ಕಾಂಗ್ರೆಸ್ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ KPCC

ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಪರಮೇಶ್ವರ ಚೌಕಿ ಮಠದಲ್ಲಿ ಆಯೋಜಿಸಿದ್ದ ಪಕ್ಷ ಸಂಘಟನೆ ಅಭಿಯಾನ ಕಾರ್ಯಕ್ರಮವನ್ನು ವಿ.ಎಸ್. ಉಗ್ರಪ್ಪ ಉದ್ಘಾಟಿಸಿದರು. ಎನ್.ವೈ. ಗೋಪಾಲಕೃಷ್ಣ, ರಿಪುನ್‌ಬೋರ,  ರಮೇಶ್,  ಡಾ. ಯೋಗೇಶ್‌ಬಾಬು ಇತರರು ಇದ್ದರು. KPCC
ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಪರಮೇಶ್ವರ ಚೌಕಿ ಮಠದಲ್ಲಿ ಆಯೋಜಿಸಿದ್ದ ಪಕ್ಷ ಸಂಘಟನೆ ಅಭಿಯಾನ ಕಾರ್ಯಕ್ರಮವನ್ನು ವಿ.ಎಸ್. ಉಗ್ರಪ್ಪ ಉದ್ಘಾಟಿಸಿದರು. ಎನ್.ವೈ. ಗೋಪಾಲಕೃಷ್ಣ, ರಿಪುನ್‌ಬೋರ, ರಮೇಶ್, ಡಾ. ಯೋಗೇಶ್‌ಬಾಬು ಇತರರು ಇದ್ದರು. KPCC
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ವೀಕ್ಷಕ ವಿ.ಎಸ್. ಉಗ್ರಪ್ಪ ಹೇಳಿಕೆ
  • ದೇವಸಮುದ್ರದಲ್ಲಿ ಪಕ್ಷ ಸಂಘಟನೆ ಅಭಿಯಾನ
ಮೊಳಕಾಲ್ಮೂರು: ರಾಜಕಾರಣದಲ್ಲಿ ತನ್ನದೇ ತತ್ವ, ಸಿದ್ಧಾಂತದಡಿ ಸಮಾಜ ಮುಖಿಯಾಗಿ ಗುರುತಿಸಿಕೊಂಡಿರುವ ಕಾಂಗ್ರೇಸ್ ಪಕ್ಷ ದೇಶದಲ್ಲೆಡೆ ಹರಡಿಕೊಂಡಿದ್ದು, ಅದನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ವೀಕ್ಷಕ ವಿ.ಎಸ್. ಉಗ್ರಪ್ಪ ಹೇಳಿದರು. KPCC
ತಾಲೂಕಿನ ದೇವಸಮುದ್ರ ಪರಮೇಶ್ವರ ಚೌಕಿ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷ ಸಂಘಟನೆ ಅಭಿಯಾನದಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ, ಪವಿತ್ರವಾದ ಸಂವಿಧಾನ ತಂದುಕೊಟ್ಟ ಹೆಗ್ಗಳಿಕೆ ಪಕ್ಷಕ್ಕೆ ಸಲ್ಲುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯಕೊಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಪಂಚ ಗ್ಯಾರಂಟಿ ಯೋಜನೆಗಳು ಜನಮನ್ನಣೆ ಪಡೆದುಕೊಂಡಿವೆ. ಪಕ್ಷವನ್ನ ಇನ್ನಷ್ಟು ಸದೃಢಗೊಳಿಸಲು ತಳಮಟ್ಟದಿಂದ ಸಂಘಟಿಸಲು ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ಮೊಳಕಾಲ್ಮೂರು ಕಾಂಗ್ರೇಸ್ ಭದ್ರಕೋಟೆಯಾಗಿದೆ. ಪಕ್ಷದ ಮಾರ್ಗಸೂಚಿಯಂತೆ ಬೂತ್ ಮಟ್ಟದ ಸಂಘಟನೆಗೆ ಒತ್ತುಕೊಡಲಾಗಿದೆ. ಕಾರ್ಯಕರ್ತರು ಪಕ್ಷದ ಬಲವರ್ದನೆಗೆ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಪಾರದರ್ಶಕವಾಗಿ ನಡೆಸಿ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ಕೊಡಲಾಗುವುದು ಎಂದು ತಿಳಿಸಿದರು.
ಎಐಸಿಸಿ ವೀಕ್ಷಕ ರಿಪುನ್‌ಬೋರ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ರಮೇಶ್, ಸೌಗಂದಿತ ರಘುನಾಥ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ. ಯೋಗೇಶ್‌ಬಾಬು, ಸಂಪತ್‌ಕುಮಾರ್, ಸುಬಾನ್ ಸಾಬ್, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್‌ಪೀರ್, ತಾಲೂಕು ಅಧ್ಯಕ್ಷ ಟಿ.ಕೆ. ಕಲೀಂವುಲ್ಲಾ, ನಾಗೇಶ್‌ರೆಡ್ಡಿ, ಎಂ.ಡಿ. ಮಂಜುನಾಥ, ಎಚ್.ಟಿ. ನಾಗರೆಡ್ಡಿ, ಪರಮೇಶ್ವರಪ್ಪ, ಕೆ. ಜಗಲೂರಯ್ಯ, ಎನ್. ಗೋವಿಂದಪ್ಪ, ಜಿ. ಪ್ರಕಾಶ, ಪಟೇಲ್ ಜಿ. ಪಾಪನಾಯಕ, ಡಾ. ಪ್ರೇಮಸುಧಾ, ಜಯಲಕ್ಷ್ಮಮ್ಮ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net