದ ಪದಾಽಕಾರಿಗಳಾದ ಹಾಲಸ್ವಾಮಿ, ಸಂಪತ್ ಕುಮಾರ್, ಡಿ.ಎನ್. ಮೈಲಾರಪ್ಪ, ಗೀತಾ ನಂದಿನಿಗೌಡ, ಮನಿರಾ ಮುಕಾಂದರ್, ಅ¯್ಲÁಭಕ್ಷಿ, ಚೋಟು, ಮರುಳಾರಾಧ್ಯ, ಲಕ್ಷೀಕಾಂತ, ಮುದಸಿರ್, ಜಯಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net