ಸರಕು ವಾಹನಗಳಲ್ಲಿ ಪ್ರಯಾಣಿಕರು ಬೇಡ

 ಚಿತ್ರದುರ್ಗ ಸಂಚಾರ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಚಾರ ನಿಯಮ ಅರಿವು ಕಾರ್ಯಕ್ರಮದಲ್ಲಿ ಎಎಸ್‌ಪಿ ಡಾ. ಶಿವಕುಮಾರ್, ಪಿಐ ತಿಮ್ಮಣ್ಣ, ಪಿಎಸ್‌ಐಗಳಾದ ವಿಶ್ವನಾಥ್, ಬಸವರಾಜ್ ಇದ್ದರು.
ಚಿತ್ರದುರ್ಗ ಸಂಚಾರ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಚಾರ ನಿಯಮ ಅರಿವು ಕಾರ್ಯಕ್ರಮದಲ್ಲಿ ಎಎಸ್‌ಪಿ ಡಾ. ಶಿವಕುಮಾರ್, ಪಿಐ ತಿಮ್ಮಣ್ಣ, ಪಿಎಸ್‌ಐಗಳಾದ ವಿಶ್ವನಾಥ್, ಬಸವರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ಎಎಸ್‌ಪಿ ಶಿವಕುಮಾರ್ ಎಚ್ಚರಿಕೆ
  • ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಸಲಹೆ
  • ಸಂಚಾರ ಪೊಲೀಸ್ ಠಾಣೆಯಲ್ಲಿ ಚಾಲಕ, ನಿರ್ವಾಹಕರ ಸಭೆ
ಚಿತ್ರದುರ್ಗ: ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯದಂತೆ ಚಾಲಕರಿಗೆ ಜಿಲ್ಲಾ ಹೆಚ್ಚುವರಿ ಎಸ್‌ಪಿ ಡಾ. ಶಿವ ಕುಮಾರ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ನಗರದ ಸಂಚಾರಿ ಠಾಣೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಚಾರ ನಿಯಮ ಅರಿವು ಕಾರ್ಯಕ್ರ ಮದಲ್ಲಿ ಸರಕು ಸಾಗಣೆ ವಾಹನ, ಲಗೇಜ್ ಆಟೋ, ಶಾಲಾ ಬಸ್‌ಗಳು ಹಾಗೂ ಬಸ್ ಚಾಲಕರು ಮತ್ತು ನಿರ್ವಾಹಕರ ಸಭೆಯಲ್ಲಿ ಮಾತನಾಡಿದರು.
ಎಲ್ಲ ವಾಹನಗಳ ಚಾಲಕರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಅತಿಯಾದ ವೇಗ ಯಾರಿಗೂ ಸಲ್ಲದು. ಒಂದು ವಾಹನದಿಂದ ಮತ್ತೊಂದು ವಾಹನ ನಡುವೆ ಸುರಕ್ಷಿತ ಅಂತರದೊAದಿಗೆ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕು. ಅ ತಿಯಾದ ವೇಗದಿಂದ ಅಪಾಯಕ್ಕೆ ಒಳಗಾಗಬೇಕಾಗುತ್ತದೆ. ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಅನುಸರಿಸಿದರೆ ಅಪಘಾ ತ ತಡೆಯಬಹುದು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಲಗೇಟ್ ಆಟೋ ಮತ್ತಿತರ ಸರಕು ಸಾಗಿಸುವ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು, ಜನರನ್ನು ಕರೆದೊಯ್ಯ ಬಾರದು ಎಂದು ತಾಕೀತು ಮಾಡಿದರು.
ಬಡಾವಣೆ ಪಿಐ ತಿಮ್ಮಣ್ಣ ಮಾತನಾಡಿ, ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿರಬೇಕು. ಸೀಟು ಸಾಮರ್ಥ್ಯಕ್ಕಿಂತ ಬಸ್, ಪ್ರಯಾಣಿಕರ ಆಟೊಗಳಲ್ಲಿ ಜನರು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಸAಚಾರಿ ಠಾಣೆ ಪಿಎಸ್‌ಐ ವಿಶ್ವನಾಥ್ ಮಾತನಾಡಿ, ಶಾಲಾ ವಾಹನಗಳ ಚಾಲಕರು ಪೊಲೀಸ್ ವೆರಿಫಿಕೇಷನ್ ಮಾಡಿಸಿರಬೇಕು ಎಂದರು.
ಈ ವೇಳೆ ಮಾತನಾಡಿದ ಕೆಲವು ಚಾಲಕರು, ನಗರದ ವಿವಿಧೆಡೆÀ ಸುಗಮ ಸಂಚಾರಕ್ಕೆ ಅಡ್ಡಿ ಆಗುತ್ತಿರುವ ಬಗ್ಗೆ ಪೊಲೀಸರ ಗಮನ ಸೆಳೆದರು. ಭಾರೀ ವಾಹನ ಚಾಲನಾ ಪರವಾನಗಿ ನವೀಕರಣಕ್ಕೆ ಹುಬ್ಬಳ್ಳಿ, ದಾವಣಗೆರೆ ಹಾಗೂ ಮಂಗಳೂರಿಗೆ ಹೋಗಬೇಕಾಗಿದೆ.
ಇದು ತಪ್ಪಬೇಕು, ಪರವಾನಗಿಯನ್ನು ಸ್ಥಳೀಯವಾಗಿಯೇ ನವೀಕರಿಸಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಎಎಸ್‌ಪಿ ಸಾರಿಗೆ ಅಽಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು. ಸಂಚಾರಿ ಠಾಣೆಯ ಪಿಎಸ್‌ಐ ಬಸವರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net